(`ಸb ೧೦ ೧೧ 1s& ಕರ್ಣಾಟಕ ಕಾವ್ಯಕಲಾನಿಧಿ ನರಪನೊರೆಗಳಚಿದ ಕಟಾರಿಯ | ಕರದಲಾಯತಮಾಗಿ ರಣದಲಿ | ನರನು ಬಿದ್ದನದೆಂಬ ವಾರ್ತೆಯ ಕೇಳಿದಾಕ್ಷಣದಿ || ಹರುವ ಕಾಂಬೆನೆನುತ್ತಲಿರ್ದನು | ಮರುತಸುತ ತಿರುಹುತ್ತ ಗದೆಯನು | ಬರಲಿ ನೋಡುವೆನೊಮ್ಮೆ ಚಕ್ರದ ಪರಿಯನೆನುತಿರ್ದ | ಕರೆದು ಸಹದೇವನನು ನಕುಲನು | ಸುರಪಸುತನಳಿದಂತರದಿ ತಾ | ವಿರವುದನುಚಿತವೊಬ್ಬರೊಬ್ಬರು ಕೈದಣಿಯೆ ಕಾದಿ | ಧರೆಗೊಗಿಸುವೆವೀತನುವನೆಂ | ದೊರೆಯೆ ಮನದಲಿ ನಗುತಲಿರ್ದನು | ಪರಮಸುಜ್ಞಾನೈಕನಿಧಿ ಸಹದೇವನತಿಮುದದಿ || - ವಿಧವೆತನದಲಿ ತನುವ ನೀಗುವು | ದಧಮಯೋಚನೆ ರಮಣರಿರೆ ಸ | ನ್ನಿಧಿಯಲೇ ಹರಣವನು ಕಳಿವೆನೆನುತ್ತ ಪಾಂಚಾಲಿ || ಮಧುರಿಪುವಿಗಭಿನಮಿಸಿ ಮನದಲಿ | ಸುಧೆಯ ಮಾನವ ಮಾಡು ವಂತಾ | ವಿಧದಿ ವಿಷವನು ಧರಿಸಲುದ್ಯೋಗಿಸಿದಳಾಕ್ಷಣಕೆ | ಹರಹರಾ ಬಲವಂತನೆಂದೇ | ನರನ ಮರೆವೊಕ್ಕೆನು ವೃಥಾ ಶ್ರೀ | ಹರಿಯ ಶರಣವ ಹೊಗಲು ತನ್ನ ಯ ತನುವ ಕಾವನು || ಪರಿಹರಿಸಲಾರಳವು ಧಾತ್ರನ | ಪರಿಯನೆನುತವೆ ಖಚರ ಚಿಂತಿಸಿ | ಮರುಗಿ ಪಿತೃ ಸತಿಸುತರ ನೆನೆನೆನೆನೆನೆದು ಹಲುಬಿದನು || ನೋಡಿದನು ನಗುತರ್ಜುನನು ಮಾ | ತಾಡಿಸಿದ ವಿನಯದಲಿ ಗಮನನು | ಹೂಡಿದವಗಡ ಚಕ್ರ ತನ್ನನು ಕೊಲುವುದಂತರದಿ || ಮಡಿಗೆಯೊಳಿಹ ನಿನ್ನ ಶಿರವ ಸ | ಗಾಢತೀವ್ರದಿ ತರಿ' ವುದೆಂದೆ | ಮಾಡದಿರು ಸಂಕಲ್ಪವನು ಮನವಚನಕಾಯದಲಿ || ೧೨ ೧೩ ೧೪
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೩೬
ಗೋಚರ