೨೨೨ ಕರ್ಣಾಟಕ ಕಾವ್ಯಕಲಾನಿಧಿ {ಸಂಧಿ ೨ಳ 40 ಸರಸಿಜಾಸನರುದ್ರದಿಕಾ | ಲರುಗಳೊಂದಾಗಿವನ ಸಹಯಕೆ | ಬರಲಿ ನಿಮಿಷಕೆ ಗೆಲುವೆನವರನು ಬಗೆವೆನೇ ನರನ | ಕೊರತೆಯೊಂದಿದೆ ತನಗೆ ತಂಗೆಯ | ಕೊರಳ ಘನಮಾಂಗಲ್ಯ ಸೂತ್ರ ! ಸ್ಮರಣೆ ಬಹುದದಿ೦ದ ಸೈರಿಸ ಬೇಹುದವಗೆಂದ |). - ಅದಕು ಮಾತೇನಂತಿರಲಿ ತೋ | 'ದೆ ಮಹೀಶರ ಸೇನೆಯನು ನೀ | ಮುದದಿ ಪಾರ್ಥನ ಭೀಮಯಮಳರ ಮುಖ್ಯರಾದವರ || ಪದುಮನಾಭನೆ ಧರ್ಮಜನದೆ | ಇದಳಗೆ ಕಾಣಿಸನು ನರನಾ | ಸ್ಪದದಲಿಹ ಗಯನೆಲ್ಲಿ ಹೇಳೆನಗೆಂದನಾರಾಮ || ಅರಸನಿಹನಾನರನ ಬಲಕು | ತರದ ಹಿಂಭಾಗದಲಿ ಭೂಸುರ | ವರರ ಮಧ್ಯದೊಳನುಜನೆನುವರದಾಗುಹೋಗುಗಳ || ಪರಿವಿಡಿಯ ಜಯಲಾಭವಾರ್ತೆಯ | ನರಿವನಕ ಬಳಿಕಲ್ಲಿ ಬ್ರೌಪದಿ | ವೆರಸಿ ಕಾನನಭೂಮಿಯಲಿ ಚಿಂತಿಸುತ ಮನದೊಳಗೆ || - ಅರಿಯಿಹನು ಫಲುಗುಣನ ಬೆನ್ನಿ ನ | ಮರೆಯಲಮಳಾಸ್ತ್ರಗಳ ಧರಿಸಿಹ | ವರನಿಷಂಗದ ಮಧ್ಯದೇಶದಿ ಬಲನೆ ಚಿತ್ರ ಸು || ತೆರನಿದೀಗರ್ಜುನನುಪಾಯದಿ | ಹರಣ ತನಗಂತರಿಸುವನ್ನೆ ಗ | ಮ' ಎನಿಂಸಲಹುವೆನು ಖಚರನನೆಂಬ ಭರದಿಂದ || ಈ ಪರಿಯಲಸುರಾರಿ ರಾಮಂ | ಗಾಪರಾಕ್ರಮಪಾರ್ಥಸೇನೆಯ | ಸೈಪಿನಿಂ ತೋ ಸಲು ತಲೆದೂಗುತ್ತ ಬಲರಾಮ |! ಚಾಪವನು ಧ್ವನಿಮಾಡೆ ಕೆದಕ್' ತು | ಶ್ರೀಪತಿಯ ತಿರುವೇಂಕಟನ ಬಲ | ಭೂಪ ಜನಮೇಜಯನೆ ಮುಂದಣ ಕಥೆಯನಾಲಿಪುದು || ಗಿ A೨ ೩೩ ಅಂತು ಸಂಧಿ ೨೦ ಕ್ಕ° ಪದ ೧೧೦೬ ಕ್ಕಂ ಮಂಗಳಂ.
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೩೪
ಗೋಚರ