ಪುಟ:ಕ್ರಾಂತಿ ಕಲ್ಯಾಣ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಕ್ರಾಂತಿ ಕಲ್ಯಾಣ

ಹೆಗ್ಗಡತಿಯನ್ನು ಕೋಲಾಹಲೆ ಎಂದು ಕರೆಯುತ್ತಾರೆ. ಅಂತಃಪುರವಾಸಿನಿಯರ ರೋಗರುಜಿನ ಹೆರಿಗೆಗಳಲ್ಲಿ ವೈದ್ಯೋಪಚಾರಗಳನ್ನು ಏರ್ಪಡಿಸುವ ಹೊಣೆ ಇವಳ ಮೇಲಿರುತ್ತದೆ. ಸಾಮಾನ್ಯವಾಗಿ ಇವಳು ರಾಜನಿಗಿಂತ ಎಂಟು ಹತ್ತು ವರ್ಷಗಳು ಹಿರಿಯಳಾಗಿದ್ದು, ಹಿಂದಿನ ರಾಜನ ಬಂಧುವರ್ಗದ ಅಕ್ಕಳೆಯೋ ಅಥವಾ ಗಣಿಕಾವಾಸದ ಹೆಗ್ಗಡತಿಯರಲ್ಲಿ ಕಿರಿಯ ವಯಸ್ಸಿನವಳೋ ಆಗಿರುತ್ತಾಳೆ. ರಾಜನ ಕೈಶೋರದಲ್ಲಿ, ವಿಲಾಸ ಜೀವನದ ಪ್ರಥಮ ಪರಿಚಯ ಮಾಡಿಕೊಟ್ಟು ವಿದ್ಯಾಗುರುವಾದಳೆಂಬ ಕಾರಣದಿಂದ ಗುರು ಕಾಣಿಕೆಯಾಗಿ ಹಿರಿಯ ಹೆಗ್ಗಡತಿಯ ಸ್ಥಾನ ಅವಳಿಗೆ ದೊರಕಿರುತ್ತದೆ. ರಾಜ್ಯ ಅನ್ಯಾಕ್ರಾಂತನಾಗಿ ಬೇರೊಂದು ಅರಸುಮನೆತನ ಪಟ್ಟಕ್ಕೆ ಬಂದ ಸಂದರ್ಭಗಳಲ್ಲಿ ಹಿಂದಿನ ರಾಜನ ಪಟ್ಟಮಹಿಷಿಯೋ ಅಥವಾ ಪುತ್ರಿಯೋ ಈ ಸ್ಥಾನದಲ್ಲಿರುವುದೂ ಉಂಟು. ಹಿಂದಿನ ರಾಜನ ರಾಣಿವಾಸದಲ್ಲಿ ಕಳೆದುಳಿದವರನ್ನು ಹೊಸ ರಾಜನು ತನ್ನ ಗಣಿಕಾವಾಸಕ್ಕೆ ಸೇರಿಸಿಕೊಳ್ಳುವುದು ದೇವತೆಗಳ ಕಾಲದಿಂದ ನಮ್ಮ ದೇಶದಲ್ಲಿ ಪ್ರಚಾರದಲ್ಲಿರುವ ಪದ್ಧತಿ. ಗಣಿಕಾವಾಸದಲ್ಲಿ ಕೋಲಾಹಲೆಯ ಸ್ಥಾನ ಅವಳ ಹೆಸರೇ ಸೂಚಿಸುವಂತೆ ಬಹುಮುಖ್ಯವಾದದ್ದು. ಎಲ್ಲ ಹೆಗ್ಗಡತಿಯರೂ ಈ ಸ್ಥಾನಕ್ಕಾಗಿ ಸ್ಪರ್ಧೆ ನಡೆಸುವುದರಿಂದ ರಾಜನು ತನ್ನ ಪುತ್ರರನ್ನು ಎಚ್ಚರಿಕೆಯಿಂದ ರಕ್ಷಿಸಬೇಕೆಂದು ಕೋಹಳನು ಹೇಳಿದ್ದಾನೆ."

"ಬಹಳ ಚೆನ್ನಾಗಿದೆ ನಿನ್ನ ವಿವರಣೆ, ಅಗ್ಗಳ."

"ನಮ್ಮ ಗಣಿಕಾವಾಸದ ಅರೆಕೊರೆಗಳನ್ನು ಈಗ ತಿಳಿದೆ, ಪಂಡಿತರೆ."

"ಕಥೆಗಿಂತ ಸ್ವಾರಸ್ಯವಾಗಿತ್ತು ನೀವು ಹೇಳಿದ್ದು."

"ಇವರಿಗೇನು ಕೊಡಲಿ ಬಹುಮಾನ!"

"ನಿನ್ನ ತನು ಮನಗಳನ್ನು ಕೊಡು, ಸಖಿ." -ಎಲ್ಲ ಕಡೆಗಳಿಂದ ಪ್ರಶಂಸೆಯ ಮಾತುಗಳು ಕೇಳಿಬಂದವು.

"ಚಾಲುಕ್ಯ ಚಕ್ರೇಶ್ವರರೇಕೆ ಮೌನವಾಗಿದ್ದಾರೆ? ನನ್ನ ಉಪನ್ಯಾಸ ರುಚಿಸಲಿಲ್ಲವೇ ಅವರಿಗೆ?"- ಅಗ್ಗಳನು ಕುತೂಹಲದಿಂದ ಪ್ರಶ್ನಿಸಿದನು.

"ಏನಾದರೂ ಹೇಳಿಬಿಡು, ಭಂಡರಾಜ, ಕೇಳಲು ಆತುರನಾಗಿದ್ದಾನೆ ಅಗ್ಗಳ, ಹೊಗಳಿಕೆಯೆಂದರೆ ಕಳ್ಳು ಕುಡಿದಷ್ಟು ಆನಂದ ಕವಿಗಳೀಗೆ"—ಕರ್ಣದೇವನ ಒತ್ತಾಯವೂ ದೊರೆಯಿತು, ಅಗ್ಗಳನ ಪ್ರಶ್ನೆಗೆ.

ಜಗದೇಕಮಲ್ಲನು ಕೊಂಚ ಹೊತ್ತು ಯೋಚಿಸುತ್ತಿದ್ದು, "ನಾನು ಚಾಲುಕ್ಯ ಚಕ್ರೇಶ್ವರನಾಗಿ ಹೇಳತಕ್ಕದ್ದೇನೂ ಇಲ್ಲ," ಎಂದು ಉತ್ತರ ಕೊಟ್ಟನು.

"ಭಂಡರಾಜನಾಗಿ ಹೇಳು, ಹೇಳತಕ್ಕದ್ದನ್ನು" -ಅಮಲೇರಿ ತಬ್ಬಿಬ್ಬಾಗಿ