ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ [ ಸಂಧಿ ಇ ) 9 ಕರ್ಣಾಟಕ ಕಾವ್ಯಕಲಾನಿಧಿ ಮರಕತಂಗಳ ಜಗಲಿ ನೀಲದಿ | ವಿರಚಿಸಿದ ಭಿತ್ತಿಗಳು ಪಳು ಕಿನ | ತರತರದ ನೆಲಗಟ್ಟು ಬಟ್ಟರಮಯದ ಕಂಭಗಳು | ಉರುತರದ ವೈಡೂರ್ಯನಿರ್ಮಿತ | ವರಮದನಕರರಾಚಿಯೆಸೆದಿಹ | ಪರಿಯನದನೇನೆಂಬೆನಾಚಾವಡಿಯ ಚಿತ್ರವನು | ಜಗಜಗಿಪ ಗೋಮೇದಕದ ಬೊ | ದಿಗೆಗಳ ಗಣಿತವಷ್ಟರಾಗದ | ಹೊಗರೊಗುವ ತೊಲೆ ಚಿಂತೆ ಮಾಣಿಕದ ಸುಲೋವೆಗಳು | ಬಗೆಬಗೆಯ ಲೌಕಿಕದ ನಸಕ | ನಗುವ ಸವಳದ ಪ್ರತಿಮೆಗಳಿಗು | ಮಿಗೆಯ ಸ್ವರ್ಣದ ಪದಕ ರಾಜಿಸುತಿಹವು ಕೇಳೆಂದ || ಅತಿಶಯದಿ ಮುಕುರಗಳ ನಿಟ್ಟಿಸ | ಗತಿಗತಿಗೆ ನಾಟ್ಯಗಳನಾಡುವ | ರತಿ ಕಲಾಪ್ರೌಢಿಗಳ ಬಂಧವ ತೋರ್ಪ ವೀಣೆಗಳ | ಚತುರತೆಗಳೆಡಬಿಡದೆ ನುಡಿಯಿತ | ಕೃತಕವಿಪುಪಾಯಮಾರ್ಗದ | ಪ್ರತಿಮೆಗಳು ಸಚ್ಚಿವಭಾವದಲೆಸೆಯುತಿಹುವೆಂದ | - ಫಣೆಗೆ ತಿಲುಕವನಿಡುವ ರಮಾ | ರ್ಗಣಗಳನು ಕರಗಳಲಿ ಧರಿಸಿಹ | ಗೆಣೆಯರನು ಕಣ್ಣನ್ನೆ ಯಲಿ ಮಾತಾಡಿಸುತ್ತಿರುವ || ಮಣಿಮಯ ದ ಹಾರಗಳ ತಿರುಹುವ ! ಗಿಣಿಗಳಿಗೆ ನುಡಿಗಳನ್ನು ಕಲಿಸುವ | ಗಣಿಕೆಯರ ಭಾವಗಳ ಪ್ರತಿಮೆಗಳೆಸೆದುವಗಲದಲಿ || ಕೊನೆವೆರಳ ನೆಲಕ' ತಪಗಳ | ನೊನರಿಸುವ ತಲೆಕೆಳಗುಮಾಡಿಯೆ | ವಿನುತನಿಷ್ಟೆಗಳನ್ನು ನೆಗಪ ಯೋಗವೃತ್ತಿಗಳ | ಬಿನದಿಸುವ ಭಯಭಕ್ತಿಯಿಂದಲಿ || ಮನದ ದೃಢದೊಗುಮಿಗೆಯಲರ್ಚಿಸು | ವನುನಯದ ಭಾವಗಳ ಮುನಿಭಂಜಿಕೆಗಳೆಸೆದಿಹುವು || ೫ ೨

೩೪.