ಪುಟ:ಕ್ರಾಂತಿ ಕಲ್ಯಾಣ.pdf/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೯೦

ಕ್ರಾಂತಿ ಕಲ್ಯಾಣ

ಪಾಲ್ಕುರಿಕೆಯಲ್ಲಿದ್ದ ಸೋಮನಾಥನು ಭಕ್ತರಿಂದ ಕೇಳಿದ ಈ ಕಥೆ “ಸದ್ಭಕ್ತಿ ವಿಸ್ಫುರಣ ಪ್ರಸ್ತುತಿ”ಗೇರಿದ ಕಥೆಯೆಂಬುದನ್ನು ಗಮನಿಸಿದಾಗ, ಬಸವಣ್ಣನವರು ತಮ್ಮ ಕೊನೆಗಾಲದಲ್ಲಿ ಹೇಳಿರಬಹುದಾದ, “ಹೊಗಳಿ ಹೊಗಳಿ ಹೊನ್ನ ಶೂಲಕಿಕ್ಕಿದರೆನ್ನವರು,” ಎಂಬ ವಚನ ಭಾಗ ನೆನಪಿಗೆ ಬರುತ್ತದೆ.

ಬಿಜ್ಜಳನನ್ನು ವಧಿಸಿದ "“ಜಗದೇವ”ನನ್ನು ಸೋಮನಾಥನು ದಂಡನಾಯಕ, ಮಂತ್ರಿ ಎಂದು ಕರೆದಿರುವುದೂ ಗಮನಾರ್ಹ. ಆಮೇಲಿನ ಕವಿಗಳ ಕಲ್ಪನೆಯಂತೆ ಜಗದೇವ ಮಲ್ಲಿಬೊಮ್ಮರು ಚಾಲುಕ್ಯ ರಾಜ್ಯದಲ್ಲಿ ಪದವಿ ಪ್ರತಿಷ್ಠೆಗಳನ್ನು ಪಡೆದಿದ್ದರು. ನಾಲ್ಕನೆಯ ಸೋಮೇಶ್ವರನ ಕಾಲಕ್ಕೆ ನಿಡುಂಗಲ್‌ ಸೀಮೆಯ ಸಾಮಂತನಾಗಿದ್ದ ಬೊಮ್ಮರಸನು ಇವರಲ್ಲೊನ್ಬನು. ತನ್ನ ಒಂದು ಶಾಸನದಲ್ಲಿ ಇವನು “ಬಿಜ್ಜಗ ಶೀರಚ್ಛೇದಕ” ಎಂದು ತನ್ನನ್ನು ಹೊಗಳಿಕೊಂಡಿದ್ದಾನೆ. ಜಗದೇವ ಎಂದು ಸೋಮನಾಥನು ಹೇಳುವ ಇನ್ನೊಬ್ಬ ದಂಡನಾಯಕನು, ಬಿಜ್ಜಳನು ಸೆರೆಯಲ್ಲಿಟ್ಟಿದ್ದ ಚಾಲುಕ್ಯ ಅರಸು ಜಗದೇಕಮಲ್ಲನೇ ಆಗಿರಬೇಕೆಂದು ನಾವು ನಿಸ್ಸಂದೇಹವಾಗಿ ನಿರ್ಧರಿಸಬಹುದು. ಚಾಲುಕ್ಯ ರಾಜಸತ್ತೆಯ ಪುನಃ ಪ್ರತಿಷ್ಠೆಗಾಗಿ ನಡೆದ ಈ ರಾಜಕೀಯ ಕೊಲೆಯನ್ನು ಶರಣರ ಪ್ರಚೋದನೆಯಿಂದ ನಡೆಯಿತೆಂದು ಹೇಳಿ, ಅದರ ಸಮರ್ಥನೆಗಾಗಿ ಪುರಾಣ ಸಂಪ್ರದಾಯದ ಕಲ್ಪಿತ ಕಥೆಗಳನ್ನು ಕಟ್ಟುವ ಈ ಕಾರ್ಯ ಮುಖ್ಯವಾಗಿ ಶರಣ ಕವಿಗಳಿಂದಲೇ ನಡೆಯಿತೆಂಬುದು ಖಂಡನಾರ್ಹವಾಗಿದೆ. ವಾಸ್ತವದಲ್ಲಿ ಶಾಂತವಾದಿಗಳೂ ಪ್ರಗತಿಶೀಲರೂ ಆಗಿದ್ದ ಶರಣರು ಬಿಜ್ಜಳನ ರಾಜ್ಯಕಾಲದ ಕೊನೆಯ ದಿನಗಳಲ್ಲಿ ಮತ್ತು ಅವನ ಕೊಲೆಯ ಅನಂತರ ಪಭುತ್ವದ ದೌರ್ಜನ್ಯ ದಬ್ಬಾಳಿಕೆಗಳ ಫಲವಾಗಿ ಬಗೆ ಬಗೆಯ ಕಷ್ಟನಷ್ಟಗಳಿಗೆ ಗುರಿಯಾದರು. ಕಲ್ಯಾಣದಿಂದ ಚದುರಿ ಹೋಗಿ ಸಹ್ಯಾದ್ರಿಯ ಅರಣ್ಯ ಪ್ರದೇಶಗಳಲ್ಲಿ ಅವರು ಆಶ್ರಯ ಪಡೆಯಬೇಕಾಯಿತು. ಆ ಸಂದರ್ಭದಲ್ಲಿ ಅವರು ಸಂಪೂರ್ಣವಾಗಿ ವಿನಾಶವಾಗದೆ ಹೋದದ್ದು ಅವರ ಧರ್ಮನಿಷ್ಠೆ ಅಂತಃಶ್ರದ್ಧೆಗಳಿಂದಲೇ ಎಂಬುದು ಈಗ ಸರ್ವತ್ರ ಅಂಗೀಕರಿಸಲ್ಪಟ್ಟಿದೆ.

ಕನ್ನಡ ಸಾಹಿತ್ಯ ಪ್ರಗತಿ, ಸಮಾಲೋಜನೆ ಮತ್ತು ಮೌಲ್ಯ ನಿರ್ಣಯದ ವಿಧಾನವನ್ನು ಕುರಿತು ಯೋಜಿಸಿದಾಗಲೆಲ್ಲ ಭರ್ತೃಹರಿಯ ಒಂದು ಪದ್ಯ ನೆನಪಿಗೆ ಬರುತ್ತದೆ.

ಭೋದ್ಧಾರೋ ಮತ್ಸರ್‍ರಸ್ತಾಃ ಪ್ರಭವಸ್ಮಯದೋಷಿತಾಃ । ಅಭೋಧೋಪಹತಾಶ್ಚಾನ್ಯೇ ಲೀನಮಂಗೇ ಸುಭಾಷಿತಃ ॥ ಎಂದು, ಇಲ್ಲಿ ಸೂಚಿತವಾದ ಮೂರು ಅಂ೦ತರಾಂದುಗಳೂಡನೆ