ಪುಟ:ಕ್ರಾಂತಿ ಕಲ್ಯಾಣ.pdf/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪ರ್೪ ಸಂಚಾರವಾಯಿತು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದು ಗದ್ಗದವಾದರೂ ದೃಢಕಂಠದಿಂದ ಭಾವನೆ ಮೊನೆಮೂಡಿ ನುಡಿದರು : “ಲಿಂಗಜಂಗಮ, ಜಂಗಮಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ, ನಿಜಗುರು ಬಸವಣ್ಣಾ ! ಪ್ರಸಾದಕಾಯ, ಕಾಯಪ್ರಸಾದವೆಂಬುದ | ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ, ಮುಂದುವರಿದೆಯಯ್ಯ ಬಸವಣ್ಣಾ ! ಲಿಂಗಪ್ರಾಣ, ಪ್ರಾಣಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಟಾಷ್ಯವ ಮಾಡಿ, ಎನ್ನ ನಿನ್ನಂತೆ ಮಾಡಿ, ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾತತ್ವದಲ್ಲಿ ಲಯವ ಮಾಡಿ, ನಿರ್ವಯಲಾಗಿ, ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕು ಮಿಕ್ಕ ಶೇಷವನಿಕ್ಕಿ ಆಗುಮಾಡಿ ನಿನ್ನಂತರಂಗದಲ್ಲಿ ಅವೈ ನಾಗಾಯಿಯನಿಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕೊರಗಿತ್ತಯ್ಯ ಸಂಗನ ಬಸವಣ್ಣಾ ! ಕೂಡಲ ಚೆನ್ನಸಂಗಯ್ಯನಿಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನ ಬಸವಣ್ಣಾ !** ಚೆನ್ನಬಸವಣ್ಣನವರ ನುಡಿಗಳು ನೆರೆದಿದ್ದ ಶರಣರಿಗೆ ಚೈತನ್ಯ ಕೊಟ್ಟವು. ಗರಿಕೆಯ ಮೊನೆಯಲ್ಲಿ ನಿಂತ ಮಂಜಿನ ಹನಿಯಂತೆ ಕಂಬನಿ ಕಣ್ಣೆವೆಯಲ್ಲಿ ನಿಂತಿತು. ಶರಣನೊಬ್ಬನು, “ಬಸವಣ್ಣನವರ ಬಗೆಗೆ ಅಕ್ಕನಾಗಾಯಿಯವರ ಪರೋಕ್ಷ ವಿನಯವನ್ನು ಕೇಳಲೆಳೆಸುತ್ತೇವೆ,” ಎಂದು ಬಿನ್ನವಿಸಿಕೊಂಡನು. ನಾಗಲಾಂಬೆ ಹೇಳಿದಳು : “ನೀವು ಮರ್ತ್ಯಕ್ಕೆ ಬಂದು ನಿಂದರೆ, ಭಕ್ತಿಯ ಬೆಳವಿಗೆ ದೆಸೆ ದೆಸೆಗೆಲ್ಲಾ ಪಸರಿಸಿತಯ್ಯ, ಬಸವಣ್ಣಾ ! ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ ಬೆಳವಳಿಗೆಯ ಘನವನಾರು ಬಲ್ಲರೋ, ಅಣ್ಣಾ !

  • ಶೂ, ಸಂ. ಪುಟ ೪೬೫-೪೬೬