೧೦೨ fಸಂಧಿ ೭೩ ೭೪ ಕರ್ಣಾಟಕ ಕಾವ್ಯಕಲಾನಿಧಿ | ಕಂಡನಾಡಂಭಾವ್ಯ ಮಡಿದಿಹ | ಪುಂಡರೀಕಾಕ್ಷನನು ಬು' ಕವೆ || ಖಂಡಪರಶುವ ವರದ ಬಲುಮೆಯ ನೆನೆದ ಹರುಷದಲಿ || ಅಂಡಲೆದು ನಿರ್ಜರರ ತಲೆಗಳ | ಚೆಂಡನಾಡದೆ ಬಿಟ್ಟೆ ನಾದಡೆ | ಮಂಡಲದ ದಾನವರ ಕಾಲ್ಗಳ ಕೆಳಗೆ ನುಸುಳಿದವ || ಹಾಯೆನುತ ಬೊಬ್ಬಿ ದು ಕರ್ಬುರ | ನಾಯಕನು ದಿವಿಜರ ನಿಕಾಯದ | ಕಾಯಗಳ ಚರ್ಮಗಳನೆಲ್ಲವ ತೆಗೆಸಿ ತಂಬಟಿಕೆ | ಹಾಯಿ, ಕಿಸೆ ಯವರುಗಳ ಜಗದಲಿ | ಕಾಯಲಾದವರುಂಟೆ ದಿಂಡೆಯ | ಬಾಯ ಬಡಿದನನೆಚ್ಚು ಕೆಣಕಿದರೆಂದು ಹಲು ಮೊರೆದ |! - ಅವನ ತಲೆ ಸಾಹಸ್ರಶಕಲದೊ | ಇವನಿಗೊಗಿಸಿ ಮತ್ತೆ ಭುಜಬಲ | ದವಿರಳಕೆ ಸರಿಯಾಗಿ ತನ್ನೊಳು ಕಾದಲಾ ಸವರು || ದಿವಿಜ ದನುಜ ಭುಜಂಗ ನರರೊಳ | ಗವಗಡಿಸಿ ನಿಲುವವರ ಕಾಣೆನು | ಇವನ ತೂಕದ ಭಟರನೆನುತಾದನುಜ ಹರುತಿಸಿದ | ಆನಿತ ತೆಳು ಪರಮೇಶ ತನ್ನನು | ಘನತರದ ವರತಪವ ಮಾಡುವ | ವನಜಲೋಚನನಧಿಕಭಕ್ತಿಗೆ ಮೆಚ್ಚಿಯಟ ದಿರ್ದ | ವಿನುತರೂಪವ ಬದು ಕಿಸಿದಡಾ | ದನುಜವೈರಿಯು ತನಕೆ ಕುಳಿತನು || ಮನಸಿಜಾರಿಯ ಭಜಿಸ ರೂಪವು ಕದನಕ್ಕೆದಿದುದು || ಕಳಕಳಿಸುತತ್ಯಧಿಕ ಕೋಪದಿ | ಖಳನನಸುತ ನಳಿನಲೋಚನ | ಪೆಳಸೆಳನೆಯಾರ್ಭಟದಿ ಪ್ರಳಯದ ಸಿಡಿಲ ಮಿಗಿಲಿಸುತ || ಹೊಳೆವ ಕುಂಡಲದಿವ್ಯಭೂಷಾ | ವಳಿಯ ದೀಧಿತಿಯಿಂದ ನಟಿಸುತ | ಕಳನ ಮಧ್ಯದಿ ನಿಂದು ಕರೆದನು ಡಂಭನನು ರಣಕೆ || ೭೫ ೭೬
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೧೪
ಗೋಚರ