ಪುಟ:ಗಿಳಿವಿಂಡು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಕತ್ತಲೆ ಕವಿದ ನಮ್ಮ ಕಂಗಳಿಗೆ ಪರೆ ನೆರೆಯೆ, ನಮ್ಮ ನಾಮ್ಮರೆತು ನಮ್ಮವರ ಮರೆವನ್ನಂ, ಚೆದರಿ ನನ್ನೊಳಗೆ ಜಗಳಾಡಲೇನಚ್ಚರಿಯೆ ? " ಸಾಕಿನಿತು! ರಾಷ್ಟ್ರೀಯ ಶಿಕ್ಷಣವೆ ನಿನ್ನ ದೀಧಿತಿಯನೆಮ್ಮಯ ಮನೋನಯನಮಂ ತೆರೆದು, ಭೇದಗಳ ಬಿರುವರೆಯ ಹೆರೆಯಿಸುವುದಲ್ಲಿ! ನಾನೆ ನಾ ನೀನೆ ನೀನಿದನೆಮ್ಮೆಯಿನರೆದು ನಾವು ನಾವೆಂಬ ಭಾಷೆಯ ಕೆತ್ತಿಸಲ್ಲಿ! ಕೈಸ್ತ ಪಾರಸಿ ಜೈನ ಮುಸಲಮಾನ್ ಹಿಂದು ವೆಮಗೆಲ್ಲರಿಗೆ ನಮ್ಮ ಭಾರತಮದೊಂದು ತವರು ಗಡ! ರಾಷ್ಟ್ರೀಯ ಶಿಕ್ಷಣಮೆ ಬಂದು ಒಟ್ಟಿನ ತವರ್ತನವನೆಸಗಿನ್ನು ಮುಂದು | ಎದ್ದೇಳಿರೆ ಬಂಧುಗಳಿರ! ಕೆಲವರಿಯುತಿದೆ ರಾಷ್ಟ್ರೀಯ ಶಿಕ್ಷಣದ ಸಪ್ತಾಹಮಿಂದು | ತಂತನೂಳಿಗವ ಗೆಯ್ಯರಿಮೆಂದು ಕರೆಯುತಿದೆ, ಬಂಗಾರಮಪ್ಪುದು ಭವಿಷ್ಯ ವಲಯಂದು! ತನ್ನ ತಾಯ್ತು ಡಿಯಿಂದ ದುಡಿದ ಬಿಜ್ಜೆಯೆ ಬಿಟ್ಟೆ ! ಹೆರರ ನಾಲಗೆಯೆಂಜಲೆನ್ನೆಗಂ ಸವಿಯೊ ? ತನ್ನ ಮುಂಗತಿ ತೋರೆ ತನ್ನ ಹಿರಿಯರ ಹೆಜ್ಜೆ ! ಹೆರರ ಬೆಳಕೊಳೆ ಕಾಂಬ ತನ್ನವರ 1ಕವಿಯೊ ? ಅವರವರ ನುಡಿಗಳಿಂದವರವರ ಜಾಣಿ ಕೆಯನೆಚ್ಚರಿಸುವ ನುಡಿಗಳ ತಾಯೆ ವಾಣಿ! ನಿರವಶೇಷ ಜ್ಞಾನದರ್ಜನವನಮ್ಮ ನುಡಿಯಿನೆಮಗಿತ್ತು ಭಾರತವ ಸಲಹಮ್ಮ! ದೃಷ್ಟಾರ (seer).