ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫' ೫೦ ಈಗಿ " ಗಯಚರಿತ್ರೆ ಸಿಂಧುಶಯನನು ಬಂದ ಶರಣರ | “ಬಂಧುಬಳಗವು ಬಂದ ಘನಸುರ | ಸಿಂಧುವನು ಪಡೆದುಳಸಾವನಪಾದಪದ್ಮಯುಗ | ಬಂದನಘಕುಲಸಿಂಧುಬಾಡಬ | ಬಂದನಗ್ಗದ ಗಂಧಸಿಂಧುರ | ಬಂಧನವ ಪರಿಹರಿಸಿದಚ್ಯುತನೆಂದು ಹೊಗಳಿದರು | ವಂದಿಒನದುಗ್ಗಡಣೆ ಮಾಗಧ | ವೃಂದದಬ್ಬರ ಸುರರ ಭೇರೀ | ಧಂಧಣದ ಘನರಾವ ಮದ್ದಳೆ ತಾಳಗಳ ರಭಸ | ಮಂದಿಗಳ ನುತಿಯುಲುಹು ಗಜಹಯ | ಸ್ಯಂದನದ ಬಹುನಿನದ ಕೂಡಲು | ಮಂದರದೆ ಶರಧಿಯನು ಮಥಿಸಿದ ರವಕೆ ಮಿಗಿಲಾಯು || ಹರಿಯ ಗಮನಕೆ ಮೆಚ್ಚಿ ಶರಧಿಗ | ಳುರುತರದ ಸಂಭ್ರಮದಿ ತಾವತಿ | ಭರದೊಳೊಂದೇ ಬಾರಿ ಮೊರೆವವೊಲಿವ ಘನರಭಸ | - ಧರೆಯನಾ ಕ್ರಮಿಸಿ ಗಿರಿಜಾ | ವರನು ತಿಳಿದೈತಂದ ತನ್ನ ಯ || ತರುಣಿ ಶಿವಗಣಸಹಿತಲೋಲಗದಿಂದಲಿದಿರಾಗಿ || - ನಾರಿಯರು ತಮತಮಗೆ ಮುತ್ತಿನ | ವಾರತಿಗಳಿಂದೊಡನೆ ಬರೆ ಜ೦ | ಭಾರಿ ಮಣಿಗಣವಾದಿಯಾದ ಸಮಸ್ತರುನಗಳ | ಸಾರತರಮೃಗಮದಜವಾಜಿಯ | ಮೇರು ಸಮ ಕರಿಘಟಿಗಳನು ವಿ | ಸ್ವಾರದಿಂ ಹರಿಗೊಪ್ಪಿಸುವೆನೆನುತಭವನೈತಂದ || ಬಂದನೇ ಕರುಣಾಳು ಭಕತರ | ಮಂದಿರಕೆ, ಮನದೊಳಗೆ ತಾ ಗತಿ | ಯೆಂದು ಸಂತತ ನೆನೆವ ಸಜ್ಜನರುಗಳ ನೆಲತಿ ಕಾವ || ಬಂಧನದ ಭವಭವದ ಕಲ್ಮಷ | ವೃಂದವನು ಪರಿಹರಿಸಿ ಶರಣರಿ. | ಗಂದದಲಿ ಶಾಶ್ವತದ ಪದವಿಯನೀವ ಸಂಜೀವ || ೫೨ ೫೬, ೫೪