ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೨

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೩೨ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಗೌರ್ಮೆಂಟ್ ಬ್ರಾಹ್ಮಣ


ಬೆದೆಗೆ ಬಿದ್ದ ಎಮ್ಮೆ ಮತ್ತು ಓಡಿ ಬಂದ ಕೋಣ

ಕಾಗೆ ಗೂಬೆ ನಾಯಿ ಕತ್ತೆ ಕುರಿ ಕೋಣ ಇವೆಲ್ಲ ವಿಶ್ವಾಮಿತ್ರನ ಸೃಷ್ಟಿಯಾದರೆ, ಪಾರಿವಾಳ ಕುದುರೆ ಗೊವು ಇಂಥವೆಲ್ಲ ವಸಿಷ್ಠರ ಸೃಷ್ಟಿ ಎಂದು ಹೇಳುವುದಿದೆಯಲ್ಲವೇ? ಈ ಪುರಾಣ ಕಲ್ಪನೆಗಳು ಜನರಲ್ಲಿ ಎಷ್ಟೊಂದು ಬೇರು ಬಿಟ್ಟಿವೆ ಎಂದರೆ, ಬೇರು ಸಹಿತ ಕಿತ್ತು ಹಾಕಿದ್ದೇವೆ ಎಂದರೂ, ಕರಿಕಿಯಂತೆ ಮತ್ತೆ "ಪುದುಕ್ಕನೆ” ಎದ್ದು ನಿಲ್ಲುವಂಥ ಪ್ರವೃತ್ತಿಉಳ್ಳಂಥವು.

 
       ಕೆಲವರು ಹೀಗೂ ಹೇಳುವುದಿದೆ:
       ಪ್ರಾಣಿ ಪಕ್ಷಿ ಸಸ್ಯಗಳಲ್ಲಿ
       ಎಷ್ಟೊಂದು ಜಾತಿಗಳಿಲ್ಲ ನೋಡಿ
       ಮನುಷ್ಯರಲ್ಲಿ ಮಾತ್ರ ಜಾತಿ ಇಲ್ಲ ಎಂದರೆ ಹೇಗೆ?
       ಸ್ವಲ್ಪ ಆಲೋಚನೆ ಮಾಡಿ
       ದನ ನಾಯಿ ಕತ್ತೆ ಹುಲಿಗಳಲ್ಲಿ
       ಬೆಕ್ಕು ಹಂದಿ ನರಿ ಇಲಿಗಳಲ್ಲಿ
       ಜಿಂಕೆ ಮಂಗ ಮೀನುಗಳಲ್ಲಿ
       ಎಷ್ಟೊಂದು ಜಾತಿಗಳಿವೆ ಅಂತೆಯೇ ಮನುಷ್ಯನಲ್ಲಿ -
         ಬಿಳಿ ಜನರು, ಕರಿಜನರು, ಗಿರಿಜನರು, ಹರಿಜನರು, ಚೀನಿ, ಜಪಾನಿ, ತಿರುಕ
         ಮಂಗೋಲಿ, ಆರ್ಯ, ದ್ರಾವಿಡ, ಬ್ರಾಹ್ಮಣ, ಶೂದ್ರ

[ಬ್ರಾಹ್ಮಣ ಬಂಡಾಯ]

ಹೌದು, ಸೂಕ್ಷ್ಮವಾಗಿ ವಿಚಾರ ಮಾಡಿ ನೋಡಿದರೆ ಪಕ್ಷಿ, ಮೀನುಗಳಲ್ಲಿಯೇ ಸಾಕಷ್ಟು ವಿಧಗಳಿವೆ. ಒಂದೇ ತರಹದ ಮೀನು, ಪಕ್ಷಿಗಳೆಲ್ಲ ಒಂದೇ ಕಡೆಗೆ ವಾಸಿಸುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಮೀನಿನಂತಹ ಒಂದು ಪ್ರಾಣಿಯಲ್ಲಿಯೇ ಹಲವಾರು ಜಾತಿಗಳಿದ್ದು, ಅವು ಜಾತಿಯನ್ನು ಆಯ್ದುಕೊಂಡು ಹೋದಂತೆ, ಮನುಷ್ಯನೂ ಕಾಯ್ದುಕೊಂಡು ಹೋಗಬೇಕು ಎನ್ನುವುದಾದರೆ, ಆತನಿಗೆ ಬುದ್ದಿವಂತ ಪ್ರಾಣಿ ಎಂದು ಕರೆಯುವುದಾದರೂ ಏತಕ್ಕೆ? ಈ ರೀತಿ ಮನುಷ್ಯನಲ್ಲಿ ಮೇಲು ಕೀಳು ಎಂದು ಭೇದ ಮಾಡಿ ಬದುಕುವುದೇ ಬುದ್ಧಿವಂತಿಕೆಯೆ? ಇಪ್ಪತ್ತನೆಯ ಶತಮಾನದಲ್ಲಿಯೂ ಈ ರೀತಿ