ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ [ಸಂಧಿ ಕರ್ಣಾಟಕ ಕಾವ್ಯಕಲಾನಿಧಿ | ಮನೆಯ ಸಂಧಿ ಸೂಚನೆ ವಿವರಿಸಿದನಾದ್ಯಾರಕಿಯ ನಿಜ : ವಿವಿಧ ಸೌಭಾಗ್ಯದ ವಿಚಿತ್ರವ | ನವನಿಗಿದು ಪೊಸತನಲು ವೈಶಂಪಾಯನಾನೃಪಗೆ | ಕೇಳಿದ್ರೆ ಶಶಿವಂಶವೃಪವರ | ಮೌಳಿಮಣಿ ಜನಮೇಜಯನೆ ಸುವಿ | ಶಾಳಹರಿತಾರಿತ್ರವಾರ್ಧಿಯೊಳೊಂದು ಶೀಕರವ || ಸೇಟಲರಿದುರಗಾಧಿಪಗೆ ರಸ | ನಾಳಿ ಪಡೆದಂಗೆಂತೆನಗೆ ಸಿರಿ | ಲೋಲನಗ್ಗದ ಕಥೆಯನು ಹಿಂದನಾ ಮುನಿಪ || - ಏನನೆಂಬೆನು ದ್ವಾರಕಿಯ ರಚ | ನಾನು ರಂಜಿತವನು ಧರೆಯೊಳಿಹ | ಮಾನವರ ನಗರಿಗಳ ನಾಯಕರತ್ನ ದಂತೆಸೆವ || ದಾನವಾಮರಮರ್ತ್ಯರೊಳಗಸ | ಮಾನವಾಗಿಹುದದಕೆ ಪಡಿಯಿಡೆ | ಸೂನಶರಪಿತನ” ವನಲ್ಲದೆ ಕಾಣೆ ತಾನೆಂದ | ಪರಿಧಿಪರಿವೃತದಿಂದ ಮೆರೆದಿಹ | ತರಣಿಮಂಡಲದಂತೆ ನಗರಕೆ | ಸುಖೆ ತಾನೊಪ್ಪಿಹುದು ನೋಡಲಸಾಧ್ಯ ಬಿತ್ತರವ || ಸುರುಚಿರಾಮಲಹೇಮಮಯಬಂ | ಧುರ ಸುಕೋಟಾವಳಯ ಮಿಗೆ ಯ | ಕ್ಷೌರಿಯುತಾಧುವಮಂಡಲವನೆಸಗಿಪ್ಪುದೇವೇ || ನಿಲವ ನೋಡುವೆನೀಪುರದ ನಿಜ | ವಲಯಸಹಿತವೆನುತ್ತ ಫಣಿಪನು | ನೆಲನನುಜದತಿವೇಗದಿಂದವೆ ಪೋಗುತಿರಲೊಡನೆ || ಸಲೆ ದ್ವಿಜನ ಕಾಣುತ್ತ ಮುಂದಕೆ | ತಳರಲನುಚಿತವೆಂದು ನಿಂದೋಲು | ಬಳಸಿಕೊಂಡಿಹ ಕೋಟೆ ಮೆರೆದುದು ರಜತನಿರ್ಮಿತದಿ | ೪