ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೬

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೫೬ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಗೌರ್ಮೆಂಟ್ ಬ್ರಾಹ್ಮಣ


“ಓಕುಳಿ” ಎಂಬ ಈಸ್ಟಮನ್ ಕಲರ್ ಚಿತ್ರ


ದಲಿತ ಕೇರಿಗೂ ಊರ ಸಂಪ್ರದಾಯಗಳಿಗೂ ಆಶ್ಚರ್ಯಕರವಾದ ರೀತಿಯಲ್ಲಿ
ಸಂಬಂಧಗಳಿವೆ. ಈ ಸಂಬಂಧಗಳು ದಲಿತರಿಗೆ ಮಾರಕವಾಗಿಯೂ ದಲಿತೇತರಿಗೆ
ಪೂರಕವಾಗಿಯೂ ಕೆಲಸ ಮಾಡುತ್ತವೆ. ಊರಿನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ
ದಲಿತರಿಗೆ ಅವಕಾಶ ಕೊಡಲಾಗಿದೆ ಎನ್ನುವ ನೆಪದಲ್ಲಿ ಅವರ ಬದುಕನ್ನು ಅಡಕೊತ್ತಿನಲ್ಲಿಟ್ಟು,
ಅಡಕೆಯಂತೆ ಕತ್ತರಿಸುತ್ತಾರೆ. ಈಗ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಳ ದರ್ಜೆಯ
ನೌಕರರಾಗಿ ಭರತಿಯಾದಂತೆ ಹಿಂದೆ ಸಾಂಪ್ರಾದಾಯಿಕ ಚಾಕರಿ ಕೆಲಸಗಳಿಗೆ
ಭರ್ತಿಯಾಗುತ್ತಿದ್ದರು. ಅಂತಹ ಮನ ಕೆದಕುವ ಸಂಪ್ರದಾಯವೊಂದನ್ನು ಇಲ್ಲಿ
ನಿವೇದಿಸಬಯಸುವೆ.

ನಮ್ಮ ಕೇರಿಯ ಹೆಂಗಸರಿಗೆ ಶ್ರಾವಣ ಮಾಸದ ಓಕುಳಿ ಎಂದರೆ ಕೆಲವರಿಗೆ ಬಲು
ಹಿಗ್ಗು-ಕುಗ್ಗು- ಸುತ್ತಮುತ್ತಲಿನ ಊರುಗಳಲ್ಲಿ ಬಿದರು ಕುಂದಿಯ ಓಕುಳಿ ಎಂದರೆ
ಪ್ರಸಿದ್ಧವಾದದ್ದು. ಈ ಸಂಪ್ರದಾಯದಲ್ಲಿ ಪಾಲುಗೊಳ್ಳುವವರು ನಮ್ಮ ಕೇರಿಯ ಹೆಂಗಸರೇ
ಆಗಿದ್ದರು.

ಸಂಪ್ರದಾಯದ ನಡಾವಳಿ ಹೀಗಿದೆ. ದಲಿತ ಹೆಂಗಸರು ಕುಪ್ಪಸವನ್ನು ಕಳೆದು,
ಅಂಡುಗಚ್ಚೆ ಹಾಕಿದ ಸೀರೆಯನ್ನು ಉಟ್ಟಿರಬೇಕು. ಅಂದರೆ ನಡು ಭಾಗಕ್ಕೆ ಮಾತ್ರ ಸೀರೆ
ಸುತ್ತಿದ್ದು ಸೆರಗು ತಲೆ ಮೇಲೆ ಬಂದಿರುತ್ತದೆ. ಇವರ ಕೈಯಲ್ಲಿ ನೀಳವಾದ ಮಾರುದ್ದದ
ಲಕ್ಕಿಯ ಹತ್ತಾರು ಜಬರಿಗಳಿರುತ್ತವೆ. ಇವರ ವಿರುದ್ಧ ಇನ್ನೊಂದು ಬಣ, ಇದರಲ್ಲಿ
ದಲೀತೇತರ ಹಾಗೂ ಬ್ರಾಹ್ಮಣೇತರರಿಂದ ಕೂಡಿದ ಗಂಡಸರು ಮಾತ್ರ ಇರುತ್ತಿದ್ದು,
ಅಂಡಗಚ್ಚೆ ಹಾಕಿದ ಧೋತಿಯನ್ನು ಉಟ್ಟಿರುತ್ತಾರೆ. ಕೈಯಲ್ಲಿ ರ್‍ಯಾಳದಿಂದ ಅಥವಾ
ಸೆರೆಯಿಂದ ಲೇಪಿತವಾದ ಜೋಳಿಗೆ ಇರುತ್ತದೆ. ಈ ಗಂಡಸರಲ್ಲಿ ಸಾಮಾನ್ಯವಾಗಿ ಊರ
ಪ್ರಮುಖ, ಪುಂಡರೇ ಹೆಚ್ಚು. ದೇವಾಲಯದ ಎದುರು ಸಾಮಾನ್ಯವಾಗಿ ಈಗಲೂ ಕೆಲವೆಡೆ
ಹಾಳುಬಿದ್ದ ಹೊಂಡಗಳನ್ನು ಗಮನಿಸಬಹುದು. ಈ ಹೊಂಡಗಳ ಸುತ್ತಮುತ್ತಲೂ
ಕ್ರೀಡೆಯಾಗಿ ನಡೆಯುವುದು ಓಕುಳಿ, ಗಂಡಸರು ಅರಿಶಿಣ ಕುಂಕುಮಗಳಿಂದ ಕೂಡಿದ
ಹೊಂಡದ ನೀರು ಜೋಳಿಗೆಯಲ್ಲಿ ತಂದು ಹೆಂಗಸರಿಗೆ ಹೊಡೆಯುತ್ತಾರೆ. ಕೈಯಲ್ಲಿ ನೀಳವಾದ
ಜಬರಿಯನ್ನು ಹಿಡಿದು ನಿಂತ ಹೆಂಗಸರು ಈ ನೀರಿನ ಹೊಡೆತದಿಂದ ತಪ್ಪಿಸಿಕೊಂಡು