5.] ೩೧ ೪೫ ೪೬, ಗಯಚರಿತ್ರೆ ಬಳಿಕಲಾಪರಮೇಶ ಮೆಚ್ಚಿದೆ | ನೆಲೆ ನರನೆ ನೀ ಗಯನ ಕೈವಿಡಿ | ದಳುಕದಾಡಿದ ಭಾಷೆಯನ್ನು ನೆರೆ ಸಲಿಸಿಕೊಂಡವಗೆ || ಜಳಜನಾಭನ ಕೆಯ್ಯ ನಂಬುಗೆ | ಗೊಳಿಸಿದತಿಚತುರತೆಗೆ ಮಿಕ್ಕಿನ || ಬಳಕೆ ಯೇತಕೆ ಕೇಳು ಮತ್ತೊಂದತಿಶಯದ ವರವ || ಅವಧರಿಸು ಪಮೇಶರ ಕರುಣದ | ಲೆವಗೆ ನೀವ್ ಮನ್ನಿ ಸುವ ವರಗಳಿ | ಗವನಿಪತಿ ಧರ್ಮಜನು ಪಾತ್ರನುಯೇಸುವೆ ತಾನು || ಅವಗಡದ ಮಾತಲ್ಲ ವೆನ್ನಲು || ಭವನು ನಗುತಮ ಸೂನುವಿಹ ವೈ ! ಭವಮಹಾವನದಲ್ಲಿ ಗಟ್ಟಿದನನುಚರರ ಮುದದಿ || ಬಂದರಭವನ ನೃತ್ಯರರ್ಣಿಮ | ನಂದನನ ಕಂದನ ಸವಿಾಪದಿ | ನಿಂದು ಘನಗಂಭೀರವಾಕ್ಯದಿ ನುಡಿದರಿಂತೆಂದು || ಇಂದುಧರ ನಿಮ್ಮು ವನು ಕರೆತರ | ಲೆಂದು ಕಳುಹಿದ ನೀವು ತೆರಳುವು | ದೆಂದೆನಲು ಘನಹರುಷಶರಧಿಯೊಳಳನಾಭೂಪ || ಎನೆ ಹಸಾದವೆನುತ್ತ ಧರ್ಮಜ | ನನುನಯದೊಳಿರದೆದ್ದು ಗೌರೀ | ವನಿತೆಯರಸನ ಸನ್ನಿ ಧಿಗೆ ನಡೆತಂದು ಬಲವಂದು || ಘನತರದ ಭಯಭಕ್ತಿಯಿಂದಲಿ || ಎನುತಿಸಿದನನು ಪಮದ ಶ್ರುತಿಗಳ | ಮನಕೆ ನಿಲುಕದ ಶಿವನನೆಲೆ ಭೂಪಾಲ ಕೇಳೆಂದ || 'ಕೇಳು ಧರ್ಮಜ ನಿನ್ನ ಸತ್ಯದ | ಶೀಲಕರ್ಜುನನುರು ಪರಾಕ್ರಮ | ದೇಳಿಗೆಗೆ ಮಹಿಳೆಹೊಕ್ಕ ಖಚರನ ಕಾದ ದೃಢತರಕೆ || ಲೀಲೆಯಿಂದಲಿ ಮೆಚ್ಚಿದವು ಸಿರಿ | ಲೋಲಸಹಿತಾವೀಗ ಮನಕನು | ಕಲವಾಗಿಹ ವರವ ಕೊಡುವೆವು ಬೇಡು ನೀನೆಂದ || ೪೭. ೪೮
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೪೩
ಗೋಚರ