ಪುಟ:ಕ್ರಾಂತಿ ಕಲ್ಯಾಣ.pdf/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫ ಕ್ರಾಂತಿ ಕಲ್ಯಾಣ ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದರೆ, ಭಕ್ತಿ ನಿಮ್ಮೊಡನೆ ಹೋಯಿತ್ತಯ್ಯ ! ನಿಮ್ಮೊಡನೆ ಸದಾಚಾರ ಹೋಯಿತ್ತಯ್ಯ ! ನಿಮ್ಮೊಡನೆ ಅಸಂಖ್ಯಾತರು ಹೋದರು, ಅಣ್ಣಾ ! ಮರ್ತ್ಯ ಲೋಕದ ಮಹಾಮನೆ ಶೂನ್ಯವಾಯಿತ್ತು, ಬಸವಣ್ಣಾ ! ಎನ್ನನೊಯ್ಯದೆ ಹೋದೆಯಲ್ಲಾ, ಪಂಚ ಪುರುಷ ಮೂರ್ತಿ ಬಸವಣ್ಣಾ ! ಬಸವಣ್ಣಪ್ರಿಯ ಚೆನ್ನ ಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯಲ್ಲಾ, ಸಂಗನ ಬಸವಣ್ಣಾ !”* ಚೆನ್ನಬಸವಣ್ಣನಾಗಲಾಂಬೆಯರ ನುಡಿಗಳಿಗೆ ಮುಡಿಯಿಟ್ಟಂತೆ ಮಾಚಿದೇವರು ಹೇಳಿದರು : “ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣಾ ! ಪ್ರಾಣ ನಿಃಪ್ರಾಣವಾಯಿತ್ತಲ್ಲಾ, ಬಸವಣ್ಣಾ ! ಲಿಂಗಜಂಗಮದ ಮಾಟಕೂಟ ಸಮಾಪ್ತಿಯಾಯಿತಲ್ಲಾ, ಬಸವಣ್ಣಾ ! ನಿಃಶಬ್ದ ವೇದ್ಯವಾದೆಯಲ್ಲಾ, ಬಸವಣ್ಣಾ ? ಕಲಿದೇವರ ದೇವನ ಹೃದಯಕಮಲದ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನ ಬಸವಣ್ಣಾ !” ಶರಣರಲ್ಲ ಉಗ್ಗಡಿಸಿದರು, “ಹರ ಹರ ಮಹಾದೇವ ! ಉಘ ಉಫ್! ಬಸವೇಶ | ಬಸವ ಪ್ರಭು | ಬಸವರಾಜ ಉಘ !” ಎಂದು. ನಾಗಲಾಂಬೆ ಪುನಃ ಪೂಜೆಯ ಗೂಡಾರಕ್ಕೆ ಬಂದಾಗ ಪೂಜೆಗೆ ಕುಳಿತಿದ್ದ ನೀಲಲೋಚನೆಯ ಬೆನ್ನು ಹಿಡಿದು ಆಸರೆಯಾಗಿ ಕುಳಿತಿದ್ದಳು ಗಂಗಾಂಬಿಕೆ. ನಾಲ್ಕಾರು ಮಂದಿ ಶರಣೆಯರು ಸುತ್ತನಿಂತು ಕಣ್ಣೀರಿಡುತ್ತಿದ್ದರು. ಗಂಗಾಂಬಿಕೆಯ ಬಳಿ ಕುಳಿತು ನಾಗಲಾಂಬೆ, “ಬಸವೇಶ ನಮ್ಮನ್ನಗಲಿದನು, ಗಂಗಾ, ಅಪಣ್ಣ ಸಂಗಮದಿಂದ ಹಿಂದಿರುಗಿದನು,” ಎಂದಳು. “ನೀಲಾ ಹೇಳಿದಳು, ಅಕ್ಕಾ ! ಎಂತಹ ಭಾಗ್ಯಹೀನರು ನಾವು !” ಎಂದು ಗಂಗಾಂಬಿಕೆ ಕಣ್ಣೀರಿಟ್ಟಳು.

  • ಶೂನ್ಯ ಸಂಪಾದನೆ, ಪುಟ ೪೬೪ ಶೂ, ಸಂ. ಪುಟ ೪೬೮