ಪುಟ:ಕ್ರಾಂತಿ ಕಲ್ಯಾಣ.pdf/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೬೧ ಚಿ “ಆ ಭಯವಿಲ್ಲ, ಅಣ್ಣನವರ, ಪ್ರವಾಹ ಪುನಃ ಹೆಚ್ಚುತ್ತಿದೆ. ಇನ್ನೆರಡು ದಿನಗಳು ನದಿಯನ್ನು ದಾಟುವುದು ಯಾರಿಗೂ ಸಾಧ್ಯವಲ್ಲ.” -ಗಣಾಚಾರಿ ನಾಯಕನು ಉತ್ತರಿಸಿದನು. “ಕಲಿದೇವರ ದೇವನು ಶರಣರನ್ನು ರಕ್ಷಿಸಿದನು, ನಾಯಕ. ಈ ರಾತ್ರಿಯೇ ಈ ಸ್ಥಳವನ್ನು ಬಿಡುವುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ತೆಪ್ಪ ದೋಣಿಗಳನ್ನು ತರುವಂತೆ ಅಂಬಿಗರಿಗೆ ಹೇಳಿದ್ದೆ. ಈಗ ಆ ಆಸೆ ಮಣ್ಣುಗೂಡಿತು.” -ವಿಷಣ್ಣತೆಯಿಂದ ನುಡಿದರು ಮಾಚಿದೇವರು. ತುಸು ಹೊತ್ತಿನ ಮೇಲೆ ಗಣಾಚಾರಿ ನಾಯಕನು ನಿಟ್ಟುಸಿರಿಟ್ಟು ಹೇಳಿದನು: “ಕಣಿವೆಗೆ ನುಗ್ಗಿ ಬಂದ ಶತೃ ರಾಹುತರು ನಮ್ಮ ಬಲೆಯಲ್ಲಿ ಸಿಕ್ಕು ಹತರಾದಂತೆ ಈಗ ನಾವು ಶತೃಗಳ ಪಂಜರದಲ್ಲಿ ಸಿಕ್ಕಿ ಬಿದ್ದಿದ್ದೇವೆ, ಅಣ್ಣನವರೆ. ನದಿಯ ಹೊರತಾಗಿ ಉಳಿದೆಲ್ಲ ಕಡೆ ಶತೃ ಸೈನ್ಯ ನಮ್ಮನ್ನು ಸುತ್ತುಗಟ್ಟಿದೆ. ಬೆಳಕು ಹರಿಯುತ್ತಲೆ ಸೈನ್ಯ ನಮ್ಮ ಮೇಲೆ ಬೀಳುತ್ತದೆ. ನದಿ ದಾಟಿ ತಪ್ಪಿಸಿಕೊಳ್ಳಲು ಪ್ರವಾಹ ಅಡ್ಡಿಯಾಗಿದೆ. ಹೋರಾಡಿ ಶತೃವನ್ನು ಸೋಲಿಸುವುದು, ಇಲ್ಲವೇ ಹತರಾಗಿ ವೀರಸ್ವರ್ಗ ಪಡೆಯುವುದು, ಇವೆರಡೇ ಈಗ ನಮಗುಳಿದಿರುವ ಮಾರ್ಗ” ನಾಯಕನ ನಿರಾಶೆಯ ನುಡಿ ಕೇಳಿ ಮಾಚಿದೇವರ ಚೈತನ್ಯ ಎಚ್ಚೆತ್ತಿತು. ನಸು ನಕ್ಕು ಅವರು ಹೇಳಿದರು : ನಿರಾಶರಾಗುವ ಕಾರಣವಿಲ್ಲ, ತಮ್ಮ ಇಂದು ಮುಂಜಾವಿಯಲ್ಲಿ ಶರಣರ ಯಾತ್ರಾದಳವನ್ನು ನದಿ ದಾಟಿಸುವೆವೆಂಬ ಭರವಸೆ ನಮಗಿರಲಿಲ್ಲ. ಕಲಿದೇವರ ದೇವನ ದಯೆಯಿಂದ ಆ ಕಾರ್ಯ ಸುಗಮವಾಗಿ ನಡೆಯಿತು. ನಮ್ಮನ್ನು ನಾಶಮಾಡಲು ಬಂದ ರಾಹುತರು ದೀಪಕ್ಕೆರಗಿದ ಚಿಟ್ಟೆಗಳಂತೆ ತಮ್ಮ ಅವಿವೇಕದಿಂದ ತಾವೇ ನಾಶವಾದರು. ಇದುವರೆಗೆ ನಮ್ಮನ್ನು ರಕ್ಷಿಸಿದ ಆ ಅದೃಷ್ಟ ಶಕ್ತಿ ಮುಂದೆಯೂ ನಮ್ಮನ್ನು ರಕ್ಷಿಸುವುದು. ನಾಳಿನ ಯುದ್ದದಲ್ಲಿ ನನ್ನ ಎರಡು ನಿಬಂಧನೆಗಳಿವೆ. ಅದರಂತೆ ನೀನು ನಡೆಯಬೇಕು. ನಾಯಕನು ನಡೆಯುವುದಾಗಿ ಒಪ್ಪಿಕೊಂಡನು. ಮಾಚಿದೇವರು ಹೇಳಿದರು : “ನಾಳಿನ ದಿನ ನಾವು ಮಾಧವ ನಾಯಕನ ಆಕ್ರಮಣಕ್ಕಾಗಿ ಎದುರು ನೋಡದೆ ಬೆಳಕು ಹರಿಯುವ ಮುನ್ನ ನಾವೇ ಶತೃ ಶಿಬಿರದ ಮೇಲೆ ಆಕ್ರಮಣ ನಡೆಸಬೇಕು. ಇದು ನಿನಗೊಪ್ಪಿಗೆಯಾದರೆ ನನ್ನ ಎರಡನೆಯ ನಿಬಂಧನೆಯನ್ನು ಹೇಳುತ್ತೇನೆ.” “ನಾನು ಕೂಡ ಅದನ್ನೇ ಯೋಚಿಸುತ್ತಿದ್ದೆ, ಅಣ್ಣನವರೆ. ಶತೃವಿಗೆ ವಿಶ್ರಮಿಸಿಕೊಳ್ಳುವ ಅವಕಾಶವನ್ನೂ ಕೊಡದೆ ನಾವೇ ಆಕ್ರಮಣ ಮಾಡುವುದರಿಂದ