ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೪೭

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೪೭ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

ಸತ್ತ ಕುರಿಗಳು ಮತ್ತು ಮಾಂಸದ ಮಾರಾಟ

೩೧

ಕರುಳು ಒತ್ತುತ್ತಿರುವಾಗ ಕೊನೆಗೆ ತುದಿಗೆ ಬಂದದ್ದು ಗೊತ್ತೇ ಆಗದ ಕರುಳ ಒಳಗಿರುವ
ಮಲ "ಭುದುಗ್ಗ್‌ನೇ"ಜಿಗಿದು ಹೊರಕ್ಕೆ ಬರುತ್ತಿತ್ತು. ಆಗ ನೀರು ಹಾಕಲು ಕೆಳಗೆ ಕುಳಿತವನ
ತಲೆ, ಮುಖ, ಮೈಯೆಲ್ಲಾ ಅಭಿಷೇಕವೇ! ನಿಂತು ಒತ್ತುವವ ಕೆಲವೊಮ್ಮೆ ಕರುಳಿಗೆ ಮುಳ್ಳೋ
ಕಡ್ಡಿಯೋ ಚುಚ್ಚಿ ರಂಧ್ರ ಮಾಡಿದಾಗ ಮಲ ಚಿಲ್ಲನೇ ಚಿಮ್ಮುತ್ತಿತ್ತು. ಆಗ ಮುಂದೆ
ಕುಳಿತವನ ಬಾಯಿ, ಮುಖ ಎಲ್ಲವೂ ತುಂಬುತ್ತಿತ್ತು.

ಹೀಗೆ ಕೆಲಸದಲ್ಲಿಯೇ ಆಟವು ನಡೆಯುತ್ತಿತ್ತು. ಆ ಮಲದ ದಡ್ಡಿಯ ವಾಸನೆ
ಸಹಿಸಿ ಸಹಿಸಿ ಮೂಗು ಹೊಸ ಗಾಳಿಯ ವಾತಾವರಣವನ್ನೇ ಮರೆತಿತ್ತು. ಎಷ್ಟೋ ಬಾರಿ
ನೀರು ಹಾಕುವವನೇ ಮುಳ್ಳಿನಿಂದ ತೂತು ಮಾಡಿ ಕರುಳಿಂದ ಮಲ ಒತ್ತುವಾಗ
ಜಾಗೃತನಾಗಿರುತ್ತಿದ್ದ. ಅವನು ತಪ್ಪಿಸಿಕೊಂಡರೂ ಗೀರುವಾಗ ಕೈ ಬಿಡುವದಾದರೂ ಹೇಗೆ?
ಆಗ ಆ ಕರುಳನ್ನೇ ಹಿಡಿದುಕೊಂಡು ದಡ್ಡಿಯ ತುಂಬೆಲ್ಲಾ ಓಡಾಡಿ, ಅವನ ಮೈಮೇಲೆ
ಎರಚುವಂತಹ ಕೆಲಸ ನಡೆಯುತ್ತಿತ್ತು. ಹೀಗೆ ಆ ಕುರಿಯ ಮಲ, ಕರುಳುಗಳೊಂದಿಗೆ
ನಡೆದ ಚೆಲ್ಲಾಟ, ಮಾವ ನೋಡಿದರೆ ಬೈದು ಬಿಡಿಸಿ ಬಿಡುತ್ತಿದ್ದ.

ದಡ್ಡಿಯಲ್ಲಿ ಹೆಚ್ಚು ಜನಗಳಿಗೆ ಬಿಡುತ್ತಿರಲಿಲ್ಲ. ಕುರಿಯ ಗುದದ್ವಾರದ ಕರುಳಿನ
ಭಾಗ (ಪೇರುಗಳು) ಸ್ವಲ್ಪ ಅಗಲವಾಗಿರುತ್ತಿತ್ತು. ಅದನ್ನು ಎರಡೂ ಕೈಯಿಂದ ಹಿಗ್ಗಿಸಿ,
ಬಾಯಿ ತುಂಬಾ ನೀರು ತುಂಬಿಕೊಂಡು, ಕರುಳಿನ ಗುದದ್ವಾರಕ್ಕೆ ಹಿಡಿದು ಪಿರ್‌ ರ್‌......
ಎಂದು ಬಾಯಿಯಲ್ಲಿಯ ನೀರನ್ನು ಅದರಲ್ಲಿರುವ
ಬಿಟ್ಟು, ಕರಳು ಹೀರಿ ಹೀರಿ ಅದರಲ್ಲಿರುವ
ಮಲ ಹೊರಕ್ಕೆ ತೆಗೆಯುವ ಕೆಲಸವೂ ನಡೆಯುತ್ತಿತ್ತು.

ಮಾಂಸದ ಗುಪ್ಪೆಗಳು ಕೈ ತೂಕದಲ್ಲಿ ಹಾಕಲಾಗುತ್ತಿತ್ತು. ಮಾವ ಎಲ್ಲಾದರೂ
ಹೋದರೆ ನಾನೇ ಅಲ್ಲಿಯ ಮಾಲೀಕ. ಗುಪ್ಪೆ ದೊಡ್ಡದಿದ್ದರೆ ಎಂಟು ಆಣೆ. ಚಿಕ್ಕದಿದ್ದರೆ
ನಾಲ್ಕು ಆಣೆಗೆ ಮಾರಲಾಗುತ್ತಿತ್ತು. ತೆಗೆದುಕೊಂಡು ಹೋಗುವವರೆಂದರೆ ನಮ್ಮ ಕೇರಿಯಲ್ಲಿ
ಇರುವ ಜನಗಳೇ. ಮಾದಿಗರು ಮಾಚಗಾರರು ಸಮಗಾರರು, ಹೆಚ್ಚೆಂದರೆ ಲಂಬಾಣಿಗರು.
ಮಾರಾಟ ಮಾಡುವಾಗ ಹೆಚ್ಚಿನ ಶ್ರಮವೆಲ್ಲಾ ನೊಣ ಓಡಿಸುವುದಕ್ಕೇ ಹೋಗುತ್ತಿತ್ತು.
ನೊಣವೆಂದರೆ ಒಂದೇ ಎರಡೇ? ನೊಣದಲ್ಲಿಯೇ ಎಷ್ಟು ಜಾತಿ ನೊಣಗಳವು! ಸದಾ
ನಮ್ಮ ಕಣ್ಣೆದುರಿಗಿದ್ದ ನೊಣಗಳು, ಕುಡ್ಡು ನೊಣಗಳು, ಹಸಿರು ನೊಣಗಳು, ದೊಣ್ಣೆ
ನೊಣಗಳು..... ಇವು ಓಡಿಸುವಾಗ ಬೇಸರವಾಗಿ, ಸಿಟ್ಟು ಬಂದು ಅಂಗೈಯಿಂದಲೇ
"ಪಿಚಕ್‌" ಎಂದು ಹೊಡೆದು ಆ ಮಾಸಂದ ಗುಪ್ಪೆಗಳ ಮಧ್ಯದಲ್ಲಿಯೇ ಕೊಂದು ಬಿಡುತ್ತಿದ್ದೆ.
ಚಾಪೆಗೆ ಅಂಟಿದ ಕುರಿಯ ರಕ್ತ, ಜೊತೆಗೆ ಈ ನೊಣದ ರಸಿಕೆ ಸೇರಿ ಹೋಗುತ್ತಿತ್ತು.

ನಾನೇ ಮಾಲೀಕನಾಗಿ ಕುಳಿತಾಗ ಸ್ವಾರಸ್ಯಕರವಾದ ಘಟನೆಗಳು ನಡೆಯುತ್ತಿದ್ದವು.
ಮಾಂಸದ ಗುಪ್ಪೆ ತೆಗೆದುಕೊಂಡು ಹೋಗಲು ಬಂದವರು ಇವನೇನು ಚಿಕ್ಕವನೆಂದು ಹಾಗೆ