ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೪

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೪೪ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೨೮

ಗೌರ್ಮೆಂಟ್ ಬ್ರಾಹ್ಮಣ


  • ನಿಮ್ಮನ್ನು ನೋಡಬೇಕು ಮಾತನಾಡಿಸಬೇಕು ಅನಿಸ್ತು:

ಗೌರ್ಮೆಂಟ್ ಬ್ರಾಹ್ಮಣ... ಓದಿ ಮುಗಿಸಿದೆ ಓದುತ್ತಿದ್ದಂತೆ ನಿಮ್ಮ
ಪರಿಚಯವನ್ನು ಮತ್ತಷ್ಟು ಹತ್ತಿರವಾಗಿಸಿಕೊಳ್ಳಬೇಕೆನಿಸುತಿತ್ತು. ಕೆಲವೊಂದು ಕಡೆ
ಖುಷಿಯಾಗುತ್ತಿತ್ತು ಮತ್ತೆ ಸಿಟ್ಟು ಬರುತ್ತಿತ್ತು, ಮತ್ತೆ ಬೇಸರವಾಗುತ್ತಿತ್ತು. ಇದೆಲ್ಲಕ್ಕೂ
ಕಾರಣರಾದ 'ಗೌರ್ಮೆಂಟ್ ಬ್ರಾಹ್ಮಣ'ರನ್ನು ನೋಡಬೇಕು, ಮಾತನಾಡಿಸಬೇಕು ಕಡೆ
ಪಕ್ಷ ಅವರಿಗೆ ಪತ್ರಿಸಬೇಕು ಅನಿಸ್ತು... ನನ್ನ ಜೀವ ತಿನ್ನುವ ಬಾಳೆ ಎಲೆ, ಸತ್ತ ಕುರಿ...
ಓದಿ'ಅತ್ತೆ'ಸಾರ್.

ಯೋಗೀಶ್ ಜಿ.ಭಟ್
ಸಾಗರ, ೮.೧.೯೫

  • ರೋಮಾಂಚನಗೊಳಿಸಿದ ಕೃತಿ:

ನನಗಂತೂ ಹೃದಯ ಬಡಿತ ಹೆಚ್ಚಿಸಿ ರೋಮಾಂಚನಗೊಳಿಸಿದ ಕೃತಿಯಿದು...
ಈ ಕೃತಿ ಎಲ್ಲ ಕಡೆ ದೊರೆಯುವಂತೆ ಮಾಡಿದರೆ ದಲಿತರಿಗೆ ಬಿಲಿಯನ್ ಡಾಲರ್ಗಳಷ್ಷು
ಸಹಾಯ ಮಾಡಿದ ಹಾಗೆ ಆಗುವುದರಲ್ಲಿ ಅನುಮಾನವಿಲ್ಲ. ಮಾನವೀಯ ಮೌಲ್ಯಗಳನ್ನು
ಎತ್ತಿ ಹಿಡಿಯುವ ಗೌರ್ಮೆಂಟ್ ಬ್ರಾಹ್ಮಣ ನಮ್ಮೆಲ್ಲರ ಮನೆಗೆ ಬೇಕಾಗಿದೆ.
ಹಣ,ರಕ್ತಪಾತ,ಕಾನೂನುಗಳಿಲ್ಲದೆ ಕೇವಲ ಸಾಹಿತ್ಯದ ಮೂಲಕ... ತಾನು
ಅನುಭವಿಸಿದ ದುಃಖ ದುಮ್ಮಾನಗಳು ಮತ್ತು ಅಪಮಾನಗಳನ್ನು ಬಿಚ್ಚು ಮನಸ್ಸಿನಿಂದ
ಆತ್ಮ ಚರಿತ್ರೆ ಬರೆಯುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಮನ
ಪರಿವರ್ತನೆಗೊಳಿಸುವ ಉತ್ತಮ ಕೃತಿ... ದಲಿತರ ನೋವಿನ ಸಂಕೇತವಾಗಿ ಹೊರಬಂದ
ಕೃತಿಯಿದು.

ಎನ್. ವೆಂಕಟೇಶ್
ತ್ಯಾಗರಾಜನಗರ,ಚಳ್ಳಕೆರೆ ೩೧.೧.೯೪

  • Will Power ಗಳಿಸಿಕೊಡುವ ಕೃತಿ:

ನಿಮ್ಮ ಕೃತಿ ಶೋಷಣೆಗೆ ಒಳಗಾದ ದಲಿತ ಹಿಂದುಳಿದ ಮತ್ತು ಎಲ್ಲ ವರ್ಗದ
ಜನರಿಗೆ 'ಗೌರ್ಮೆಂಟ್ ಬ್ರಾಹ್ಮಣ' Will Power ಗಳಿಸಿಕೊಡುತ್ತದೆ.ಸಾಹಿತ್ಯದಲ್ಲಿ
ಇದೊಂದು ಕ್ರಾಂತಿಕಾರಕ ಬೆಳವಣಿಗೆ... ನಿಮ್ಮ ತನ ಕನ್ನಡಿಗರಿಗೆ ಸ್ಪೂರ್ತಿಯ ಸೆಲೆಯಾಗಲಿ.

ಎನ್.ವೆಂಕಟೇಶ್
ಮೈಸೂರು ೧೭.೨.೯೬