ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕವಿಗಳನ್ನು ಹೇಳಿರಬಹುದು ಇದರಿಂದ ಕುಮಾರವ್ಯಾಸ ನಿತ್ಯಾತ್ಮ (16 ನೆಯ ಶತಮಾನ) ಅಕ್ಷ್ಮೀಶ{ 15 ಅಥವಾ 16ನೆಯ ಶತಮಾನ) ಇವರಿಗಿಂತ ಈಚಿನವನೆಂದು ಖಂಡಿತಮಾಡಬಹುದು. ಈತನ ವಾಕ್ಯ ಸರಣಿಯ, ಅರಿಸಮಾಸಪ್ರಯೋಗಗಳೂ, ಆಶಯವನ್ನು ತಿಳಿಸುವ ಕ್ರಮವೂ ಒಲುಮಟ್ಟಿಗೆ ಕುಮಾರವಾಲ್ಮೀಕಿಯ ಗ್ರಂಥ ವನ್ನು ಸ್ಮರಣಕ್ಕೆ ತರುವುದು, ಈ ಗ್ರಂಥವನ್ನು ಓದುವಲ್ಲಿ ಕುಮಾರವಾಲ್ಮೀಕಿಯ ತೊರವೆಯ ರಾಮಾಯಣವನ್ನು ಕವಿಯು ಓದಿಯೇ ಇರಬೇಕೆಂಬ ಅಭಿಪ್ರಾಯ ಹುಟ್ಟುತ್ತದೆ. ಕುಮಾರವಾಲ್ಮೀಕಿಯ ಹೆಸರನ್ನು ಏಕೆ ಸ್ಮರಿಸಲಿಲ್ಲವೋ ? 17 ನೆಯ ಶತಮಾನದ ಅಂತ್ಯಭಾಗದಲ್ಲಿ ಇದ್ದಿರಬಹುದೆಂದು ತೋರುತ್ತದೆ. ಕವಿಯು ಇನ್ನು ಯಾವ ಗ್ರಂಥವನ್ನು ಬರೆದಿರುವನೋ ಗೊತ್ತಿಲ್ಲ. ಇವನ ಹೆಸರನ್ನು ಆಧುನಿಕಕವಿಗಳು ಯಾರೂ ಹೇಳಿಲ್ಲ. -ಗಂಥವಿಚಾರಈ ಗ್ರಂಥಕ್ಕೆ ಕೃಏಾರ್ಜುನರ ಸಂಗರ, ಮತ್ತು ಗಯಚರಿತ್ರೆ) ಎಂಬ ಎರಡು ಹೆಸರುಗಳು ಇರುವಂತಿದೆ. ಇವೆರಡರಲ್ಲಿ ಕವಿಗೆ ಇಷ್ಟವಾದುದು ಮೊದಲ ನೆಯದು; ವಾಡಿಕೆಯಲ್ಲಿ ನಡೆದುಬಂದ ಹೆಸರು ಎರಡನೆಯದು, ಅದಕ್ಕಾಗಿ ಸಂಧಿ ೧.೧೫ ರಲ್ಲಿ ಕವಿಯು 'ಕೃಷ್ಣಾರ್ಜುನರ ಸಂಗರವ ಪೇಳುವೆನು' ಎಂದು ಹೇಳಿ ರುವನಲ್ಲದೆ, ಸಂಧಿ, ೨೬ ಸಂಧಿ,೭.೧೬ ರಲ್ಲಿ • ಹರಿಧನಂಜಯಚರಿತವನು ನಿಮಗೆ, ಪ್ರೇಮದಿಂದರುಹುವೆನು ಎಂದು ಸೂತಪೌರಾಣಿಕನಿಂದಲೂ ಹೇಳಿಸಿರುವವನು. ಮೇ ! ರೈ ಸರವರು ಕೃಷ್ಣಾರ್ಜುನರ ಸಂಗರ ಗಯಚರಿತ್ರೆ ಎಂಬ ಬೇರೆಬೇರೆ ಎರಡು ಗ್ರಂಥಗಳನ್ನು ಈ ಕವಿಯು ರಚಿಸಿದ್ದಾನೆಂದು ಹೇಳುವುದು ಭ್ರಮೆಯೇ ಸರಿ ಈ ಗ್ರಂಥದ ಕಥಾಗಮವನ್ನು ಕವಿಯು ಸಂಧಿ, ೨, ೧೮, ೧೯, ರಲ್ಲಿ ಸುಗ್ರಹಿಸಿ ಹೇಳಿರುತ್ತಾನೆ. ಈ ಗ್ರಂಥದಲ್ಲಿ ೨೭ ಸಂಧಿಗಳಿವೆ, ಪ್ರತಿಸಂಧಿಗಳಲ್ಲಿರುವ ಪದಗಳ ಸಂಖ್ಯೆ ಯು ಕಥಾಸೂಚಿಯಿಂದ ಗೊತ್ತಾಗುತ್ತದೆ. ಕವಿಯು ತನ್ನ ಈ ಗ್ರಂಥಕ್ಕೆ 1 ಮಹಾ ಭಾರತದೊಳೆಸೆವ ಸನಾಮ ವನಪರ್ವದೊಳಗುದಿಸಿದ ರಾಮಣೀಯಕ ಹರಿಧನಂ ಜಯಚರಿತವೇ' ಆಧಾರವೆಂದು ಹೇಳುತ್ತಾನೆ (A೦ ೨.೧೬) ಆದರೆ ಈಗ ಮುದ್ರಿತ ವಾಗಿ ಪ್ರಚಾರದಲ್ಲಿರುವ ವ್ಯಾಸಮಹರ್ಷಿಿಕವಾದ ಮಹಾಭಾರತದ ವನ ಪರ್ವದಲ್ಲಿ ಈ ಕಥೆಯು ಇಲ್ಲ. ಕಥೆಯೇನೋ ಬಹು ಪ್ರಸಿದ್ಧವಾಗಿದೆ. ವಿಚಾರ ಮಾಡುವಲ್ಲಿ ಈ ಕಥಾಭಾಗವು ಮಹಾಪರ್ವತದಲ್ಲಿ ಪ್ರವಾದದಿಂದ ಉಕ್ತವಾಗಿರಲಿ - R® |