ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀವೈಷ್ಣ ವಬ್ರಾಹ್ಮಣನೂ ಅಲ್ಲ. ಶ್ರೀವೈಷ್ಣವನಾಗಿದ್ದಲ್ಲಿ ತ್ರಿವರ್ತಿಗ ಇನ್ನು ಹಾಗೂ ಅವರಾದ ಮೇಲೆ ಇಂದಿರಾದೇವಿಯನ್ನೂ ಸ್ತುತಿಸುತ್ತಿರಲಿಲ್ಲ. ಒಂದು ವೇಳೆ ಈತನು ಕ್ಷತ್ರಿಯನಾಗಿದ್ದರೂ ಇರಬಹುದು, ಬೆಟ್ಟ ರಸ್ತೆ, ಬೆಟ್ಟದಯ್ಯ ಎಂಬ ಹೆಸರುಗಳು ಅರಸರ ಸಂತತಿಯಲ್ಲಿ ಕೆಲವರಿಗಿವೆ. ಮೈಸೂರ ರಸರಲ್ಲಿ ಗೋತ್ರ ಸೂತ್ರಗಳ ವ್ಯವಹಾರವೂ ಉಂಟು. ಕ್ಷತ್ರಿಯನಾಗಿದ್ದಲ್ಲಿ ಈತನು ಹೋತೂರು ಎಂಬ ಗ್ರಾಮದ ಪಾಳ್ಯಗಾರನಾದ ಬೆಟ್ಟ ರಸನ ಮಗನಾಗಿರಬೇಕು. ಒಟ್ಟು ನೋಡಲಾಗಿ ಕವಿಯು ವೈಷ್ಣವಬ್ರಾಹ್ಮಣನೋ ಇಲ್ಲವೆ ಅರಸು ಸಂತತಿ ಯುವನೋ ನಿಸ್ಸಂದೇಹವಾಗಿ ಆಗಿರಬೇಕು, ಕವಿಯ ಹೆಸರು ಕೊನಯ್ಯ, ಕೋನಯ್ಯ -- ಕರ್ಬೀ + ಅಯ್ಯ; ತಮಿಳಿನಲ್ಲಿ ರ್ಕೋ ಎಂಬ ಪದವು ಸ್ವಾಮಿ ಎಂಬ ಅರ್ಥವನ್ನು ಕೊಡುತ್ತದೆ. ಅಯ್ಯ.....ಎಂಬುದು ಆರ್ಯಶಬ್ದಕ್ಕೆ ತದ್ಭವರೂಪವಾಗಲಾಗಿ, ಗೌರವವಾಕಿಯಾ ಗಿರುತ್ತದೆ. ಮೇ{{ ರೈಸರವರು “ ಸರಸಭಾರತಿ ಕೋನಯಾಖ್ಯನು ಎಂಬ ಕಡೆ ಲೇಖಕರ ಪ್ರಮಾದದಿಂದ ಒಂದು ಪ್ರತಿಯಲ್ಲಿ ಬಿದ್ದಿರುವ “ಸರಸಭಾರತ ಕೋನ ಯಾಖ್ಯನು' ಎಂಬುದನ್ನು ನೋಡಿ ಕವಿಗೆ ಭಾರತಕೊನಯ್ಯ ಎಂಬ ಹೆಸರಿದೆ ಎಂದು ಶಬ್ದಾನುಶಾಸನದ ಉಪೋದ್ಘಾತದ ಕವಿಚರಿತ್ರೆಯಲ್ಲಿ ಹೇಳಿರುವುದು ತಪ್ಪಾಗಿದೆ. ಓದಿದವ ತಾನಲ್ಲ ಶಬ್ದವ | ಮೋದದೊಳಲ೦ಕಾರರಸ ಛಂ | ದಾದಿಗಳ ನೆನೆದಯೆ ದೇವರು ಬಲ್ಲ ಕೆಸವಿದು || (ಸಂ. ೧. (೪) ಶಬ್ಯಾಕ್ಷರ ದರಿದ್ರನನು | (ಸಂ ೨೭, ೧೧೫) ಲಲಿತಶಬ್ದ ಸುವರ್ಣಲಕ್ಷಣ | ಕಲಿತಭಾವರಸಾದಿಯೆಂಬುದ | ನೊಳಗ' ಯನಿವನೇನ ಬಲ್ಲ ನದೆಂದು ಕೆಪಿಸದೆ (ಸಂ.೨೬ ೧೧೬) ಈ ಮೇಲಣ ಪದ್ಯಭಾಗಗಳಲ್ಲಿ ಕವಿಯು ತಾನು ಓದಿದವನಲ್ಲ, ಅಲಂಕಾ ರದಿಗಳನ್ನು ಮೊದಲೆ ಕಾಣನು, ಶಬ್ದದರಿದ್ರನು, ಎಂದು ಹೇಳಿಕೊಂಡಿರುವುದು ನಿಜವಾದ ಸಂಗತಿಯೇ ಹೊರತು ಮಹಾಕವಿಗಳು ನೈಜ್ಯವನ್ನು ಆರೋಪಿಸಿಕೊಂಡು ಹೇಳುವ ಮಾತಾಗಿಲ್ಲ, ಪ್ರಾಯಶಃ ಕನ್ನಡ ಕವಿಗಳು ಉಪಮೋಕ್ಷ್ಮೀಕ್ಯಾದಿಗ ಛಿಂದಲೇ ಗ್ರಂಥವನ್ನು ವಿಸ್ತರಿಸುವರು. ಅಷ್ಟು ದೊಡ್ಡ ಗ್ರಂಥವಾದರೂ ಇದರಲ್ಲಿ