ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ [ ಸಂಧಿ ಕರ್ಣಾಟಕ ಕಾವ್ಯ ಕಲಾನಿಧಿ ವರಚತುರ್ದಶಲೋಕದವರಿಗೆ | ನಿರುತ ಬೆಳಗನು ಕಾಣಿಸಲ್ವೇ | ತರಣಿಗೊರ್ವಗೆ ತೀರದಿದೆ ನೀ ಕೆಲವು ದೆಸೆಗಳಿಗೆ || ತ್ವರಿತದಿಂ ಗೋಚರಿಪುದೆನುತ | ಭರದಿ ಪ್ರತಿ ಸೂರ್ಯನನು ಕಳುಹಿದ || ತೆಹದಿ ತನುಕಾಂತಿಯಲಿ ನಾರದನೈದಿ ಬರುತಿರ್ದ | ಹರಿಸದವ ತೊಳೆಯ ಬ್ರಹ್ಮನು | ಸುರನದೀತೇಯವನು ಧರಿಸಿದ | ಕರದ ಪಾತ್ರೆಯ ತೇಜದಿ ರಾಜಿಪ ಕರಕಮಂಡಲದಿ || ಭರಿತಶೋಣಜಪಾಕ್ಷ ಮಾಲೆಯ | ಕರದಿ ವಿಷ್ಣು ಸ್ಮರಣೆಯಿಂ ನಿ | ರ್ಭರದಿ ಬಹ ಮುನಿವರನ ಕಂಡಡೆಗೆದನಾಖಚರ | - ಶರಣು ಶಾಂತಾಕಾರಮೂರ್ತಿಯೆ | ಶರಣು ರವಿಶಶಿಕಿರಣಮೂರ್ತಿಯೆ | ಶರಣು ಶಾಶ್ವತಪುಣ್ಯವರ್ತಿಯೆ ಶರಣು ಮುನಿನಾಥ || ಶರಣು ಶಂಕರ ಹರಪರಾಯಣ ! ಶರಣು ಶರಣರ ಪೊರೆವ ಕರಣದ | ಕರುಣಿ ಕಾವುದು ಸರಸಿಜಾಸನಪುತ್ರ ಎನುತಿರ್ದ | ಕಾಮಲೈ ನ್ನು ವನು ನೀ ನೆರೆ | ಕಾವು ಕರುಣಾಳು ಜಗದಲಿ | ಕಾವವರ ಗೆ ಪೇಟ ಸಲಹಲುಬೇಕುಯೆನ್ನು ವನು | ತಾವರೆಯ ಸಟ ಚಂದ್ರರುಳ್ಳನ | ಕೀವಸುಧೆಯೊಳ್ ಕೀರ್ತಿ ನಿನಗೆಯು | ಸ್ಥಾವರವದಾಗಿಹುದು ರಕ್ಷಿಪುದೆಂದು ನುತಿಸಿದನು || ಎತ್ತಿದನು ಮಣಿಮಂತತನಯನ | ನೆತ್ತಿಯನು ಸಿಡಿದೇನು ನಿನಗೆ ಸಿ | ಮಿತ್ಯ ದುಃಖಿತನಾದೆ ಕಾರಣವೇನು ಪೇಟತೆಂದ || ಬಿತ್ತರಿಸೆ ಹುರಳಿಲ್ಲ ದೇವರು || ಚಿತ್ತವಿಸಿ ತನಗೊಂದುಪಾಯವ | ನಿತ್ತು ಕರುಣಿಸಬೇಹುದೆನುತಿಂತೆಂದನಾಖಕರ || S