ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬. [ಸಂಧಿ ೪೫. ೪೬ ಕರ್ಣಾಟಕ ಕಾವೈಕಲಾನಿಧಿ ಮಲ್ಲಿಗೆಯು ವರಜಾಜಿ ಪಾದರಿ! ಮೊಲ್ಲೆ ಸಂಪಿಗೆ ಪಾರಿಜಾತವು | ಸಲ್ಲಲಿತ ಕರವೀರಕೇತಕಿಯಮಿತವಾಗಿಹುವು | ಪಲ್ಲ ವಂಗಳೊಳೆಸೆವ ತರುಗಳು | ವಲ್ಲಿಗಳು ಬಹುವಾಗಿ ಮೆರೆದಿಹು | ವೆಲ್ಲಿ ನೋಡಲು ರಜತಶೈಲದ ಸುತ್ತುವಳಯದಲಿ || ತರುಗಳೆಲ್ಲವು ಕಲ್ಪವೃಕ್ಷವು || ಹರಿವ ಬಳ್ಳಿಗಳೆಲ್ಲ ಸುರಲತೆ | ಚರಿಪ ವರಧೇನುಗಳು ಸುರಪಶು ವುರುತರದ ಶಿಲೆಯು || ಮೆರೆವ ಚಿಂತಾಮಣಿಯುಯೆಂಬೊಲು | ನಿರತ ಕಾಮಿತಫಲವನೀಯುತ | ಹರುಷದಿಂದೆಸೆದಿಹುವು ದೇವತ್ವವನು ಮಿಗೆ ಧರಿಸಿ || ಆಗಿರಿಯ ಸಂಭ್ರಮವ ನೋಡುತ || ಭೋಗಿಶಯನನು ಬಹಳಮುದದಲಿ | ಭೋಗಿಭೂಷಣಸಿರುವ ಸದನಕ್ಕಾಗಿ ಬರುತಿರಲು || ಭೋಗಿಗಳು ಗಂಧರ್ವಯಕ್ಷರು || ಮಾಗಧರು ತುಂಬುರರು ಸುರಪತಿ | ನಾಗರಿಕಸುರಗುರು ವಸಿಷ್ಟರು ನುತಿಸುತೈದಿದರು || ಆದಿಮೂರುತಿ ಬಂದನಗಣಿತ | ವೇದಸಿದ್ದನು ಬಂದ ಶರಣರ | ಕಾದ ಕರುಣಾವನಧಿ ಕಮಲದಳಾಕ್ಷ ತಾ ಬಂದ | ಮೇದಿನೀಪತಿ ಬಂದನಜರು | ದಾದಿಗಳ ಪರಿಭವವನನುದಿನ | ಸಾದರದಿ ಪರಿಹರಿಸ ಬಂದನೆನುತ್ತ ಹೊಗ” ದರು | ದೇವ ಬಂದನು ಸಕಲದೇವರ | ದೇವ ಬಂದನು ಭಕತಜನರನು | ಕಾವ ಕರುಣವಾರ್ಧಿ ಬಂದನು ಕಮಲಜನ ಒನಕ || ಭಾವಭವಪಿತ ಬಂದ ಬ್ರಹ್ಮಸು | ರಾವಳಿಯ ಗೋದ್ವಿಜರ ಸಂತತ | ಮೋವಿ ಸಲಹುವ ದೇವ ಬಂದನು ಎಂದು ಹೊಗಳಿದರು || ಲೆ