ಪುಟ:ಕ್ರಾಂತಿ ಕಲ್ಯಾಣ.pdf/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೨ ಕ್ರಾಂತಿ ಕಲ್ಯಾಣ ಸಂಕರದ ಆಪಾದನೆ ಹೂಡಿದೆ. ಆ ವಿಷಚಕ್ರದ ಜ್ವಾಲೆ ಹರಡಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟರು. ಅವರು ನಗರದಲ್ಲಿದ್ದಿದ್ದರೆ ಧರ್ಮಾಧಿಕರಣದ ವಿಚಾರಣೆ ನಡೆಯುತ್ತಿರಲಿಲ್ಲ. ವೃದ್ಧಮಂತ್ರಿಮಂಚಣ ನಾಯಕನು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಮಧುವರಸ ಹರಳಯ್ಯ ಶೀಲವಂತರನ್ನು ಶೂಲಕ್ಕೇರಿಸುತ್ತಿರಲಿಲ್ಲ. ಬಿಜ್ಜಳರಾಯರ ಕೊಲೆ ನಡೆಯುತ್ತಿರಲಿಲ್ಲ. ಕಲ್ಯಾಣದ ಶೈವಮಠಗಳು ಉಳಿಯುತ್ತಿದ್ದವು. ಮಾಧವ ನಾಯಕರ ಸೈನಿಕರಿಂದ ನಾಗರಿಕರ ಅಪಮಾನವಾಗುತ್ತಿರಲಿಲ್ಲ. ಈ ಎಲ್ಲ ದುರಂತಗಳಿಗೆ ಕಾರಣನಾದ ನನ್ನನ್ನು ಬಂಧನದಲ್ಲಿಡು, ಸೋಮೇಶ್ವರ. ನನ್ನ ವಧೆಗೆ ಆಜ್ಞೆಮಾಡು. ಪ್ರಕೃತಸ್ಥನಾಗಿ ಶಾಂತ ಮನಸ್ಸಿನಿಂದ ನಾನಿದನ್ನು ಹೇಳುತ್ತಿದ್ದೇನೆ.” “ಶರಣರನ್ನು ಶೂಲಕ್ಕೇರಿಸಿದ್ದು ತಂದೆಯ ಕೊಲೆಗೆ ಕಾರಣವೆಂದು ನಿಮ್ಮ ಅಭಿಪ್ರಾಯವೇ? ಮಾಧವ ನಾಯಕನ ಕಡೆಯವರು ನಗರದಲ್ಲಿ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ,” ಎಂದನು. “ಮಾಧವ ನಾಯಕನ ಆ ಅಸತ್ಯ ಪ್ರಚಾರವನ್ನು ನೀವು ಕೂಡ ನಂಬಿದಿರಾ, ಸೋಮೇಶ್ವರ ?” -ಕ್ರಮಿತನು ನುಡಿದನು, ತಿರಸ್ಕಾರದ ದನಿಯಿಂದ. ಆಪಾದನೆ ಸಕಾರಣವಾದರೆ ಏಕೆ ನಂಬಬಾರದು?” “ಶರಣರ ಮೇಲಿನ ವಿದ್ವೇಷದಿಂದ ಮಾಧವ ನಾಯಕನು ಈ ಪ್ರಚಾರಕ್ಕೆ ತೊಡಗಿದ್ದಾನೆ. ಆಪಾದನೆ ವಿಶ್ವಾಸಾರ್ಹವಲ್ಲ. ಯಾರೂ ಅದನ್ನು ನಂಬುವುದಿಲ್ಲ.” “ಹಾಗಾದರೆ ನಿಜವಾದ ಕೊಲೆಗಡುಕರಾರು?” ಚಾಲುಕ್ಯ ಅರಸು ಜಗದೇಕಮಲ್ಲ ಮತ್ತು ಅವನ ಯೌವನದ ಗೆಳೆಯ ಸಾಮಂತ ಬೊಮ್ಮರಸ” ಕ್ರಮಿತನ ಉತ್ತರ ಸೋಮೇಶ್ವರನನ್ನು ದಿಗ್ದಮೆಗೊಳಿಸಿತು. ಇದೇನು ಉಪಹಾಸವೇ, ವಾಸ್ತವವೇ ? ಅವಿಶ್ವಾಸದ ದನಿಯಿಂದ ಅವನು, "ರಾಜಗೃಹದಲ್ಲಿ ಬಂಧನದಲ್ಲಿದ್ದ ಜಗದೇಕಮಲ್ಲನಿಂದ ಈ ಕಾರ್ಯ ಹೇಗೆ ಸಾಧ್ಯ? ಅವನು ಅಸ್ವಸ್ಥನಾಗಿದ್ದು ಆ ರಾತ್ರಿಯೇ ಮೃತನಾದನಲ್ಲವೆ?” ಎಂದನು. ಆ ದಿನ ಮೊದಲ ಸಾರಿ ಕ್ರಮಿತನ ಮುಖದಲ್ಲಿ ತಿರಸ್ಕಾರದ ನಗೆ ಮೂಡಿತು. ವಿಶ್ವಾಸದ ದೃಢಕಂಠದಿಂದ ಅವನು ಹೇಳಿದನು : ಅದು ಜನರಲ್ಲಿ ಪ್ರಸಾರವಾದ ಕಥೆ, ಸೋಮೇಶ್ವರ, ವಾಸ್ತವವಾಗಿ ನಡೆದದ್ದು ಬೇರೆ. ಕೊಲೆ ನಡೆದ ಸಂಜೆ ಜಗದೇಕಮಲ್ಲನೂ, ಜಂಗಮ ವೇಷದಿಂದ ರಾಜಗೃಹದಲ್ಲಿ ಧರ್ಮೋಪದೇಶಕನಾಗಿದ್ದ ಬೊಮ್ಮರಸನೂ, ದೀವಟಿಗರ ಸಮವಸ್ತ್ರಗಳನ್ನು ಧರಿಸಿ ಕರ್ಣದೇವನ