ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೫, ಗಯಚರಿತ್ರೆ ಹದಿನೈದನೆಯ ಸಂಧಿ. (Mುನ ಸೂಚನೆ ಹಲವು ನಯಭಯನೀತಿಮಾರ್ಗದಿ | ತಿಳುಹಿ ಪಾರ್ಥನ ಗಯನ ಕಳುಹೆನ | ಚಲವದದಿ ಕೆದೆನೆನಲು ಮರಳಿ ಸುಭದ್ರೆ ಗಮಿಸಿದಳು || ಕೇಳು ಜನಮೇಜಯಧರಿತ್ರೀ | ಪಾಲ ಸತಿಕುಲಮೌಳಿಮಾಣಿಕ | ತಾಳುತತಿಚಿಂತೆಯಲಿ ಬರುತಿರಲದಕೆ ಕಡುನೊಂದು | ಲೋಲಲೋಚನೆ ದ್ರುಪದಸುತೆ ಸಿರಿ | ಲೋಲನನುಜೆಯ ಕರೆದು ಕಂಗಳ | ಬಾಳ ಬಲವನು ತೊಡೆದು ಕಳುಹಿದಳಾತ್ಮವರನೆಡೆಗೆ || ವನಿತೆ ಒಂದಳು ಕಚಕುಚಂಗಳ | ಘನಭರಕೆ ಕೃಶವಾದ ನಡುವಿನ || ಲನುವನದಜ ಕಟ್ಟಿ ಬಿಟ್ಟನೊ ಹೇಮನಿರ್ಮಿತದಿ | ಎನೆ ಮೆರೆಯಲೊಡ್ಯಾಣನೂಪುರ | ಎನರುಚಿಯ ಮಣಿಖಚಿತ ಕಂಕಣ | ದನಿ ಮೆಲರೆಯ ಜನನಾಥನೆಡೆಗೆಯಂದಳಾ ಕಾಂತೆ || - ಅಡಿಗಡಿಗೆ ನಿಂದಿರುತ ಸೋಲುತ || ಬಿಡುಮುಡಿಯನೊಂದಿಸುತ ಕರದಲಿ | ಕಡಗಗಳ ನೈತಿಡುತ ಸಖಿಯರ ನುಡಿಯ ಲಾಲಿಸುತ || ತಡೆವ ಲತೆಗಳನತ್ತ ನೂಕುತ | ಬಡನಡುವನಲುಗಿಸುತ ಬೆಡಗಿನ | ಸಡಗರದಲೀ ಸುತ ಬಂದಳು ಭಾಮೆ ಪತಿಯೆಡೆಗೆ || ನಿಯನೊಯಾರಿಸುತ ಕೊರಳಲಿ | ಮೆರೆವ ಹಾರವ ತಿರಿವಿ ಹಾಯ್ಕುತ | ಭರದ ಗಮನಕೆ ಜಾKತಿಹ ಮೇಲುದನು ಸೈತಿಡುತ || ಕುರುಳ ತಿದ್ದುತ ಮನಸಿಜನ ಮದ | ಕವೊಲಾಪರಿಪರಿಯ ಕುಸುಮವ | ನಸಿ ಕೊಯ್ಯುತ ಬಂದಳಂಗನೆ ಮಂದಗಮನದಲಿ ||