ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ಳಿ [ಸಂಧಿ ೯೦ & ೧ ಕರ್ಣಾಟಕ ಕಾವ್ಯಕಲಾನಿಧಿ ಬಳಿಕ ಮುರರಿಪು ಪಾಂಡು ಸುತರನು | ಪುಳಕಹರುಷದೊಳಪ್ಪಿ, ದ್ರುಪದನ | ಲಲನೆಯನು ಸಂತೈಸಿ, ವನವಾಸವನು ತವಿಸಿದಿರಿ | ಇಳೆಯನಾಳುವಿರೆಂದು ಮನ್ನಿಸಿ | ಬಳಗ ಸಹಿತಲವಿಂದ ತೆರಳಿದ | ಜಲಧಿಮಧ್ಯದೊಳಿರ್ಪ ದ್ವಾರಾವತಿಗೆ ಪದುಳದಲಿ || ಮುರಹರನ ಸನಿಯದಲಿ ಪ್ರಾರ್ಥನು | ಹರುಷದಿಂ ಚಾಮರವ ಬೀಸುತ | ಪರಮಭಯಭಕ್ತಿಯಲಿ ಕಾವುದು ಕರುಣದಿಂದೆನುತ || ಉರುತರದ ತುತಿಯಿಂದ ಪೊಗಳುತ | ಮರೆಯದಾತನ ಮುಖವ ನೋಡುತ | ಸರಸಿಜಾಕ್ಷನ ಪದವ ನೆನೆಯು ತಲೊಡನೆ ನಡೆತಂದ | ಆಸಮಯದಲ್ಲಿ ಪಾಂಡುಪುತ್ರರು | ವಾಸುದೇವನ ಕೂಡೆ ಬಂದರು | ಭಾಸುರದ ರಥವೇ ಧರ್ಮಜ ತೇರನಡೆ ಸುಗ್ರ | ದಾ ಸಭಾವದಿ ಭೀಮ ಛತ್ರವ | ನೋಸರಿಸದಳವಡಿಸಿ ಯಮಳರು | ಮಾಸಲುದಕವ ಕ್ರಮುಕ ಸರ್ಣದ ಹಡಪವನು ಧರಿಸಿ | ದ್ರುಪದಸುತೆ ತಾ ಎಪ್ರಸತಿಯರು | ಅಪರಿಮಿತರೊಡಗೂಡಿಯೆದುರಿo | ದುಪಮೆಗಳವಡದಿರ್ದ ರತುನಾರತಿಗಳನು ಪಿಡಿಸಿ | ಕಪಟನಾಟಕ ಸೂತ್ರಧಾರಿಗೆ | ನೃಪನ ಸತಿಯೊಡನೆಯೇ ಯೆತ್ತಿದ | ಇಸಸರರು ನಲಿಯಕ್ಕೆ ಬಹಳ ಮನೋನುರಾಗದಲಿ || - ಆದಿಮೂರ್ತಿಗೆಯಮಿತಶರಣರ | ಕಾದ ದೇವಗೆಯ ಜನ ಸೆತ್ತ ಮ | ಹಾದಯಾಂಬುಧಿ ಸನಕನಾರದಮುಖ್ಯರೊಡೆಯಂಗೆ | ಮೇದಿನೀಸುರಪಕ್ಷಪಾತಿಗೆ | ವೇದವೇದ್ಯಗೆ ವಿಶ್ವ ಪೂಜ್ಯಗೆ || ಆದರದಠಾರತಿಯನೆತ್ತಿದರೊಲಿದು ನಾರಿಯರು | ೯೨ ೯೩ ೪