ಪುಟ:ಕ್ರಾಂತಿ ಕಲ್ಯಾಣ.pdf/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೫೩ ಬರುತ್ತಿದ್ದಾರೆ, ಅಣ್ಣನವರೆ. ಅವನ ಮಂಚೂಣಿ ದಳಗಳು ಇಲ್ಲಿಂದ ಸುಮಾರು ಎರಡು ಹರಿದಾರಿ ದೂರದಲ್ಲಿವೆ. ಇಂದು ಸಂಜೆಗೆ ಅವು ತಂಗಡಿಯ ಗಡಿ ಮುಟ್ಟುವುವು.” “ಸೈನ್ಯ ಎಷ್ಟಿದೆ ಎಂದು ತಿಳಿದಿದೆಯೆ ?” ಕೆಲವು ಕ್ಷಣಗಳು ಯೋಚಿಸುತ್ತಿದ್ದ ಮಾಚಿದೇವರು ಕೇಳಿದರು. “ಹತ್ತು ಸಾವಿರ ಎಂದು ಜನರು ಹೇಳುತ್ತಾರೆ. ನನಗೆ ತಿಳಿದಮಟ್ಟಿಗೆ ಸುಮಾರು ಎರಡು ಸಾವಿರ ಪದಾತಿ, ಐನೂರು ಅಶ್ವದಳ, ಇನ್ನೂರು ರಥಗಳು.” ಮಾಚಿದೇವರ ಹೃದಯ ಕಂಪಿಸಿತು. ಇದರಲ್ಲಿ ನಾಲ್ಕನೆಯ ಒಂದು ಪಾಲು ಸೈನ್ಯವಿದ್ದರೂ ನಮ್ಮಗಣಾಚಾರಿ ಯೋಧದಳಗಳು ಧೂಳೀಪಟವಾಗುವವು. ಕಲಿ ದೇವರ ದೇವನೇ ನಮ್ಮನ್ನು ರಕ್ಷಿಸಬೇಕು. ಪ್ರವಾಹ ಇಳಿಯಲಿ, ಇಳಿಯದಿರಲಿ ನದಿಯನ್ನು ದಾಟಿ ಆಚಿನ ದಡ ಸೇರುವುದೊಂದೇ ನಾವು ಉಳಿಯುವ ಉಪಾಯ.” ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ತಮ್ಮ ಆಜ್ಞೆಗಾಗಿ ಕಾದಿರುವಂತೆ ಅಂಬಿಗರ ನಾಯಕನಿಗೆ ಹೇಳಿ, ಕಲ್ಯಾಣದಿಂದ ಬಂದ ಶರಣನನ್ನು ಕರೆದುಕೊಂಡು ಚೆನ್ನಬಸವಣ್ಣನವರ ಬಳಿಗೆ ಹೋದರು. ಚೆನ್ನಬಸವಣ್ಣನವರು ತಮ್ಮ ಪ್ರಾತಃಕೃತ್ಯಗಳನ್ನು ಮುಗಿಸಿಕೊಂಡು ಮಾಚಿ ದೇವರಿಗಾಗಿ ಕಾಯುತ್ತಿದ್ದರು. “ನಮ್ಮ ಅಗ್ನಿಪರೀಕ್ಷೆ ಸನ್ನಿಹಿತವಾಗಿದೆ, ಅಣ್ಣನವರೆ,” ಎಂದು ಪ್ರಾರಂಭಿಸಿ ಮಾಚಿದೇವರು ಕಲ್ಯಾಣದಿಂದ ಬಂದ ಸುದ್ದಿಯನ್ನು ವಿವರಿಸಿದರು. “ಹಾಗಾದರೆ ಈ ವಿಷಮ ಸಂಕಟದಿಂದ ನಾವು ಉದ್ದಾರವಾಗುವುದು ಹೇಗೆ?” ಎಂದು ಚೆನ್ನಬಸವಣ್ಣನವರು ನುಡಿದರು. “ಕಲಿದೇವರ ದೇವನು ದಾರಿ ತೋರಿಸುವನೆಂದು ನನಗೆ ವಿಶ್ವಾಸವಿದೆ. ನಾವು ಕೂಡಲೆ ಶಿಬಿರವನ್ನು ಬಿಡಬೇಕಾಗಬಹುದು. ಗಣಾಚಾರಿ ದಳದ ನಾಯಕನಿಗೆ ಹೇಳಿ ಕಳುಹಿಸಿದ್ದೇನೆ. ಅವನು ಬಂದ ಮೇಲೆ ಮುಂದಿನ ಕಾರ್ಯವಿಧಾನವನ್ನು ನಿರ್ಧರಿಸಬೇಕು,” ಎಂದರು ಮಾಚಿದೇವರು. ಯಾತ್ರಾದಳದ ಪ್ರವಾಸ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಾಚಿದೇವರು ವಹಿಸಿಕೊಂಡಿದ್ದರಿಂದ ಚೆನ್ನಬಸವಣ್ಣನವರು ಹೆಚ್ಚಿನ ವಿವರಗಳನ್ನು ಕೇಳಲು ಹೋಗಲಿಲ್ಲ. ತುಸು ಹೊತ್ತಿನ ಮೇಲೆ ಮಾಚಿದೇವರು ಬದಲಿಸಿದ ಕಂಠದಿಂದ, “ಸಕಲೇಶ ಮಾದರಸರ ಪರೋಕ್ಷದಲ್ಲಿ ನೀವು ಅನುಭವ ಮಂಟಪದ ಅಧ್ಯಕ್ಷರು : ಶರಣರ