ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಸಂಧಿ - ೩೦ ೬೧ ಕರ್ಣಾಟಕ ಕಾವ್ಯಕಲಾನಿಧಿ ಕೋಟಿ ಸಿಡಿಲಬ್ಬರಿಸಿದಂದದಿ | ತಾಟಿಸುತ ಸಿಂಚನಿಯನಲ್ಲಿಂ | ದೋಟದಲಿ ತಾಕಳರಿದಾರ್ಭಟಿಸುತ್ತಲೆಗಲು | ನೋಟಕರ ಕಂಗಳಿಗೆ ಚಿತ್ರದಿ | ಕೋಟಿಮುಖದಲಿ ಕಾಣಿಸಿತು ಕಂ | ತೋಟದಲಿ ದೆಸೆಗಳಿಗೆ ಹರೆದುದು ದೇವತತಿ ಭಯದಿ || ಅಬ್ಬರಿಸಿತಾಗಸವು ದಿನದಲಿ | ಮೊಬ್ಬು ಮುಸುಕಿತು ತಾರಕಾರಣ | ಹಬ್ಬಿದುವು ಗಗನವನು ದಿಕ್ತಟವೆಲ್ಲ ಪ್ರತಿಶಬ್ದ || ಗಬ್ಬರಿಸೆ ಭೂತಳವು ನಡುಗಿತು | ನಿಬ್ಬಂದಿ ಕುಲಗಿರಿಗಳೊಲೆದುವು || ಉಬ್ಬು ಮುರಿದುದು ಶೇಷರಾಜನ ಕಮಠನೊಳಸರಿದ || ಬಾಣಮುಖದಿಂದುದಿಸಿ ನಿಂದರು | ಏಣಧರಮೌಳಿಗಳು ಕೊಟಿಯು | ವಾಣಿಯರಸನು ಹೆದರೆ ಮುಖವೈದಂಬಕಯದಿ || ಪ್ರಾಣ ಕಳವಳವಾಗೆ ಕಾಲಗೆ | ಕ್ಟೋಣಿತಳವಲ್ಲಾಡೆ ಶರಧಿಯು | ನಾಣುಗೆಡೆ ಧ್ವಜದಗ್ರದಲ್ಲಿ ಹ ಹನುಮ ಸಂಭ್ರಮಿಸೆ || ಕೆಂಜೆಡೆಯ ಹಣೆಗಣ್ಣ ತಲೆಗಳ | ಬಂಜಡದ ವನಮಾಲೆಭಸಿತದ | ನಂಜಿನಂಕಿತಗಳದ ರೌದ್ರದ ಕೋರೆದಾಡೆಗಳ | ರಂಜಿಸುವ ದಶಭುಜದ ವೃಷಭನ | ಅಂಜದೇ ದ ರುದ್ರಕೋಟಿಯು | ಭಂಜಿಸುವವೊಲು ಜಗವನುದುಭವಿಸಿದರು ನಿಮಿಷದಲಿ || ಕರವ ಮುಗಿದನು ಪಾರ್ಥ ನೀವೀ | ಶರಮುಖದೊಳುದಿಸಿರುವ ಕಾಲರ ! ಕುಬಿ ಮುರಿವುದೆನುತ್ತ ವಿನಯದಲಭಯವನು ಬೇಡೆ | ಕರುಣನಿಧಿ ಪರಮೇಶ ಮುದದಲಿ | ಪರಮಭಕ್ತಿಗೆ ಮೆಚ್ಚಿ ಭರದಲಿ | ಮುರಿದು ನುಂಗಿದ ನಿಮಿಷವರ್ಧದೊಳಂತಕವ್ರಜವ || ೬೨ ೬೩ ೬೪