ಪುಟ:ಕ್ರಾಂತಿ ಕಲ್ಯಾಣ.pdf/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೭೧ ಪಾನೀಯಗಳನ್ನು ಹಿಡಿದು ನಿಂತಿದ್ದ ದಾಸಿಯರ ಸೇವೆ, ಈ ಎಲ್ಲ ಉಪಚಾರಗಳಿಂದ ಕ್ರಮಿತನ ಉದ್ರೇಕ ಶಾಂತವಾಗುತ್ತಿದ್ದಂತೆ ಸೋಮೇಶ್ವರನು, “ಮಹಾದ್ವಾರದಲ್ಲಿ ನನ್ನ ಸ್ವಾಗತಕ್ಕಾಗಿ ಸೇರಿದ್ದ ನಾಗರಿಕರಿಂದ ನಗರದ ದುರ್ಘಟನೆಯನ್ನು ತಿಳಿದೆ. ಅದರ ಕಾರಣರಾರೆಂಬುದನ್ನೂ ಅವರು ಸ್ಪಷ್ಟಪಡಿಸಿದರು. ಆದರೆ ಒಂದು ಸಾರಿಯಾದರೂ ಅವರು ನಿಮ್ಮ ಹೆಸರು ಹೇಳಲಿಲ್ಲ. ಚಿಂತೆಗೀಡಾದ ನಿಮ್ಮ ಮನಸ್ಸು ಇಲ್ಲದುದನ್ನು ಕಲ್ಪಿಸಿಕೊಳ್ಳುತ್ತಿದೆ,” ಎಂದು ಸಮಾಧಾನ ಪಡಿಸಿದನು. ಕ್ರಮಿತನು ಕೊಂಚ ಹೊತ್ತು ಮೌನವಾಗಿ ಕುಳಿತಿದ್ದನು. ಬಳಿಕ ತಲೆಯೆತ್ತಿ ಪಶ್ಚಾತ್ತಾಪದ ದೈನ್ಯಕಂಠದಿಂದ, “ಕೂಡಲ ಸಂಗಮದ ಸುದ್ದಿ ನಿಮಗಿನ್ನೂ ತಿಳಿದಿಲ್ಲವೆ?” ಎಂದನು. “ಏನಾಯಿತು ಅಲ್ಲಿ?” -ಕಾತರನಾಗಿ ಕೇಳಿದನು ಸೋಮೇಶ್ವರ. “ಬಸವಣ್ಣನವರ ಅವಸಾನ” ನಿಟ್ಟುಸಿರಿಟ್ಟು ಕ್ರಮಿತನು ಹೇಳಿದನು“ಬಿಜ್ಜಳರಾಯರ ಕೊಲೆಯ ಸುದ್ದಿ ಕೇಳಿ ದುಃಖಾವೇಗದಿಂದ ಬಸವಣ್ಣನವರು ಅಸುನೀಗಿದರು. ತಮ್ಮ ಇಷ್ಟದೈವ ಕೂಡಲ ಸಂಗಮದೇವನಲ್ಲಿ ಐಕ್ಯವಾದರು. ಚಾಲುಕ್ಯ ರಾಜ್ಯದ ಧರ್ಮಜ್ಯೋತಿ ನಂದಿತು, ಸೋಮೇಶ್ವರ ! ಅವರು ಕಲ್ಯಾಣವನ್ನು ಬಿಟ್ಟದಿನವೇ ನಗರದ ಭಾಗ್ಯತಾರೆ ಅಸ್ತವಾಯಿತು!” ಬಸವಣ್ಣನವರ ಅವಸಾನ-ತಂದೆಯ ಕೊಲೆಯ ಸುದ್ದಿ ಕೇಳಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಹೋಗಲು ಯಾರು ಕಾರಣರೋ ಆ ಪ್ರತಿಷ್ಠಾವಂತ ನಿಷ್ಠುರ ವ್ಯಕ್ತಿ, ರಾಜಪುರೋಹಿತ ನಾರಣಕ್ರಮಿತನು ಅವರ ನಿಧನದ ಸುದ್ದಿ ಕೇಳಿ ಕಣ್ಣೀರಿಡುತ್ತಿದ್ದಾನೆ! ಇದು ಕಲ್ಪನೆಯೇ! ಇಹಲೋಕದ ದ್ವೇಷ ದ್ವಂದ್ವಗಳಿಂದ ದೂರವಾದ ಯಾವುದೋ ಕಲ್ಪನಾಲೋಕದಲ್ಲಿರುವೆನೇ ನಾನು? -ಎಂದು ಯೋಚಿಸುತ್ತ ಸೋಮೇಶ್ವರನು ಮೌನವಾಗಿದ್ದನು. ಆಪ್ತರಲ್ಲಿ ಹೇಳಿಕೊಂಡಾಗ ಮನಸ್ಸಿನ ದುಃಖ ಶಾಂತವಾಗುವುದೆಂದು ಮನಶ್ಯಾಸ್ತದ ಒಂದು ತತ್ವ ಬಿಜ್ಜಳನಂತೆಯೇ ತನ್ನ ಅಭಿಮಾನ ಗೌರವಗಳಿಗೆ ಪಾತ್ರನಾಗಿದ್ದ ಸೋಮೇಶ್ವರನೆದುರಿಗೆ ತನ್ನ ದುಗುಡವನ್ನು ತೋಡಿಕೊಂಡದ್ದರಿಂದ ಕ್ರಮಿತನು ಈಗ ಪ್ರಕೃತಸ್ಥನಾಗಿದ್ದನು. ರಾಜಪುರೋಹಿತನಿಗೆ ಸಹಜವಾದ ಹಮ್ಮುಬಿಮ್ಮು ಮತ್ತೆ ಇಣಕುತ್ತಿದ್ದವು. ಎಂದಿನ ಸಲುಗೆಯಿಂದ ಅವನು ಮುಂದುವರಿದು ಹೇಳಿದನು: “ನನ್ನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬೇಕಲ್ಲವೆ, ಸೋಮೇಶ್ವರ? ಮಧುವರಸನ ಮೇಲಿನ ವೈಯಕ್ತಿಕ ವಿದ್ವೇಷದಿಂದ ನಾನು ರ್ವಣ