೨೬] ೩೧೩ ೪೫ ೪೬ ಗಯಚರಿತ್ರ ಏನನೆಂಬೆನು ಪಕ್ಷಯುಗಳದಿ | ನ್ಯೂನವಿಲ್ಲದೆ ಜನಿಸಿದಾಪವ | ಮಾನನುರುವಣೆಗಖಿಳ ಗಿರಿಕುಲ ಚಲಿಸೆ ವೃಕ್ಷಗಳು | ಭೂನಭೋ೦ತರಕಡರಲಂಬುಧಿ ತಾ ನೆಗೆದು ತುಳುಕಾಡೆ ಜಗದಳಿ | ಎನಿಮಿಷ ಕಾಯ್ದೆಂಬೋಲುದಿಶಿದುವಮಿತಗರುಡಾಳಿ || ಏಸು ಭೋಗಿಗಳಿರ್ಪವಗಣಿತ | ಕೈಸು ಖಗಪತಿರೂಪರಾಗೆ ಶ | ಭಾಸೆನುತ ಕಲಿಪಾರ್ಥ ನಸುನಗುತುರಗಸಂಕುಲವ || ಮಾಸಲಳಿಯದೆ ಕಬಳಗೊಂಡು ನಿ | ವಾಸಕ್ಕೆದುವುದೆನುತ ನೇಮಿಸ | ಲೈಸುವನು ನಿರ್ಣೇಸಿ ಮರಳಿದುವಮಿತಗರುಡಾಳಿ || ಏನ ಹೇಳುವೆನರ್ಜುನನ ಸಂ | ಧಾನಶರಚಾತುರಿಮಹಾಯ | ದಾನವಾಂತಕನೇ ಕೊಂಡಿಹ ಗರುಡಕುಲಮುಳಿದು || ಸೂನಶರಪಿತನೆಚ್ಚ ಫಣಿಸಂ | ತಾನವನು ನಿರ್ಷ್ಠೆಸಿ ಮರಳಿದು | ವೇನು ಚಿತ್ರವೊ ಜ್ಞಾತಿಮತ್ಸರದಾಯಿತೋನ್ನತಿಯ || ಒಡನೆ ತೊಟ್ಟು ಪರ್ವತಾಗ್ಯವ | ಜದಧಿಶಯನನು ನರನದಕ ವಿ೦ | ಗಡಿಸುತೆಚ್ಚನು ಕುಲಿಶಬಾಣವ ಅಸುರಹರನದಕೆ | ಕಡುಮುಳಿದು ಧಾರಾಧರಾಗ್ಯವ | ತೊಡಲು ಪಾರ್ಥ ಪ್ರಭಂಜನಾಸ್ತ್ರದಿ | ಕೆಡೆಯಿಸಲು ಬಯಲಾಯ್ತು ಮೇಘಸಮೂಹ ನಿಮಿಷದಲಿ || ೪೮ ಕಂಡನಸ್ಯದ ಪರಿಭವವನು | ದಂಡದಾನವಕೋಟಿಗಳ ಕಡಿ || ಖಂಡಮಂ ನೆಲಮಾಳ್ ದೇವನು ಕೋಪವಿಮ್ಮಡಿಸೆ || ಕೆಂಡಗಳನುಗುಳುತ್ತ ಕರ್ಬೊಗೆ | ತಂಡತಂಡದಲೇಳ್ಳ ವಿಶಿಖವ | ಪುಂಡರೀಕಾಯತದ ಲೋಚನ ತೆಗೆದನಾಕ್ಷಣದಿ || ೪೭ ೪೯ 48
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೨೫
ಗೋಚರ