ಪುಟ:ಕ್ರಾಂತಿ ಕಲ್ಯಾಣ.pdf/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಡೆಯ ನಾಲ್ಕು ಮಾತು

೪೯೧

ಜಾತೀಯತೆಯ ವಿರೋಧವನ್ನೂ ಕನ್ನಡ ಲೇಖಕರು ಎದುರಿಸಬೇಕಾಗುತ್ತದೆ.
ಶಾರದಾ ಪ್ರಕಟನಾಲಯದ ನನ್ನ ಮಿತ್ರರು ಸಚೇತಕರಾಗಿ, ಕಾಲ ಕಾಲಕ್ಕೆ ನನ್ನನ್ನು
ಎಚ್ಚರಿಸದೆ ಹೋಗಿದ್ದರೆ, ನಾಲ್ಕು ವರ್ಷಗಳ ಹಿಂದೆ ಪ್ರಾರಂಭಿಸಿದ ಈ ಕಾದಂಬರೀ
ಮಾಲಿಕೆ, ಮೇಲಿನ ಕಾರಣಗಳಿಂದಾಗಿ ಅಪೂರ್ಣವಾಗಿಯೇ ಉಳಿಯುತ್ತಿತ್ತೋ
ಏನೋ! ಅದಕ್ಕಾಗಿ ನಾನು ಆ ನನ್ನ ಮಿತ್ರರಿಗೆ ಕೃತಜ್ಞನಾಗಿದ್ದೇನೆ.
ಈ ಕಾದಂಬರೀ ಮಾಲಿಕೆಯ ರಚನೆಯ ಅವಧಿಯಲ್ಲಿ, ಮೊದಲೇ ಕೆಟ್ಟಿದ್ದ
ನನ್ನ ಆರೋಗ್ಯದಿಂದಾಗಿ ಅನೇಕ ಸಾರಿ ನಾನು ಜ್ವರದಿಂದ ಹಾಸಿಗೆ
ಹಿಡಿಯುವಂತಾಯಿತು. ಈ ಸಂದರ್ಭಗಳಲ್ಲೆಲ್ಲ ಅಗತ್ಯವಾದ ಚಿಕಿತ್ಸೆ ನಡೆಸಿ, ನಾನು
ಉದ್ದೇಶಿಸಿದ ಕಾರ್ಯವನ್ನು ಪೂರೈಸುವ ಶಕ್ತಿಯನ್ನು ಕೊಟ್ಟ ನನ್ನ ಮಾನ್ಯ
ಮಿತ್ರರಾದ ಡಾ|| ಎಂ. ಶಿವರಾಂ ಮತ್ತು ಡಾ|| ಎಸ್. ಸುಬ್ಬರಾವ್ ಇವರುಗಳಿಗೆ
ನಾನು ತುಂಬಾ ಕೃತಜ್ಞನಾಗಿದ್ದೇನೆ.
ಸಹೃದಯರಾದ ವಾಚಕರು ಈ ಬೃಹತ್ ಕಾದಂಬರಿಯ ಹಿಂದಿನ ಐದು
ಭಾಗಗಳಂತೆ ಕೊನೆಯ ಈ ಭಾಗವನ್ನೂ ಆದರದಿಂದ ಬರಮಾಡಿಕೊಳ್ಳುವರೆಂದು
ನಂಬಿದ್ದೇನೆ.

ಬಿ. ಪುಟ್ಟಸ್ವಾಮಯ್ಯ


ಬೆಂಗಳೂರು ನಗರ

ತಾǁ ೬-೫-೧೯೬೩