ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೩

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೪೩ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೭


◼ ವಂಚನೆಗೊಳಗಾದವರ ಪ್ರತಿನಿಧಿಯ ಧ್ವನಿ:

ತಾವು ಬರೆದ ಗೌರ್ಮೆಂಟ್ ಬ್ರಾಹ್ಮಣ ಓದಿದೆ. ಸಹಸ್ರಾರು ವರ್ಷಗಳಿಂದ
ವಂಚನೆಗೊಳಗಾದ ಪ್ರತಿನಿಧಿಯಾಗಿ, ನೋವು ನಲಿವುಗಳಿಗೆ ಧ್ವನಿಯಾಗಿದೆ ನಿಮ್ಮ ಸಾಹಿತ್ಯ.

ವಾಯ್ ಎಂ.ಮಾದಾರ್ ಧಾರವಾಡ ೧೭.೧೨.೧೨೯೪

◼ ಅಸಲೀ ಅನುಭವಗಳು:

ಗೌರ್ಮೆಂಟ್ ಬ್ರಾಹ್ಮಣ ಡಾ. ಅರವಿಂದ ಮಾಲಗತ್ತಿಯವರ ಆತ್ಮ ಕಥೆ.
ಮರಾಠಿಯಲ್ಲಿ ಈ ಮೊದಲು ಪ್ರಕಟವಾದ....ಮಾದರಿಯಲ್ಲಿ ಬಂದ ಕನ್ನಡದ ಮೊತ್ತ
ಮೊದಲ ಆತ್ಮ ಕಥೆಯಿದು.

ಸ್ವಗತವಾಗಿ ಲೇಖಕರು ನೇರವಾಗಿ ಬೆತ್ತಲಾಗಿಸುವ ಪ್ರತಿಯೊಂದು ಪ್ರಕರಣಗಳು
ಅವರ ಅಸಲೀ ಅನುಭವಗಳು ಶೋಷಣಿ ಅಸ್ಪಶ್ಯತೆಯ ಕರಾಳತೆಯನ್ನು ಅರ್ಥಪೂರ್ಣವಾಗಿ
ಧ್ವನಿಸುತ್ತವೆ.ಲೇಖಕರು ಮುಕ್ತಾಯದ ಮೊದಲು 'ಬದುಕು ತೆರೆದ ಪುಸ್ತಕದಂತಿರಬೇಕು'
ಎಂದರೂ ಬರೆಯಲಾಗದ ಬರೆಯಲಾರದ ಇನ್ನೂ ಅನೇಕ ರಹಸ್ಯಗಳಿವೆ ಎನ್ನುವ ಮೂಲಕ
ಕುತೂಹಲ ಕೆರಳಿಸುತ್ತಾರೆ.

ತರಂಗ ಪತ್ರಿಕೆ

ದೇರ್ಲ ಡಿಸೆಂಬರ್ ೧೯೯೪

◼ ಗೌರ್ಮೆಂಟ್ ಬ್ರಾಹ್ಮಣ: ದಲಿತ ಜನಾಂಗದ ಇತಿಹಾಸ

ನಿಮ್ಮ ಪರಿಚಯವಿಲ್ಲದಿದ್ದರೂ 'ಗೌರ್ಮೆಂಟ್ ಬ್ರಾಹ್ಮಣ' ಎಂಬ ಪುಸ್ತಕ ಓದಿ
ತುಂಬಾ ಸಂತೋಷವಾಯಿತು... ಇಲ್ಲಿಯ ಪ್ರಸಂಗಗಳು ದಲಿತ ಜನಾಂಗದ ಸಹೋದರ
ಸಹೋದರಿ ಬಂಧು ಬಾಂಧವರ ಒಂದೊಂದು ಇತಿಹಾಸವಾಗಿವೆ.

ಸಂಪಾದಕರ: ಪಂಪಣ್ಮ ಟಿ.

ಟೈಗರ್ ಪತ್ರಿಕೆ. ಹೊಸಪೇಟೆ ೨೩.೨.೯೫