ಪುಟ:ಕ್ರಾಂತಿ ಕಲ್ಯಾಣ.pdf/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೪ ಕ್ರಾಂತಿ ಕಲ್ಯಾಣ ಅರಮನೆಯ ಅಧಿಕಾರಿಗಳು, ರಾಜಭಟರು ಹತನಾದ ಒಬ್ಬ ಹಂತಕನ ದೇಹ ಹಠಾತ್ತಾಗಿ ಮಾಯವಾದುದನ್ನು ಗಮನಿಸಲಿಲ್ಲ.” “ಹಾಗಾದರೆ ತಂದೆಯವರ ಕೊಲೆಯಲ್ಲಿ ಕರ್ಣದೇವರ ಪಾತ್ರವೂ ಇದೆ. ರಾಜವಂಶಗಳ ಬೆನ್ನು ಹಿಡಿದ ಭೇತಾಳನಂತೆ ಈ ಅಣ್ಣತಮ್ಮಂದಿರ ವಿದ್ವೇಷ !” -ಎಂದನು ಸೋಮೇಶ್ವರ, ಹತ್ಯೆಯ ಸಂಚು ಕರ್ಣದೇವನಿಗೆ ಮೊದಲೇ ತಿಳಿದಿರಬೇಕೆಂದು ಅವನು ಭಾವಿಸಿದನು. “ಅವಿವೇಕ ಆಲಸ್ಯಗಳ ಹೊರತಾಗಿ ಹತ್ಯೆಯಲ್ಲಿ ಕರ್ಣದೇವನ ಪಾತ್ರವೇನೂ ಇರುವುದಿಲ್ಲ, ಸೋಮೇಶ್ವರ, ನೀವು ಈ ವಿಚಾರದಲ್ಲಿ ನಿಶ್ಚಿಂತರಾಗಬಹುದು,” ಕ್ರಮಿತನು ಉತ್ತರ ಕೊಟ್ಟನು-ರಾಜಗೃಹದ ರಕ್ಷಣೆಯಲ್ಲಿ ಕರ್ಣದೇವ ಇನ್ನಷ್ಟು ಜಾಗರೂಕನಾಗಿದ್ದಿದ್ದರೆ ಜಗದೇಕಮಲ್ಲ ಬೊಮ್ಮರಸರು ವೇಷಾಂತರದಿಂದ ಹೊರಗೆ ಬರಲು ಕಷ್ಟವಾಗುತ್ತಿತ್ತು. ತನ್ನ ಅವಿವೇಕವನ್ನು ಮುಚ್ಚಿಡಲು ಕರ್ಣದೇವನು ಜಗದೇಕಮಲ್ಲನ ದೇಹವನ್ನು ಅಪಹರಿಸಿದನು.” ಕ್ರಮಿತನ ಉತ್ತರದಿಂದ ಸೋಮೇಶ್ವರನ ಸಂದೇಹ ಹರಿಯಲಿಲ್ಲ. “ಬೊಮ್ಮರಸನು ರಾಜಗೃಹದ ಧರ್ಮೋಪದೇಶಕನಾದದ್ದು ಹೇಗೆ ?” ಎಂದು ಪುನಃ ಪ್ರಶ್ನಿಸಿದನು. ಅದೊಂದು ದೊಡ್ಡ ಕಥೆ, ಸೋಮೇಶ್ವರ, ಕ್ರಮಿತನು ಹೇಳಿದನು"ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ರಾಣಿ ಕಾಮೇಶ್ವರಿಯ ನೇತೃತ್ವದಲ್ಲಿ ಒಳಸಂಚೊಂದು ನಡೆಯುತ್ತಿತ್ತು. ನಿಡುಗಲ್ಲಿನ ದುರ್ಗಾಧಿಪತಿ ಬೊಮ್ಮರಸನು ಅದರ ನಾಯಕ, ಕಲಚೂರ್ಯ ಪ್ರಭುತ್ವದ ವಿರೋಧಿಗಳಾದ ಸಾಮಂತಾಧಿಕಾರಿ ಮಾಂಡಲಿಕರ ಸಹಕಾರ ಪಡೆಯಲು ಚಾಲುಕ್ಯರಾಜ್ಯದ ದಕ್ಷಿಣ ಮಂಡಲಗಳಲ್ಲಿ ಪ್ರವಾಸ ಮಾಡಿ ದೇವಗಿರಿಯ ಮಾರ್ಗವಾಗಿ ಕಲ್ಯಾಣಕ್ಕೆ ಬರುತ್ತಿದ್ದಾಗ ನಮ್ಮ ಬೇಹುಗಾರರು ಬೊಮ್ಮರಸನ ಸುಳಿವು ತಿಳಿದರು. ರಾಣಿ ಕಾಮೇಶ್ವರಿಯ ಮನೆಹೆಗ್ಗಡೆ ಅಗ್ಗಳದೇವನು ಅವನ ಸಂಗಡಿದ್ದನು. ಬಸವಣ್ಣನವರು ನಗರವನ್ನು ಬಿಟ್ಟ ದಿನ ಅವರು ಕಲ್ಯಾಣಕ್ಕೆ ಬಂದರು. ಆ ದಿನವೇ ಅವರನ್ನು ಸೆರೆಹಿಡಿಯುವುದು ನಮ್ಮ ಉದ್ದೇಶವಾಗಿತ್ತು. ಅಗ್ಗಳ ಸಿಕ್ಕಿದನು. ರಾಜಭಟರ ಅಚಾತುರ್ಯದಿಂದ ಬೊಮ್ಮರಸ ತಪ್ಪಿಸಿಕೊಂಡನು. ಆಮೇಲೆ ಅವನು ಜಂಗಮ ವೇಷದಿಂದ ಜಗದೇಕಮಲ್ಲನ ಧರ್ಮೋಪದೇಶಕನಾಗಿ ರಾಜಗೃಹ ಸೇರಿದನು.” “ಮನೆಹೆಗ್ಗಡೆ ಅಗ್ಗಳನನ್ನೇನು ಮಾಡಿದಿರಿ ?” “ಬಿಜ್ಜಳರಾಯರು ಅವನನ್ನು ಜಗದೇಕಮಲ್ಲನ ಕಾಮೋಪದೇಶಕನನ್ನಾಗಿ