ಪುಟ:ಕ್ರಾಂತಿ ಕಲ್ಯಾಣ.pdf/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ೮೮ ಕ್ರಾಂತಿ ಕಲ್ಯಾಣ the divines are dumb, the lawyers assent, the laws and constitution gives way, neither justice nor humanity avail.” ಎಂದು ಹೇಳಿದುದನ್ನು ಬಿಜ್ಜಳನಿಗೆ ಅನ್ವಯಿಸಬಹುದು. ಚಾಲುಕ್ಯ ಅರಸರಲ್ಲಿ ವಿಖ್ಯಾತನಾದ ಆರನೆಯ ವಿಕ್ರಮಾದಿತ್ಯನು ವಿಜ್ಞಾನೇಶ್ವರ ಪಂಡಿತನ ನೇತೃತ್ವದಲ್ಲಿ, ರಾಜ್ಯದ ಶಿಷ್ಟ ಸಾಮಂತ ಪ್ರತಿನಿಧಿಗಳ ಸಹಾಯದಿಂದ ರೂಪಿಸಿ ಆಚರಣೆಗೆ ತಂದಿದ್ದ ಆಡಳಿತ ಪದ್ಧತಿ ಬಿಜ್ಜಳನ ಕಾಲಕ್ಕೆ ನೀರಿನ ಮೇಲನ ಬರಹವಾಗಿ ರಾಜ್ಯಾದ್ಯಂತ ಪ್ರಜಾಪೀಡೆ ತಾಂಡವವಾಡುತ್ತಿತ್ತು. ನಿರಂಕುಶ ದಬ್ಬಾಳಿಕೆಯ ಕಾರ್ಮೊಡ ದೇಶದ ಮೇಲೆ ಹರಡಿತ್ತು. ಮಧುವರಸ ಹರಳಯ್ಯಗಳ ಮೇಲಿನ ವರ್ಣಸಂಕರದ ಆಪಾದನೆ, ಅದರ ವಿಚಾರಣೆಯಲ್ಲಿ ಧರ್ಮಾಧಿಕರಣ ಅನುಸರಿಸಿದ ವಿಧಾನ, ಆ ಸಂದರ್ಭದಲ್ಲಿ ಮತ್ತು ಆ ತರುವಾಯ ಬಿಜ್ಜಳನ ಅಧಿಕಾರಿಗಳು ಶರಣರ ಮೇಲೆ ನಡೆಸಿದ ಹಿಂಸಾಕೃತ್ಯಗಳು, ಇವುಗಳಿಂದ ಆಗಿನ ಪರಿಸ್ಥಿತಿಯ ಒಂದು ಮುಖವನ್ನು ಕಾಣಬಹುದು. - ಬಿಜ್ಜಳನ ಈ ಅಧಃಪತನಕ್ಕೆ ಕಾರಣಗಳೇನೆಂಬುದನ್ನು ತಿಳಿಯಲು ಹೆಚ್ಚು ಶ್ರಮಿಸಬೇಕಾಗಿಲ್ಲ. ಮನಃಶಾಸ್ತ್ರ ಮತ್ತು ಇತಿಹಾಸದ ತುಲನಾತ್ಮಕ ಸಂಶೋಧನೆಯಿಂದ ಅದಕ್ಕೆ ಸಮರ್ಪಕ ಉತ್ತರಗಳನ್ನು ಪಡೆಯಬಹುದು. ಇತಿಹಾಸ ತಜ್ಞರಲ್ಲಿ ವಿಖ್ಯಾತನಾದ ಲಾರ್ಡ್ಆಕ್ಷನ್‌ನು ಮಾನವನ ಮೇಲೆ ನಿರಂಕುಶ ಸರ್ವಾಧಿಕಾರದ ಪ್ರಭಾವವನ್ನು ಕುರಿತು, “Power always corrupts. Absolute power corrupts absolutely. All great men are bad.” ಎಂದು ಹೇಳಿದ್ದಾನೆ. “In general great poets, artists, and saints, as well as conquerors are strongly sexed.” (Alex Carrel-Man the Unknown.) ಎಂದು ಮನಃಶಾಸ್ತ್ರ ಹೇಳುತ್ತದೆ. ವಿಜಯಗರ್ವಿತನೂ ನಿರಂಕುಶ ಸರ್ವಾಧಿಕಾರಿಯೂ ಆಗಿದ್ದ ಬಿಜ್ಜಳನು ಜಗತ್ತಿನ ಎಲ್ಲ ಸರ್ವಾಧಿಕಾರಿಗಳಂತೆ ಧರ್ಮನೀತಿಗಳನ್ನು ತುಳಿದಿಟ್ಟು, ಜನಸಾಮಾನ್ಯರಿಗೆ ಉನ್ಮಾದದಂತೆ ತೋರಬಹುದಾದ ಅಸಂಯತ ಉದ್ರೇಕಪೂರ್ಣ ದಬ್ಬಾಳಿಕೆ ಹಿಂಸಾಕೃತ್ಯಗಳಿಗೆ ತೊಡಗಿದುದು ಸಹಜವಾಗಿದೆ. ಸೋತ ಅರಸರ ಮಡದಿ ಮಕ್ಕಳನ್ನು ಬಲಾತ್ಕಾರದಿಂದ ತಮ್ಮ ಅಂತಃಪುರಗಳಿಗೆ ಸೇರಿಸಿಕೊಳ್ಳುವ