ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೨೭

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೨೭ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾನೊಬ್ಬ ಉತ್ತಮ ಕ್ಷಾರಿಕನಾದೆ ಯಾವ 'ಶ್ಯಾಂಪೂ" ಹಚ್ಚಿ ತಲೆ ತೊಳೆಯುತ್ತೀರಿ? ತಲೆಗೆ ಹಚ್ಚಲು ಯಾವ ಎಣ್ಣೆಯನ್ನು ಬಳಸುತ್ತೀರಿ? ಎನ್ನುವ ಎಲ್ಲ ಪ್ರಶ್ನೆಗಳಿಗೂ ವಾಸನೆಯ ಮೇಲಿಂದಲೇ ದಡದಡನೇ ಹೇಳಿಬಿಡುತ್ತಿದ್ದ. ಆ ದಿನ ನಾನು ಅವನಿಗೆ ಪರೀಕ್ಷೆ ಮಾಡಲು ಪ್ರಶ್ನಿಸದಿದ್ದರೂ, ಆತನೇ ತನ್ನ ಚಾಣಾಕ್ಷತನವನ್ನು ತೋರಿಸಲು ಹೋಗಿ, ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದ. "ಗ್ರಾಮೋದ್ಯೋಗ ಸಾಬೂನು" ಎಂದರೆ ನಮ್ಮ ಗ್ರಾಮದಲ್ಲಿಯೇ ಬೇವಿನ ಎಣ್ಣೆಯಿಂದ ತಯಾರಿಸಿದ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಸಾಬೂನು ಅದು. ಅದನ್ನು ಊರ ಜನ ಬಟ್ಟೆ ತೊಳೆಯಲು ಮಾತ್ರ ಬಳಸುತ್ತಿದ್ದರೆ ವಿನಃ ಸ್ನಾನಕ್ಕಾಗಿ ಅಲ್ಲ. ಮೊದಲು ನಮ್ಮೂರ ನಾಯಿಂದರು ನಮ್ಮನ್ನು ಮುಟ್ಟುತ್ತಿರಲಿಲ್ಲ. ಹೀಗಿದ್ದಾಗ ಅವರು ನಮಗೆ ತಲೆ ಬೋಳಿಸುವುದಂತೂ ದೂರದ ಮಾತಾಗಿತ್ತು. ಈ ದೂರದ ಮಾತೇ ನಮ್ಮ ಮನೆತನದವರಿಗೆ ಆ ಕ್ಷೌರಿಕ ವಿದ್ಯೆಯನ್ನು ಕರಗತ ಮಾಡಿಕೊಳ್ಳುವಂತೆ ಮಾಡಿತ್ತು. ನಾನು ಆವಾಗ ಮೂರು ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಿರಬೇಕು. ನಮ್ಮ ಮನೆಯಲ್ಲಿ ಒಂದು ಪುಟ್ಟ ಚರ್ಮದ ಚೀಲವಿತ್ತು. ಅದರಲ್ಲಿ ಎರಡು ಮೂರು ತಲೆ ಬೋಳಿಸುವ ಕತ್ತಿಗಳಿದ್ದವು. ಕೆಲವು ಹಿಡಿಮುರಿದ ಕತ್ತಿಗಳೂ ಇದ್ದವು. ಆ ಚರ್ಮದ ಚೀಲ ಯಾವಾಗಲೂ ನಮ್ಮ ಮನೆಯ ತಲಬಾಗಿಲದ ಒಂದು ಮೂಲೆಯಲ್ಲಿ ಜೋತು ಬಿದ್ದಿರುತ್ತಿತ್ತು. ನಮ್ಮ ಚಿಕ್ಕಪ್ಪ ಇಲ್ಲವೆ ಮಾವ, ನಮ್ಮ ತಲೆ ಬೋಳಿಸುವ ಕೆಲಸವನ್ನು ಮಾಡುತ್ತಿದ್ದರು. ಅವರೇನು ಈ ಕೆಲಸದಲ್ಲಿ ಅಷ್ಟು ನಿಪುಣತೆಯನ್ನು ಸಂಪಾದಿಸಿದವರಲ್ಲ. ನಮ್ಮ ಮನೆಯವರಿಗೆ ಮಾತ್ರ ಇವರು ತಲೆ ಬೋಳಿಸುವ ಕೆಲಸ ಮಾಡುತ್ತಿದ್ದರಿಂದ, ಸಾಮಾನ್ಯವಾಗಿ ತಿಂಗಳಿಗೊಮ್ಮೆ ತಲೆ ಬೋಳಿಸುವ ಅವಕಾಶ ಅವರಿಗೆ ಸಿಗುತ್ತಿತ್ತು. ಹೀಗಾಗಿ ಪರಿಣತಿಯನ್ನು ಸಾಧಿಸುವುದು ಕಷ್ಟದ ಕೆಲಸವೇ ಸರಿ. ಈ ಸ್ಥಿತಿ ನಮ್ಮ ಮನೆತನಕ್ಕೆ ಸಂಬಂಧಿಸಿದ್ದು ಎಂದಲ್ಲ. ನಮ್ಮ ಕೇರಿಯ ಪ್ರತಿಯೊಬ್ಬರ ಮನೆಯಲ್ಲೂ ಒಂದೊಂದು ಕತ್ತಿಯ ಚೀಲ ಇದ್ದೇ ಇರುತ್ತಿತ್ತು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು ನಮ್ಮ ಮಾವ ಅಥವಾ ಚಿಕ್ಕಪ್ಪನ ಕೈಯಲ್ಲಿ, ತಲೆಯನ್ನು ಬೋಳಿಸಲು ನಮ್ಮ ತಲೆಯನ್ನು ಕೊಡುವುದು ಎಂದರೆ, ನೆಲಕ್ಕೆ ಬಿದ್ದು ನಗ್ಗಿ ಹೋದ ಕಂಚಿನ ಕೊಡವನ್ನು ರಿಪೇರಿ ಮಾಡಲು ಕೊಟ್ಟಂತೆ! ಆ ಮೊಂಡಾದ ಕತ್ತಿಯನ್ನು ಕಲ್ಲಿಗೆ ತಿಕ್ಕಿ ತಿಕ್ಕಿ ಮಸೆದು ತಲೆ ಬೋಳಿಸುವಾಗ, ತಲೆ ಒಂದೇ ಸಮನೇ ಉರಿಯುತ್ತಿತ್ತು. ಹೊಸತಾಗಿ 'ಸಾಣಿ' ಹಿಡಿಸಿದ ಕತ್ತಿ ಇದ್ದರೆ "ಸಾಕಪ್ಪಾ ಸಾಕು!" ತಲೆ ತುಂಬ ಎಲ್ಲೆಂದರಲ್ಲಿ ಕತ್ತಿ "ಹತ್ತಿ" ರಕ್ತವೇ ರಕ್ತ! ನಮ್ಮ ತಲೆಯ ರಕ್ತ ಉಣ್ಣುವವರೆಗೂ ಆ ಕತ್ತಿಗೂ ತೃಪ್ತಿಯಾಗುತ್ತಿರಲಿಲ್ಲವೆಂದು ತೋರುತ್ತದೆ. ಕತ್ತಿ ತಲೆಗೆ ಹತ್ತಿದಾಗ ಅಥವಾ ತಲೆ ಉರಿಯುತ್ತಿದ್ದಾಗ ನಮ್ಮ ಅಳುವು