ಪುಟ:ಕ್ರಾಂತಿ ಕಲ್ಯಾಣ.pdf/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೫೫ ಅಚಾತುರ್ಯ ಅವಿವೇಕಗಳ ಫಲವಾಗಿ ಈಗ ಬಿಜ್ಜಳನ ಕೊಲೆಯ ಮಿಥ್ಯಾಪವಾದ ಶರಣರ ಮೇಲೆ ಬಂದಿದೆ. ಶರಣಧರ್ಮದ ವಿರೋಧಿಯಾದ ಮಾಧವ ನಾಯಕನು ಈ ಅಪವಾದ ಹರಡಲು ಸರ್ವಪ್ರಯತ್ನ ಮಾಡುತ್ತಿದ್ದಾನೆ. ನನ್ನ ಅಂತರಾತ್ಮನಿಗೆ ವಿರುದ್ಧವಾಗಿ ನಾನು ಈ ಕಾರ್ಯಗಳನ್ನು ಮಾಡಿದೆನೇ? ಅಥವಾ ನನ್ನ ಹೃದಯದಲ್ಲಿ ಇಂಬಿಟ್ಟುಕೊಂಡ ಕಲಿ ದೇವರ ದೇವನೇ ನನ್ನಿಂದ ಈ ಕಾರ್ಯಗಳನ್ನು ಮಾಡಿಸಿದನೇ? ಎಂಬುದನ್ನು ನಿರ್ಧರಿಸಲೂ ನಾನು ಅಸಮರ್ಥನಾಗಿದ್ದೇನೆ. ನೀವು ಶರಣಧರ್ಮದ ಜ್ಞಾನನಿಧಿ. ಇದರಲ್ಲಿ ನನ್ನ ಅಪರಾಧವೇನೆಂಬುದನ್ನು ಪರಿಶೀಲಿಸಿ ನಿಷ್ಪಕ್ಷಪಾತವಾಗಿ ಪ್ರಾಯಶ್ಚಿತ್ತ ವಿಧಿಸಬೇಕಾಗಿ ಬೇಡುತ್ತೇನೆ.” ಚೆನ್ನಬಸವಣ್ಣನವರು ಅಪ್ರತಿಭರಾದರು. ಮಾಚೀದೇವರಂತಹ ಹಿರಿಯ ಶರಣರ ತಪ್ಪುಗಳನ್ನು ನಿರ್ಧರಿಸುವ ವಿವೇಕ ನನಗಿದೆಯೆ? ಎಂದು ಶಂಕಿಸಿತು ಅವರ ಮನಸ್ಸು, ಹೃದಯ. ಕೊನೆಗೆ ಅವರು ಹೇಳಿದರು : “ನೀವು ಹಿರಿಯ ಅನುಭಾವಿಗಳು, ಮಾಚಿದೇವಯ್ಯನವರೆ. ಬಸವಣ್ಣನವರ ನಿರ್ವಾಸನದ ಅನಂತರ, ಅನಾಥವಾಗಿದ್ದ ಅನುಭವ ಮಂಟಪ ನಿಮ್ಮ ಶಕ್ತಿ ಸಾಮರ್ಥ್ಯಗಳಿಂದ ಕೆಲವು ದಿನಗಳಾದರೂ ತಲೆಯೆತ್ತಿ ನಿಲ್ಲುವಂತಾಯಿತು. ಮಧುವರಸಾದಿಗಳನ್ನು ಉಳಿಸಲು ನೀವು ಮಾಡಿದ ಪ್ರಯತ್ನವನ್ನು ಶರಣರು ಎಂದೂ ಮರೆಯುವುದಿಲ್ಲ. ನಮ್ಮವಲಸೆಯ ನಿರ್ಧಾರ ಕಾರ್ಯಗತವಾದದ್ದು ನಿಮ್ಮ ಸಲಹೆ ಸಹಕಾರ ಸಾಹಸಗಳಿಂದ, ನಿಮ್ಮ ಒಪ್ಪು ತಪ್ಪುಗಳನ್ನು ನಿರ್ಧರಿಸಲು ನಾನು ಅರ್ಹನಲ್ಲ. ಆದರೂ ಸಮಯ ಧರ್ಮಕ್ಕೆ ಬದ್ದನಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. “ಬಿಜ್ಜಳನ ಕೊಲೆಯಲ್ಲಿ ಮುಗಿದ ಒಳಸಂಚಿಗೆ ನೀವು ಉದ್ದೇಶಪೂರ್ವಕವಾಗಿ ಸಹಾಯ ಮಾಡಲಿಲ್ಲವೆಂಬುದು ನಿಮ್ಮ ವಿವರಣೆಯಿಂದ ವ್ಯಕ್ತವಾಗಿದೆ. ಐನೂರ್ವರ ಮಹಾಸಂಘದ ಸದಸ್ಯರಾಗಿ ನೀವು ಮಾಡಿದ ಕಾರ್ಯಗಳು ನಿಮಗೂ ನಿಮ್ಮ ಅಂತರಾತ್ಮನಿಗೂ ಸಂಬಂಧಿಸಿದ ವೈಯಕ್ತಿಕ ವಿಚಾರ. ಅದರ ಒಪ್ಪು ತಪ್ಪುಗಳನ್ನು ನಿಮ್ಮ ಇಷ್ಟದೈವ ಕಲಿದೇವರ ದೇವನು ನಿರ್ಧರಿಸಲಿ. ಶರಣಧರ್ಮ ಅದರಲ್ಲಿ ಪ್ರವೇಶಿಸುವುದಿಲ್ಲ. ಐನೂರ್ವರ ಮಹಾಸಂಘ, ಅದರ ಕ್ರಿಯಾರೂಪವಾದ ವೀರಬಣಂಜು ಸಂಘ, ಈ ಎರಡು ಸಂಸ್ಥೆಗಳು ಮೊದಲಿಂದ ಶರಣಧರ್ಮಕ್ಕೆ ಪ್ರೋತ್ಸಾಹವಿತ್ತಿವೆ ; ಶರಣರಿಗೆ ಸಹಾಯ ಮಾಡಿವೆ. ರಾಜಕೀಯ ಸಂಸ್ಥೆಗಳೆಂಬ ಕಾರಣದಿಂದ ಬಸವಣ್ಣನವರು ಅವುಗಳಿಂದ ಪ್ರತ್ಯೇಕವಾಗಿ ನಿಂತರು. ಆದರೆ ಶರಣರಿಗೆ ಸಂಸ್ಥೆಗಳ ಸಂಬಂಧವನ್ನು ನಿರಾಕರಿಸಲಿಲ್ಲ.