ಪುಟ:ಗಿಳಿವಿಂಡು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಉರಿದು ಪೊಡೆದಬ್ಬರಿಪ ಸಿಡಿಲ ದಾಹನಂ ಮಿಂಚುಹುಳುವಿನ ಮಿಣುಕು ಕಿಡಿಕಿಡಿಗಳಲ್ಲಿ ಬಿನ್ನನೆಚ್ಚರುವಂತೆ, ಸೋಜಿಗದ ಸುಳಿವಂ ಕಾಣದಂತೆನಿತೊ ಬಚ್ಚಿಹೆ ಬದುಕಿನೊಳವಂ ಕಡೆಗಣ್ಣ ಕೂಡಲಿಂದರಿವಂತೆ ನಲ್ಲೆ, ನಿನ್ನೊಳವನೇತರಿ೦ ನಾನರಿಯಬಲ್ಲೆ ? ಆವ ಮರಮಿದು ? ಮರದ ಬುಡದೊಳಿಹ ನೀನಾರು ? ಸಕಲ ರಿತುವೊಳು ಹೂವ ಪಟ್ಟಿ ಮರವೇನು ? ಒಂಟಿ ಕುಕಿಲಿದು ಕೂಗದೇಕೆ ? ಬಿರಿನನೆ ನಾರು ಬೀರದೇಂ ? ತಟಕದೀ ಎಲೆವನಿ ಇದೇನು ? ಎಲೆ ಮರುಳೆ, ನಡುಗಟ್ಟಿ ವೀರಮಂಡಿಯನಿಕ್ಕಿ ಬಲಗೆಯ್ಯನೆಳೆದು ಕಿವಿಗಾನಿಸುವೆ ಸರಳಂ ! ಬರಿದೆ ಪೇಚಾಡದಿರು, ನಿನ್ನಂಬು ಹೆಡೆಮಿಕ್ಕಿ ಮಿಸುಕದೈ' ಮೇಣರಿಗುಮೆಂತರಿಯ ಕೊರಳಂ ? ಆದೊಡಂ ಮರುಗದಿರು, ನಿಕ್ಕುವಂ ಮುನ್ನೆ ನಿನ್ನ ಪಗೆಯಳಿವೋದನಾತನಂ ನೀನೆ ತರಿದೆಯೆಂದಣಿಯರಂ ತಣಿಯದೊಡಮಿನ್ನು ಪೆರತಂಬನೆಸೆಯ ಬೇಕೆಂದಿಲ್ಲ ನೀನು ! 44 ಏನ್ನೇರಿದನೊ ಕುಡಿಯಲೀಯಲೊಂದೇ ಸಲಂ ನಿನ್ನ ಮರುಮದಿರೆಯಾ ಕಿಣ್ಣದಿನಿಸಾನುಂಬೇರೊಡಲನಾಂತೊಡನೆಯಪ್ಪನಂಗನೆ ವಲಂ ನಿನ್ನಜ್ಜಿ ನರಸನರಸತಿಯಾಗಿ ನಾನು! ಬಳಿಕಿಂತೊರೆವನೆರೆಯ ನಾಣ್ಯವಿದರೊಮ್ಮೊಗದಿ ನೆದ್ದು ಬರುತಿದೆ ಕಣಾ ಪುತ್ತಳಿಗೆ ನಿನ್ನ | ಅಕ್ಕರದ ಕರಡು ಗೀಚಕ ಬೆನ್ನಲಿ ? ಪೊಗದಿ ಬೆಲೆಯೇರದಿಹುದೆ ಕೆತ್ತಿಸೆ ಚಿತ್ರವನ್ನ?