ಪುಟ:ಗಿಳಿವಿಂಡು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವೀಡು _13 13 ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ, ಯುವಕರಿಗೆ ದುರ್ಬುದ್ಧಿ ಕಲಿಸುವವ ಹೊಲೆಯ | ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ, ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ ಪರರ ಬೇನೆಯಲಿ ಮನಹಿಗ್ಗು ವಾತನೆ ಹೊಲೆಯ, ಪೀಡಿತರನಿನಿಸು ಕನಿಕರಿಸದವ ಹೊಲೆಯ | ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ, ಪಸಿದವರಿಗೊಂದು ತುತ್ತೆರಚದವ ಹೊಲೆಯ ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ, ಹಣವಿದ್ದು ಸಾಲವನ್ನು ತೀರಿಸದ ಹೊಲೆಯ | * ಆಶೆವಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ,' ಬಗೆಬಗೆದು ಮೋಸವನು ಮಾಡುವವ ಹೊಲೆಯ ಶುದ್ದ ತಾನೆಂದು ಪರರನು ಮುಟ್ಟಿದವ ಹೊಲೆಯ, ಹೊಲೆಯರೆಂದನ್ಯರನು ಕರೆವವನೆ ಹೊಲೆಯ | ತಾನು ಮೇಲೆಂದುಚ್ಚಿ ಹೀನೈಸುವವ ಹೊಲೆಯ, ಕೀಳುದಸೆಯವರನುದ್ಧರಿಸದವ ಹೊಲೆಯ || ೬ || ತಾ ಬೋಧಿಸುವ ಧರ್ಮವಾಚರಿಸದವ ಹೊಲೆಯ, ತಾನು ತಾನೆಂದು ಶ್ಲಾಘಿಸುವವನು ಹೊಲೆಯ | ಪರರ ಹೊಲ್ಲೆ ಹದ ಕಾವ್ಯವ ಬಿತ್ತರಿಪ ಹೊಲೆಯ, ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ || ೮ || ರಾಷ್ಟ್ರದುನ್ನತಿಯ ಸಾಧಿಸಿ ಶ್ರಮಿಸದವ ಹೊಲೆಯ, ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ | ಸ್ವಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ, ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ