ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಂಧಿ ೬ ಕರ್ಣಾಟಕ ಕಾವ್ಯಕಲಾನಿಧಿ ಅನುದಿನವು ಜಪ ತಪ ನಿಯಮ ವರ | ಘನತರ ಸ್ವಾಧ್ಯಾಯ ತತ್ವವ | ನೊನರಿಸುತಲೀಪರಿಯೊಳಾನೀಪುಣ್ಯಭೂಮಿಯಲಿ || ದಿನಗಳೆವೆ ಸತ್ಯದಿಂದವೆ | ವನಜನಾಭಕಥಾಸುಧಾರಸ || ವನು ಸವಿದು ಸಂತುಷ್ಟರಾಗುವ ಸಮಯ ದೊರಕಿತಲಾ || - ಈವಿಧದೊಳಿರುತಿರ್ಪ ವರನತಿ | ಪಾವನವ ಮಾಡುವ ಮಹಾತ್ಮರು | ನೀವಲೇ ಕೃಪೆಯಿಂದತ್ತಮವಾದ ಹರಿಕಥೆಯ || ಭಾವಶುದ್ದಿಯೊಳುಹಿ ಕರುಣದಿ | ಭೋವಿ ಸುಕೃತಿಗಳಪ್ಪ ತೆದಲಿ | ಕಾವುದೆಂದಾತನನು ನುತಿಮಾಡಿದುದು ಮುನಿನಿಕರ | ಎನಲು ಹರುಷಿತನಾಗಿ ಸೂತನು | ಮನದೊಳಗೆ ಸಂಭ್ರಮಿಸಿ ಶಿವಶಿವ | ಎನಗಿನಿತು ಬಗೆಗಳಲಿ ಸನ್ನು ತಿಯೇಕಪ್ರಾಕೃತದ || ಮುನಿಗಳೇ ನೀವಾದಿಪುರುಷನ | ತನುಗಳಲ್ಲಾ ನೋಡೆ ನಿಮ್ಮಯ | ಘನಚರಿತ್ರವ ಕೇಳವರು ಕೃತಕೃತ್ಯರಹರೆಂದ | ಮನೆಗೆ ಮನವಾರತೆಗೆ ವಿತ್ತಕೆ | ವನಿತೆಯರಿಗಭಿಲಾಷೆ ಮಾಡದೆ | ಮನದೊಳುಕ್ಕಿಯೊಳಂಗದಲಿ ಹರಿದೈವ ಗುರುವೆಂದು | ಅನುನಯದೊಳೆಂಬಿಟ್ಟು ಹರಿಸದ | ವನಜಸೇವೆಯೊಳಿರ್ಪ ಮಹಿಮರ | ನನುಕರಿಸುವವೆ ಪಾಪಜಡತೆಗಳೆಂದನಾಸೂತ || - ಆವ ಹರಿಕಥೆಯಿದಕೆ ಪಾಸಟಿ | ಯಾವ ಷೋಡಶದಾನ ಸದೃಶ ಮ | ಹಾವನಾಂತರದಲ್ಲಿ ಸತ್ಕರ್ಮಗಳೊಳೆಡಬಿಡದೆ | ಭಾವಜನ ಪಿತನಂಘಿಪೂಜೆಯ || ಭಾವಶುದ್ದಿಯೊಳೆಸೆದು ಮಾಡುವ | ಪಾವನಿಗಳೆ ನೀವು ನಿಮಗಿನ್ನಾರು ಸರಿಯೆಂದ || ೧೦ ೧೧