ಪುಟ:ಕ್ರಾಂತಿ ಕಲ್ಯಾಣ.pdf/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫೮ ಕ್ರಾಂತಿ ಕಲ್ಯಾಣ ಅಗತ್ಯವಾದ ಪಾತ್ರೆ ಪದಾರ್ಥ ಬಟ್ಟೆ ಮುಂತಾದವುಗಳನ್ನು ಚೀಲಗಳಲ್ಲಿ ತುಂಬಿ ಎತ್ತುಗಳ ಮೇಲೆ ಹೇರಿದರು. ಸಣ್ಣ ಗಂಟು ಮೂಟೆಗಳನ್ನು ತಲೆಯ ಮೇಲೆ ಹೊತ್ತರು. ಗಣಾಚಾರಿ ದಳದ ಯೋಧರು ತೋರಿಸಿದ ನದೀ ತೀರದ ಕಾಲುದಾರಿಯಲ್ಲಿ ಶರಣರು ತಂಡತಂಡವಾಗಿ ತಡಸದ ಹಾಯ್ದಡಕ್ಕೆ ಹೊರಟರು. ಚೆನ್ನಬಸವಣ್ಣನವರು, ಶೂಲದ ಬೊಮ್ಮಯ್ಯ, ಕೂಗಿನ ಮಾರಿತಂದೆ ಮುಂತಾದ ಹಿರಿಯ ಶರಣರ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ನಡೆಯಿತು. ಮಾಚಿದೇವರು ಮೊದಲೆ ತಡಸಕ್ಕೆ ಹೋಗಿ, ಶರಣರೆಲ್ಲ ಗೊಂದಲವಿಲ್ಲದೆ ಸುರಕ್ಷಿತವಾಗಿ ನದಿಯನ್ನು ದಾಟಲು ಏರ್ಪಡಿಸಿದರು. ಮೊದಲು ಗಣಾಚಾರಿ ಯೋಧರ ರಕ್ಷಕದಳ, ಅವರ ತರುವಾಯ ವೃದ್ದರಾದ ಜಂಗಮರು ಮತ್ತು ಶರಣೆಯರು, ಕೊನೆಯದಾಗಿ ಶರಣರು, ಈ ರೀತಿ ಅವರು ಕೃಷೆಯನ್ನು ದಾಟಿದರು. ಎತ್ತು ಮತ್ತು ಹೇರುಗಳನ್ನು ತೆಪ್ಪಗಳ ಮೇಲೆ ಸಾಗಿಸಿದರು. ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾದ ಈ ಕಾರ್ಯ ಸಂಜೆಗೆ ಮುಗಿಯಿತು.

  • ಆಮೇಲೆ ಮಾಚಿದೇವರು ತಂಗಡಿಗೆ ಹಿಂದಿರುಗಿ ಅಲ್ಲಿ ಅವರಿಗಾಗಿ ಕಾದಿದ್ದ ಚೆನ್ನಬಸವಣ್ಣ, ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ, ಮುಂತಾದವರನ್ನು ಸೇರಿಕೊಂಡರು. ಗಣಾಚಾರಿ ಯೋಧರ ಸಂಗಡಿದ್ದು ಹೋರಾಟದಲ್ಲಿ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು.

ಸೂರ್ಯನು ಅಸ್ತನಾಗುತ್ತಿದ್ದಂತೆ ಶತೃಸೈನ್ಯದ ಮುಂಚೂಣಿ ಪಡೆಗಳು ತಂಗಡಿಯ ಹತ್ತಿರ ಬಂದವು. ಶರಣರ ಯಾತ್ರಾದಳವನ್ನು ನಾಶಮಾಡಲು ಪಣತೊಟ್ಟಿದ್ದ ಮಾಧವ ನಾಯಕನು ಅದರ ಸಂಗಡಿದ್ದನು. ಮೊದಲೇ ಅಲ್ಲಿಗೆ ಬಂದಿದ್ದ ಗೂಢಚಾರರು, ಪ್ರವಾಹ ಇಳಿಯುತ್ತಿದೆಯೆಂದೂ, ಈ ರಾತ್ರಿಯೋ ನಾಳೆಯೋ ನದಿದಾಟಲು ಶರಣರು ಪ್ರಯತ್ನಿಸಬಹುದೆಂದೂ ವರದಿ ಮಾಡಿದ್ದರು. ತಡಸದ ಹಾಯ್ದಡದಿಂದ ಸಂಜೆಗೆ ಮೊದಲೆ ಶರಣರು ಕೃಷ್ಣಯ ಆಚಿನ ದಡವನ್ನು ಸೇರಿದ್ದರೆಂಬುದು ಅವರಿಗೆ ತಿಳಿಯದು. ಈ ಶಿಬಿರದಲ್ಲಿ ಎಲ್ಲ ಕಡೆ ದೀಪಗಳು ಉರಿಯುತ್ತಿರುವುದನ್ನು ಕಂಡಾಗ, ಸೈನ್ಯ ಹಿಂದಟ್ಟಿ ಬರುತ್ತಿರುವ ವಿಚಾರ ಶರಣರಿಗೆ ತಿಳಿದಿಲ್ಲವೆಂದೂ, ಹಠಾತ್ತಾಗಿ ಆಕ್ರಮಣ ಮಾಡುವುದರಿಂದ ಶರಣರನ್ನು ನಾಶಮಾಡಬಹುದೆಂದೂ ಭಾವಿಸಿ ಮಾಧವ ನಾಯಕನು ಆಕ್ರಮಣದ ಆಜ್ಞೆಯನ್ನು ಪ್ರಚಾರ ಮಾಡಿದನು. ಅರ್ಧ ಗಳಿಗೆಯೊಳಗಾಗಿ ಇನ್ನೂರು ರಥಗಳೂ, ಐನೂರು ಮಂದಿ ರಾಹುತರ ದೊಡ್ಡ ಅಶ್ವದಳವೂ ಆಕ್ರಮಣಕ್ಕೆ ಸಿದ್ಧವಾಗಿ ಕಣಿವೆಯ ಮುಖದಲ್ಲಿ