ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೭

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೩೭ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

ಮುಕ್ತಾಯದ ಮುನ್ನ....

೧೨೧

"ನಿಜವಾದ ಜೀವಂತಿಕೆ ಇದರಲ್ಲಿದೆ" ಎಂದು ಹೇಳಿ ಕೆಲವು ಲೋಪದೋಷಗಳನ್ನೂ ಎತ್ತಿ ತೋರಿಸಿದ. ಸೀಮಾತೀತವಾಗಿರುವ ದಲಿತ ಪ್ರಜ್ಞೆಯಿಂದ ಗುರುತಿಸುವ ನನ್ನ ವಿಚಾರ, ಅದನ್ನು ಕಾದಂಬರಿಯಲ್ಲಿ ಕಂಡು ಮೆಚ್ಚಿದ್ದ, ಈತನ ಈ ಬಗೆಯ ಪ್ರೋತ್ಸಾಹ ನಾನು ದಲಿತನಾಗಿದ್ದು, ಮತೀಯ ದಲಿತೀಯತೆಯನ್ನು ಮೀರಿ ನಿಲ್ಲಲು ಸಾಧ್ಯವಾದುದು, ಇಂಥ ವಿಚಾರಕ್ಕೆ ನನ್ನಣ್ಣ ಮೂಲಮಾತ್ರವಾದರೂ ನನಗೆ ನನ್ನತನವನ್ನು ಹಿಗ್ಗಿಸಿಕೊಳ್ಳಲು, ಬೆಳೆಯಲು ಸಹಕರಸಿದವುಗಳೆಂದರೆ ದಲಿತ ಸಂಘರ್ಷ ಸಮಿತಿ ಮತ್ತು ದಲಿತ-ಬಂಡಾಯ ಸಾಹಿತ್ಯ ಸಂಘಟನೆ.

"೭೦"ರ ದಶಕದಲ್ಲಿ ಬ್ರಾಹ್ಮಣ ಪ್ರಜ್ಞೆ, ಶೂದ್ರ ಪ್ರಜ್ಞೆ, ದಲಿತ ಪ್ರಜ್ಞೆ ಹೀಗೆ ಅದು ಪ್ರಜ್ಞೆಗಳ ಸಂತೆಯ ಕಾಲ. ಈ ಸಂತೆಯಲ್ಲಿ ಉಂಡವನೇ ಜಾಣ ಎನ್ನುವಂತೆಯೂ ಇತ್ತು. ಇಲ್ಲಿ ಪತ್ರಿಕೆಗಳೇ ಗಾಳಿಪಟಗಳಾಗಿದ್ದವು. ಎಲೆ ಅಡಿಕೆಯಾಗಿದ್ದವು. ಈ ಬಗೆಯ ಸಾಂಸ್ಕೃತಿಕ ಸಂಘರ್ಷದಲ್ಲಿ ಉಂಡ ಜಾಣರೂ ದಲಿತರೇ, ತಿಂದು ತೇಗಿಸಿಕೊಳ್ಳಲೂ ಆಗದೆ ಸೋತವರೂ ದಲಿತರೇ ಆಗಿದ್ದಾರೆ.

ಸಂಘರ್ಷ ಸಮಿತಿಯಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ ಸಾರಿಗೆ ವ್ಯವಸ್ಥೆಯೇ ಇಲ್ಲದ ಹಳ್ಳಿಯಲ್ಲಿ ದ.ಸಂ.ಸಮಿತಿ ಶಾಖೆಯ ರಿಬ್ಬನ್ ಕತ್ತರಿಸುವ ಕೆಲಸ, ಹರಿದದ್ದನ್ನು ಜೋಡಿಸುವ, ಬಣ್ಣ ಹೋಗಿದ್ದರೆ ಪುನಃ ಬಣ್ಣ ಕೊಡಲು ಪ್ರಯತ್ನಿಸುವ ಕೆಲಸ. ಇಂಥ ಕೆಲಸಗಳೆಲ್ಲ ಬದುಕಿಗೆ, ನನ್ನ ಅಧ್ಯಯನಕ್ಕೆ ಹೊಸ ತಿರುವನ್ನೇ ಕೊಟ್ಟು, ನನ್ನ ಆಲೋಚನಾ ಕ್ರಮವನ್ನೇ ಬದಲಾಯಿಸಿವೆ. ಇಲ್ಲಿಯ ಸ್ನೇಹಿತರಲ್ಲಿಯೂ ಅಷ್ಟೇ ಕಹಿಕಹಿಯಾದ ಕಾಫಿ ಕುಡಿಸಿದವರೂ ಇದ್ದಾರೆ, ಚಹ ಕುಡಿಸಿದವರೂ ಇದ್ದಾರೆ. ಸಂಘರ್ಷ ಸಮಿತಿ ಆರಂಭದಲ್ಲಿ ಇಟ್ಟುಕೊಂಡು ಬಂದ ಬಿಗುವು ಆನಂತರದಲ್ಲಿ ಉಳಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಜನಸಂಖ್ಯೆ ಆಧಾರಿತ ವಿಚಾರ, ರಾಜಕೀಯ ಪ್ರವೇಶ ವಿಚಾರ, ಎಡಗೈ-ಬಲಗ್ಯ ವಿಚಾರ ಇಂಥವು ಮುಖ್ಯವಾಗಿ, ಸೀಳಿಹೋದರೂ ಅದಕ್ಕೆ ತಾತ್ವಿಕ ಭಿನ್ನಾಭಿಪ್ರಾಯದ ಲೇಪ ಹೆಗಲೇರಿ ನಿಂತಿತ್ತು.

ಎಡಗೈ ಹಾಗೂ ಬಲಗೈ ಈ ಎರಡೂ ಪಂಗಡಕ್ಕೆ ಸೇರಿದ ನನ್ನಂತವರು ನಡುವೆಯೇ ಅಂತರ್ ಪಿಶಾಚಿಯಾಗಿಯೋ ತ್ರಿಶಂಕುವಾಗಿಯೋ ಜೋತಾಡಬೇಕಾಗಿ ಬಂದುದು ದುರದೃಷ್ಟಕರ ಸಂಗತಿ. ಇದು ಎಲ್ಲಿಯವರೆಗೆ ತಲುಪಿತು ಎಂದರೆ, ಒಮ್ಮೆ "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಪ್ರಸ್ತುತತೆ" ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದೆ. ಎಂದಿನಂತೆ ವಸ್ತುನಿಷ್ಟವಾಗಿಯೇ ಮಾತನಾಡುತ್ತ ಅಲ್ಲಿಯ ಅವಶ್ಯಕ, ಅನವಶ್ಯಕ, ವಿಚಾರಗಳನ್ನು ಚರ್ಚಿಸಿ ಪರಿಷ್ಕರಿಸಬೇಕಾದ ವಿಚಾರಗಳ ಬಗ್ಗೆಯೂ ಮಾತನಾಡಿದೆ. ಅದೊಂದು ಉಡಾಫೆಯ ಉಪನ್ಯಾಸವಾಗಿರಲಿಲ್ಲ. ಆದರೆ ಅಲ್ಲಿ ಪ್ರಬಂಧದ