ಪುಟ:ಕ್ರಾಂತಿ ಕಲ್ಯಾಣ.pdf/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ “ನಾವು ಕಲ್ಯಾಣವನ್ನು ಬಿಟ್ಟಿದ್ದು ಬಿಜ್ಜಳನ ಕ್ರೌರ್ಯ ದಬ್ಬಾಳಿಕೆಗಳಿಂದ ತಪ್ಪಿಸಿಕೊಳ್ಳುವ ಪರಮೋದ್ದೇಶದಿಂದಲೇ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಹಿಂಸೆಯನ್ನು ಪ್ರತಿಹಿಂಸೆಯಿಂದ ಎದುರಿಸುವುದು ನಮ್ಮ ಉದ್ದೇಶವಾಗಿದ್ದಿದ್ದರೆ ನಾವು ಕಲ್ಯಾಣವನ್ನು ಬಿಡುವ ಅಗತ್ಯವೇ ಉಂಟಾಗುತ್ತಿರಲಿಲ್ಲ.” “ಪರವಾದಿಗಳು ಇದುವರೆಗೆ ನಮ್ಮ ಮೇಲೆ ಎಲ್ಲ ರೀತಿಯ ಅಪವಾದಗಳನ್ನೂ ಹೊರಿಸಿದ್ದಾರೆ. ಅವುಗಳಿಂದ ಅವರಿಗಾದ ಆಗೇನು? ನಮಗಾದ ಚೇಗೇನು? ಅಂತರಂಗ ಆತ್ಮಶುದ್ದಿ ಇರುವವರೆಗೂ ಅಪವಾದಗಳಿಗೆ ನಾವೇಕೆ ಹೆದರಬೇಕು? ನೀವು ಈ ವಿಚಾರವನ್ನು ಮರೆಯಬೇಕಾಗಿ ಬೇಡುತ್ತೇನೆ.” ಚೆನ್ನಬಸವಣ್ಣನವರ ಭರವಸೆಯ ನುಡಿಗಳಿಂದ ಮಾಚಿದೇವರ ಸಂದೇಹ ಪರಿಹಾರವಾಗಲಿಲ್ಲ. “ನನ್ನಿಂದ ಅಪರಾಧವಾಗಿದೆ. ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಹೋದರೆ ಕಲಿದೇವರ ದೇವನು ಒಪ್ಪುವುದಿಲ್ಲ,” ಎಂಬ ಚಿಂತೆ ಅವರ ಮನಸ್ಸಿನಲ್ಲಿ ಉಳಿಯಿತು. ಚೆನ್ನಬಸವಣ್ಣನವರಿಗೆ ಏನು ಹೇಳುವುದು? ಎಂದು ಅವರು ಯೋಚಿಸುತ್ತಿದ್ದಂತೆ ಗಣಾಚಾರಿ ದಳದ ನಾಯಕನನ್ನು ಸಂಗಡ ಕರೆದುಕೊಂಡು ಕಲ್ಯಾಣದ ಶರಣನು ಅಲ್ಲಿಗೆ ಬಂದನು.

  • ಮಾಚಿದೇವರು ನಾಯಕನಿಗೆ ಪರಿಸ್ಥಿತಿಯನ್ನು ವಿವರಿಸಿ, “ಇಂದು ಸಂಜೆಯೊಳಗಾಗಿ ತಡಸದ ಹಾಯ್ದಡದಿಂದ ನಾವು ಕೃಷ್ಣಯನ್ನು ದಾಟಬೇಕು. ಮಾಧವ ನಾಯಕನ ಮುಂಚೂಣಿ ದಳಗಳು ಅಷ್ಟರಲ್ಲಿ ನಮ್ಮ ಮೇಲೆ ಬಿದ್ದರೆ ನಿಮ್ಮಿಂದ ತಡೆಯುವುದು ಸಾಧ್ಯವೆ?” ಎಂದು ಕೇಳಿದರು.

“ಮಾಧವ ನಾಯಕನ ಸೈನ್ಯದೊಡನೆ ಹೋರಾಡಲು ನಮ್ಮ ಯೋಧರು ಆತುರರಾಗಿದ್ದಾರೆ, ಅಣ್ಣನವರೆ. ಆದರೆ ಸುಸಜ್ಜಿತವಾದ ಆ ಬಹುಸಂಖ್ಯಾತ ಸೈನ್ಯದ ಎದುರಿಗೆ ನಿಂತು ಹೋರಾಡುವುದು ನಮಗೆ ಸಾಧ್ಯವಲ್ಲ. ಅದಕ್ಕಾಗಿ ನಾನೊಂದು ಉಪಾಯ ಯೋಚಿಸಿದ್ದೇನೆ,” -ಎಂದು ಗಣಾಚಾರಿ ನಾಯಕನು ಹೇಳಿದನು. “ಉಪಾಯವೇನು?” ನಾಯಕನು ಹೇಳಿದನು : “ತಂಗಡಿಗೆ ಬರುವ ಕಣಿವೆ ಮತ್ತು ಅದರ ಸುತ್ತು ಮುತ್ತಿನ ಗುಡ್ಡಗಳ ಮೇಲೆ ನಮ್ಮ ಯೋಧದಳಗಳು ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡಿವೆ. ಆ ಸ್ಥಳಗಳು ನಮ್ಮ ವಶದಲ್ಲಿರುವವರೆಗೆ ಶತ್ರು ಸೈನ್ಯ ಎಷ್ಟೇ ಬಲಿಷ್ಠವಾಗಿರಲಿ, ಕಣಿವೆಯನ್ನು ದಾಟಿ ಬಂದು ಶಿಬಿರದ ಮೇಲೆ ಆಕ್ರಮಣ