೨೬೨ 40 ೯೧ ಕರ್ಣಾಟಕ ಕಾವ್ಯ ಕಲಾನಿಧಿ [ ಸಂಧಿ ನೋಡಿದನು ದಾನವನ ಹರುಷದೊ | ೪ಾಡಿದನು ಬಳಕೇಸು ರಾಕ್ಷಸ | ಬೀಡುಗಳೊಳಗ್ಗ ಳನು ನೀನಹೆ ಗುಣಕೆ ಮತ್ಸರವೆ || ಪಾಡ ಕಾಣೆನು ನಿನಗೆ ಸೈರಿಸು || ಖೋಡಿಗಳೆಯದೆ ತನ್ನ ಬಾಣವ | ನೀಡಿರಿದು ನೀ ಕಡಿದಡತಿಬಲನಹುದಲೇ ಎಂದ || ಎಂದು ರುಕ್ಕಿಣಿಯರಸ ಕಾರ್ಮುಕ | ಕೊಂದು ಮೇಘಾಸ್ತ್ರವನು ಸಂಧಿಸಿ | ಮಂದಮತಿ ದನುಜಾಧಮನೆ ನೀನಿಂದಿದ& ಸರಿಸದಲಿ || ನಿಂದೆಯಾದಡೆ ಸರಳು ನಿನ್ನ ನು || ಕೊಂದಡಲ್ಲದೆ ಬಿಡದು ಸಾರಿದೆ | ನಿಂದಿರದೆ ನೀ ಹೋಗು ಹೋಗೆಲೆ ಮರುಳೆ ಹೋಗೆಂದ || ತೆರಳುವೆನೆ ಗೋಪಾಲ ನಿನಗೀ | ಮರುಳುತನವೇಕೆಮ್ಮೊಡನೆ ಬಹ | ಶರವ ಕಡಿವೆನು ಚಿತ್ರದಿಂದ ಜನ ಸದದಾಣೆ || ತ್ವರಿತದಿಂ ಹೂಡೆನಲು ಮಿಗೆ ಮುರ | ಹರನೆಸಲು ಮಧ್ಯದಲಿ ಬರುತಿಹ | ಶರವನಿಕ್ಕಡಿಮಾಡಿ ಖಂಡಿಸಿ ದೈತ್ಯ ಬೊಬ್ಬಿದ || ಕೆಡೆದು ಹಿಂದಣ ಭಾಗವವನಿಗೆ | ಸಿಡಿದು ಬಿದ್ದುದು, ಮುಂದಣರ್ಧವು | ಝಡಿತೆಯಲಿ ದಾನವನ ಶಿರವನು ಕೊಂಡು ನಭಕಡರಿ | ಒಡನೆ ಬಿದ್ದು ದು ಧರೆಗೆ, ದಿಕ್ಕರಿ | ಯೆಡೆಗೆಡೆಯೆ ಭೂಕಂಪವೆಸೆಯಲು | ಕಡುಮುದದಿ ತಿರುವೇಂಕಟೇಶನು ನಲಿದು ಬೊಬ್ಬಿ' ದ | < ಅಂತು ಸಂಧಿ ೨೩ ಕ್ಕಂ ಪದ ೧೫೨೭ ಕ್ಕಂ ಮಂಗಳಂ.
- ಅಜಿ
೯೨