ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಕು, ಇಲ್ಲವೆ ಕವಿಯು ಸುಳ್ಳು ಹೇಳಿರಬೇಕು? ಕವಿಯು ಸುಳ್ಳು ಹೇಳಲು ಕಾರಣ ವಿಲ್ಲ. ಈ ಕಥಾಭಾಗವು ಮಹಾಭಾರತದ ಕೋಶಗಳಲ್ಲೆಲ್ಲಾ ಬಿಟ್ಟು ಹೋಗಿರಲು ಕಾರಣವಿಲ್ಲ, ಹೀಗಿರುವುದರಿಂದ ಈ ಕಥೆಯು ಬೇರೆ ಯಾವುದೋ ಮಹಾಭಾರತ ದಲ್ಲಿ ಇದ್ದಿರಬೇಕು, ಆ ಮಹಾಭಾರತ ಯಾವುದೋ ಗೊತ್ತಿಲ್ಲ. ವೈಶಂಪಾಯನ ಮಹಾಭಾರತದಲ್ಲಿ ಈ ಕಥೆಯದೆಯೆಂದು ಕೆಲವರು ಹೇಳುತ್ತಾರೆ. ಇದೆ ಕಥೆಯನ್ನು ಕೃಷ್ಣಾರ್ಜುನರ ಕಾಳೆಗ' ವೆಂಬ ಹೆಸರಿನಿಂದ ಎಂಬಾ ಚಯ್ಯ ಕವಿಯು ಸಾಂಗತ್ಯದಲ್ಲಿ ಬರೆದಿದ್ದಾನೆ, ಮತ್ತೊಬ್ಬ ಕವಿಯು ಕೃಷ್ಣಾ ರ್ಜುನರ ಸಂಗಾಮ ಎಂಬ ಹೆಸರಿನಿಂದ ಯಕ್ಷಗಾನದಲ್ಲಿ ಬರೆದಿದ್ದಾನೆ ಮುಮ್ಮಡಿ ಕೃಷ್ಣರಾಜಒಡೆಯರವರ ಅಳಿಯಂದಿರು ಲಿಂಗರಾಜೇಅರಸಿನರು ಈ ಕಥೆಯನ್ನು ಗಾನವಾಗಿಯ, ಚಂಪುವಾಗಿಯೂ ಬರೆದಿದ್ದಾರೆ. ಇವರೆಲ್ಲರೂ ತಮ್ಮ ಈ ಗ್ರಂಥ ವನ್ನು ಗಯಚರಿತ್ರೆಯೆಂದು ಕರೆದಿರುವರು. -ಮುದ್ರಣ ಈ ಗ್ರಂಥವನ್ನು ಮೂರು ಪ್ರತಿಗಳ ಸಹಾಯದಿಂದ ಮದ್ರಿಸಿದ್ದೇವೆ:- 1. ಕಾವ್ಯ ಕಲಾನಿಧಿ ಭಂಡಾರದ ಪುಸ್ತಕ. 2. ಮೈಸೂರು ಸರ್ಕಾರದ ಓರಿಯಂಟಲ್ ಲೈಬ್ರೇರಿಯ ಪುಸ್ತಕ. 3. ಮ||ರಾ|| ಮಾಗಡಿ ಸ್ಕೂಲ್ ಮಾಸ್ಟರ್, ಕೆ, ರಾಮಸ್ವಾಮಿ ಅಯ್ಯಂ ಗಾತ್ರ ಪುಸ್ತಕ. ಇವೆಲ್ಲವೂ ಬರೆದ ಪುಸ್ತಕಗಳು; ಬಹಳ ಅಶುದ್ಧವಾದುವು. ಪ್ರತಿಗಳನ್ನು ಕೊಟ್ಟು ದಯಮಾಡಿದವರಿಗೆ ನಮ್ಮ ವಿನಂತಿ ಇದೆ.