ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ ಎಲ್ಲೋ ಒಂದೊಂದುಕದೆ ಬೆಟ್ಟಿನಲ್ಲಿ ಎಣಿಸುವಂತೆ ಅಲಂಕಾರಾದಿಗಳು ಸಿಕ್ಕುವುವು. ಅಲ್ಪವಾದ ಕಥಾಸಂದರ್ಭವನ್ನು ಬಳಸುವುದರಲ್ಲಿ ತನ್ನ ಶ್ರಮವನ್ನೆಲ್ಲಾ ಬಹುವಾಗಿ ವೆಚ್ಚ ಮಾಡಿರುವನು. ಒಂದುಕಡೆಯಲ್ಲಿಯೂ ವರ್ಣನಾದಿಗಳಲ್ಲಿ ತನ್ನ ಚಮತ್ಕಾರ ವನ್ನು ತೋರಿಸಿಕೊಡಲಿಲ್ಲ ಕೃಷ್ಣಾರ್ಜುನರು ವೀರವಾದದಿಂದ ಪರಸ್ಪರ ಹೀಯಾಳಿ ಸುವ ಕಡೆಗಳಲ್ಲಿ ಮಾತ್ರ ಮಾತುಗಳಲ್ಲಿ ತನ್ನ ಸಾಮರ್ಥ್ಯವನ್ನು ಸ್ವಲ್ಪಮಟ್ಟಿಗೆ ತೋ ರಿಸಿಕೊಂಡಿರುವನು. ಶಬ್ದ ದಾರಿದ್ರವಂತೂ ಗ್ರಂಥವನ್ನು ಪಠಿಸುತ್ತ ಹೋದರೆ ತಾನೇ ಗೊತ್ತಾಗುತ್ತದೆ, ಅವನೇ ಹೇಳಿಕೊಳ್ಳುವಂತೆ ಭಗವಂತನ ಕೃಪೆಯಿಂದ ಪಟ್ಟದಿಯಲ್ಲಿ ಅಭಿಪ್ರಾಯವನ್ನು ನಯಿಸುವ ಸಾಮರ್ಥ್ಯವು ಅವನಿಗೆ ಸಹಜವಾಗಿ ಬಂದಿರಬಹುದು. ಕುಮಾರವ್ಯಾಸನು 'ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ' ಎಂಬ ಪದ್ಯದಲ್ಲಿ ಹೇಳಿಕೊಂಡಂತ, ಈತನೂ ಹೇಳಿಕೊಂಡನೆಂದು ತಿಳಿದ ಕೂಡದು, ಅವನ ಅಶಕ್ತಿ ಜ್ಞಾನವು ಆರೋಪಿತವಾದುದು. ಇವಸಿದು ಸಹಜ ಅನೇಕ ಕಡೆ ಇವನು ಒರೆ ದಿರುವ ಪದ್ಯಗಳು ಇಲ್ಲದಿದ್ದರೆ, ಗ್ರಂಥವು ಚೆನ್ನಾಗಿರುವುದೆಂಬ ಭಾವವು ಪಾಠಕರಲ್ಲಿ ಹುಟ್ಟದೆ ಇಲ್ಲ. ಹೇಗೆ ಪದಗಳನ್ನು ಸೇರಿಸಿ ಧಾರಾಳವಾಗಿ ಕವಿತ್ವ ಮಾಡುವ ಸಾಮರ್ಥ್ಯವು ಇವನಲ್ಲಿ ಉಂಟು. ಕಾಳಿದಾಸ ಮಯರ ವರಕವಿ | ಮೌಳಿಮಣಿ ಬಾಣಾಂಕ ದಂಡಿ | ವಿಶಾಲಮತಿ ಮಲಹ: ಕುಮಾರವ್ಯಾಸ ಶುರೂಷ | ಲೋಗುಣಲಕ್ಷ್ಮೀಶ ಘನಕವಿ || ಜಾಲಮೃದುಪದಪಲ್ಲವಳಿಗೆ | ಫಾಲಮಂ ಚಾಚುತ್ತ ಪೇಳುವೆನೀ ಮಹಾಕೃತಿಯ || ಎಂಬೀ ಪದ್ಯದಲ್ಲಿ ಸಂಸ್ಕೃತ ಕವಿಶ್ರೇಷ್ಠರೆಂದು ಪ್ರಸಿದ್ಧಿ ಹೊಂದಿದ ಪ್ರಾಚೀನ ಕವಿಗಳಾದ ಕಾಳಿದಾಸ, ಮಯರ, ಬಾಣ, ದಂಡಿ, ಮಲ್ಲಣ ಎಂಬವರನ್ನು ಸ್ಮರಿಸುವನು. ಇದರಿಂದ ಕವಿಯ ಕಾಲವನ್ನು ನಿರ್ಣಿಸಲಾಗುವುದಿಲ್ಲ. ಕನ್ನಡ ಕವಿಗಳಲ್ಲಿ ಕುಮಾರವ್ಯಾಸ ನಿತ್ಯಾತ್ಮರನ್ನೂ, ಲೋಲಗುಣ ಲಕ್ಷ್ಮೀಶನನ್ನೂ ಸ್ಮರಿ ಸುವನು. ಇದು ಕವಿಯ ಕಾಲವನ್ನು ನಿರ್ಧರಿಸುವುದಕ್ಕೆ ಸ್ವಲ್ಪ ಸಹಾಯಮಾಡುತ್ತ ದೆ. ಕುವರವ್ಯಾಸ ನಿತ್ಯಾತ್ಮಲಕ್ಷ್ಮೀಶರ ಹೆಸರನ್ನು ಹೇಳಿರುವುದರಿಂದ ಅವರ ಕಾಲ ದಲ್ಲಿದ್ದವರೆಂದು ಹೇಳಲಾಗದು, ಅನೇಕ ಶತಮಾನಗಳ ಹಿಂದೆ ಪ್ರಸಿದ್ಧರಾಗಿದ್ದ ಸಂಸ್ಕೃತ ಕವಿಗಳನ್ನು ಹೇಳಿದ್ದಂತೆ, ತನಗಿಂತ ೨,೩ ಶತಮಾನಕ್ಕಿಂತ ಹಿಂದಣವರಾದ