ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ೦ ೨೧ ಗಯಚರಿತ್ರೆ ವೇಂಕಟಾಚಲಪತಿಗೆ ಭಾಸುರ | ಪಂಕಜಾಪ್ತ ಸುತಗೆ ನಿರುಪಮ | ಸಂಕರುಷಣಗೆ ಬ್ರಹ್ಮಸುರಪತಿಮುಖ್ಯರೊಡೆಯಂಗೆ | ಪಂಕಜಾಕೀರಮಣಗಮಲಸು | ಪಂಕರುಹನಾಭಗೆ ಜಗತ್ಪತಿ | ವೆಂಕಟೇಶಗೆ ಕೊಡುವೆ ನಾ ರಚಿಸಿದ ಮಹಾಕೃತಿಯ | ಆದಿಮೂರ್ತಿಗೆ ಹರಿಗೆ ಯಗಣಿತ | ವೇದಮಯವೇದಾಂತವೇದ್ಯಗೆ | ಮೇದಿನೀಪತಿಯಂಬರೀಷವಿಭೀಷಣಾದಿಗಳ | ಸಾದರದಿ ರಕ್ಷಿಸಿದ ವಿಮಲ ಪಿ | ನೋದವಿಗ್ರಹನೆನಿಪ ಬಹಳ | ಪೋದಧಿಗೆ ಶ್ರೀ ವೆಂಕಟೇಶಗೆ ಕೊಡುವೆನೀಕೃತಿಯ || - ಅಂಬುಜಾಕ್ಷಿಯ ಕಾದ ದೇವಗೆ | ಶಂಬರಾರಿಯ ಪಡೆದ ಸಾಮಿಗೆ | ಆಂಬುರುಹಭವ ಸೂತಮನುಮುನಿಪಾಲಗಚ್ಯುತಗೆ || ಕಂಬುಕಂಠ ವಿಶಾಲವಕ್ಷಗೆ | ಕಂಬುಚಕ್ರಗದಾಬ್ಬಪಾಣಿಗೆ | ನಂಬಿದವರನು ಸಲಹುವರಸಗೆ ಕೊಡುವೆನೀಕೃತಿಯ || ಜಲಜ ಕಚ್ಛಪ ಕ್ರೋಡರೂಪಗೆ | ಲಲಿತ ನರಮೃಗವೇಷಧಾರಿಗೆ | ಬಲರಿಪ್ರವಿನನುಜಂಗೆ ಭಾರ್ಗವರಾಮ ರಾಘವಗೆ | ಬಲಗೆ ಬೌದ್ದಾ ಕೃತಿಯ ತಾಳಗೆ | ಲಲಿತ ತುರಗಾರೂಢನಾದಗೆ | ಯೊಲವಿನಿಂದರ್ಷಿಸುವೆನಾರಚಿಸಿದ ಮಹಾಕೃತಿಯ || ಕೋಟಿಸೂಯ್ಯದ್ಯುತಿ ಘನಾಂಗಗೆ | ಕೊಟಿಸುರಪತಿಭೋಗವುಳ್ಳಗೆ | ಕೋಟಿ ಬೊಮ್ಮರಿಗೆಸೆವ ರಾಜಸಗುಣಸಮಗ್ರ೦ಗೆ || ಕೋಟಿಮಹಿಮಾನ್ವಿತಗೆ ಮನ್ಮಥ | ಕೋಟಿಸೌಂದರಯುತಗೆ ಕೊಟ್ಟೆನು | ವಾಟೆನಿಪ ಸಕ್ಕತಿಯ ತಿರುವೇಂಕಟಕೃಪಾನಿಧಿಗೆ || ೨೨ ೨೪