ಪುಟ:ಗಿಳಿವಿಂಡು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇಕು ಬೇಡ ನಳಿನವೊ ಅಳಿಯಾಸೆಯಲ್ಲಿ, ಕರಿ ನೆಗಳ ದಾಡೆಯಲ್ಲಿ ತೆರಳಲುಂಟ ತೆರಂ? 21 ಬೇಕೆಂಬುದಣಂ ಸಮನಿಸಿ, ತಟ್ಟನೆಡಕು ಬಿಟ್ಟೆ : ಬಯಕೆಯೊಡನೆ ಬಯಕೆ, ಮನಸೆ, - ಎದೆಗೆ ನುಗ್ಗಿ ಕೆಟ್ಟೆಎಡೆಯೆಡೆಯಿಂದೊಸರುವಂದು, ಕೊರೆದು ಬರುವ ನೆರೆಯ ಮುಂದು ನಿಲಲಾಪುರ ಕಟ್ಟೆ ? 28 ಬೇಕೆಂಬುದು ದಕ್ಕಲಂತು 1ಗೆ ನಾವನಲಂ ? ಮನದ ತೃಷ್ಣ ಗಡಸನೆಂತು ಭೂಯೋ ಮೃಗಜಲಂ ? ಆಸೆಯ ನೆರಳಾ ನಿರಾಸೆ, ಕುಡಿಯಲಾರದಾ ಪಿಪಾಸೆ ಪೆರತೇಂ ಪ್ರತಿಫಲಂ ? 35 ಬೇಕೆಂಬುದು ದಕ್ಕದೊಡನೆ ಮಸಗನಾವ ನರಂ ? ಮರದ ಹಿಂದೆ ಮುರವ ಸುಡನೆ ಕೆರಳೆ ವನಜರಂ ? ವನದಗ್ನಿಯನೆಂತು ವನಂ, ಮನದಗ್ನಿಯಿನಂತು ಮನಂ ಭಸ್ಮಮೆ ಸತ್ಪರಂ. 1, ಅಲp newಕುಮಾಡು