೧೯೫ ೧೮] ಗಯಚರಿತ್ರೆ ಗರುಡ ಕಿನ್ನರ ಯಕ್ಷ ರಾಕ್ಷಸ | ರುರಗ ವಸು ಗಂಧರ್ವ ಗುಹ್ಯ || ವರಮರುದ್ದಣ ಸಿದ್ದ ಸಾಧ್ಯ ಪ್ರಮುಖದೇವತತಿ || ತರಣಿಚಂದ್ರಮಕುಲದೊಳೊಪ್ಪುವ | ನರಪತಿಗಳಪರಿಮಿತ ನೆರೆದುದು | ಹರಿಧನಂಜಯರದ್ಭುತಾಜಿಯ ನೋಡಲಭದಲಿ || ಹರಿ ಬಳಿಕ ವರಪಾಂಚಜನ್ಯವ | ತ್ವರಿತದಿಂ ದನಿಗೊಳಿಸೆ ಸಚರಾ || ಚರವದೆಲ್ಲವು ತಲ್ಲಣಿಸಿತಾಕ್ಷಣಕೆ ಪಾಂಡವರು || ಇರವು ತಾನೆಂತೆನುತಲಿರ್ದುದು | ನೆರೆದ ಗಗನೇಚರರು ಕೇಳ್ಳೆ | ಭರತವಂಶಲಲಾಮ ಜನಮೇಜಯಮಹೀಪಾಲ | ಕೇಳಿದನು ಯಮಸೂನು ಸಮರಾ | ಭೀಳಪಟುತರಪಾಂಚಜನ್ಯದ | ಮೇಲುರವವನು ಭೀಮದುರೊಧನರು ಮೊದಲಾದ 11, ಕಾಳೆಗದ ಕಡುಗಲಿಗಳಿಗೆ ತಾ | ಹೇಳಿದನು ಹರಿ ಸಕಲಸೇನಾ | ಚಾಳಸಹಿತಾಹವಕೆ ನಿಂದಿಹನಿ ದು ನಡೆತಂದ || ಕದನಸವರಣೆಗಳಲಿ ನಡೆವುದು | ಮದಮುಖರು ಮುಂಗೊಳದೆ ಸುವಿಚಾ | ರದಲ ಮೇಲಣ ತಾಗುಬಾಗಿನ ಸ್ಕೂಲಸಕ್ಷಗಳ | ಹದನ' ತು ಕೈಮಾಳ್ಳುದೆಂದಾ || ವಿಧವನೆಲ್ಲವ ತಿಳುಹಿ ಕರುಣಾ | ಸ್ಪದನು ಕಳುಹಿದನಖಳಪರಿವಾರವನು ಸಂಗರಕೆ | ಬಂದು ಕುರುಪತಿ ನೃಪನ ಚರಣ | ದ್ವಂದ್ವದಲಿ ತಲೆವಾಗಿ ಕೇಳೆ | ನ್ನೊಂದು ಭಾಷೆಯನಿದಕೆಣಿಕೆಗೊಳಲೇಕೆ ಸಹಭವನ || ಬಂಧುರದ ರಣಕೌಶಲವ ಸೀ | ನಿಂದು ನೋಡಲು ಕಣ್ಣೆ ಹಬ್ಬವ || ತಂದಡಲ್ಲದೆ ಮಾಣೆ ತವಸದದಾಣೆ ತಾನೆಂದ ||
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೦೭
ಗೋಚರ