೧೨] ೧೨೭ ೧೭ ೧೮ ಗಯಚರಿತ್ರೆ 'ಟಿಕ ಸಪ್ಲೋಪಾಯದಿಂದಲಿ | ತಿಳಿದು ಬೇಗದಿ ಗಯನನೊಪ್ಪಿಸಿ | ಕಳೆದು ಕಲ್ಕ ಷರಹಿತನಾಗೆಮ್ಮೊಡನೆ ಮೊದಲಿರ್ದ || ಬಳಕೆಯಿಂದಾಮಯನೆಣಿಸದೆ | ಇಳೆಯೊಳುತ್ತಮನೆನಿಸಿ ಮುನ್ನಿ ನ | ಗೆಳೆತನದೊಳಿಹುದೆಂದು ನರನೊಡನುಸಿರು ಹೋಗೆಂದ || ಎನೆ ಹಸಾದವೆನುತ್ತ ಮಧುಸೂ | ದನಗಾಗಿಯಕರ ನರನಿಹ | ವನಕೆ ಬಂದನು ಕಂಡನಾಕ್ಷಣ ಧರ್ಮನಂದನನ || ವಿನಯಮಂ ಕೈಕೊಂಡು ಮನದೊಳು | ಘನೆಹರುಷಮಂ ತಾಳಿ ಬಟಣ ಕನೆ | ಜನಪತಿಯ ನುಡಿಸಿದನು ಕುಶಲವ ಕೇಳ ಎನಯಲಿ || - ಕುಶಲವೆಮಗಳೂರ ಕೇಳ್ಳೆ | ಬಿಸಜನಾಭ ಮನೋಜ ಹಲಧರ || ವಸುಮತೀ ಪತಿ ದೇವಕೀದೇವಿಯರು ಮೊದಲಾದ | ಶಶಿವದನೆಯರು ಬಂಧುವರ್ಗವು | ಹಸನೆ ತಮ್ಮ ನು ಮತ್ತೆ ನೆನೆವನೆ | ಅಸುರಮರ್ದನನೆಂದು ಕೇಳಿದನರಸ ವಿನಯದಲಿ || ಇಂದಿಗೆಲ್ಲರು ಕುಶಲ ಶ್ರೀಗೋ | ವಿಂದನನುದಿನ ನಿಮ್ಮ ಕಥನವ | ನಂದು ಮಿಗಿಲೆಣಿಸುತ್ತ ಕೊಂಡಾಡುವನು ಮುದದಿಂದ || ಇಂದು ಕುಲದಗ್ಗಳರು ಬಾಂಧವ | ವೃಂದದೊಳಗುತ್ತಮರು ಪಾಂಡವ || ರೆಂದು ಒ° ಕೀತೆ ದಲಿರುತಿಹರೆಂದನಕರ | ತಂದೆಯಾತನು ನಮಗೆ ಸಲಹುವ | ಬಂಧ: ವಾತನು ಬಳಗವಾಗೋ | ವಿಂದನಲ್ಲದೆ ಬೇರೆ ತಮಗನ್ಯತ್ರ ಗತಿಯುಂಟೆ || ಕಂದು ಕಸರಿಕೆಯಿಲ್ಲವೆನ್ನೊಳ | ಗಿಂದು ಪರಿಯಂತರವು ನೀ ಕೇ। ಳೆಂದು ಹರಿಯ ಗುಣಾವಳಿಯ ಕೆಂಡಾದಿದನು ಭೂಪ | ೧೯ ೨೧ ೨೧
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೩೯
ಗೋಚರ