ನನ್ನ ಜೀವ ತಿನ್ನುವ ಬಾಳೆ ಎಲೆ ೧೦೭
ತೊಳೆಯುವಿದಿಲ್ಲ. ಅತಿ ಸುಲಭದ ಕೆಲಸ. ಒಂದು ವೇಳೆ ತಟ್ಟೆಯಲ್ಲಿ ಊಟಕ್ಕೆಕುಳಿತರೆ, ನಾಲ್ಕು ಚಿಕ್ಕ ಬಟ್ಟಲು ಒಂದು ದೊಡ್ಡ ತಟ್ಟೆ ಬೇಕು . ಅಷ್ಷೆಲ್ಲಾ ತೊಳೆಯುವುದು, ಕೊಂಡು ತರುವುದು ಯಾರಿಗೆ ಬೇಕು ? ಎಂದಿರಬೇಕು ಎನ್ನುವ ಸಂದೇಹ ಈ ಸಂದೇಹ ಬಂದದ್ದು ನಾನು ಮಂಗಳೂರಿನಲ್ಲಿ ಬಾಳೆಲೆ ಬಿಟ್ಟು ಪುನಃ ತಟ್ಟೆಯ ಊಟಕ್ಕೆ ಕೈಹಾಕಿದಾಗಲೇ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಪಾಠ ಮಾಡುತ್ತಿದ್ದೆ ಅದರಲ್ಲಿ ಬಾಳೆಲೆಯಲ್ಲಿಯ ಊಟದ ಪ್ರಸಂಗವಿದೆ. ಕ್ರೈಸ್ತ ಪಾದ್ರಿ ಮನೆಗೆ ಊಟಕ್ಕೆ ಬಂದಿರುತ್ತಾರೆ.ಅವನು ಹೊಲೆಯರಿಗಿಂತ ಕೀಳು ಎಂದು ಅವನಿಗೆ ಜಗಲಿಯ ಮೇಲೆ ಊಟಕ್ಕೆ ಕೂಡ್ರಿಸುವುದೇ ? ಯಾವ ಎಲೆಯಲ್ಲಿ ಊಟಕ್ಕೆ ಕೊಡಬೇಕು? ಯಾರು ಊಟಕ್ಕೆ ನೀಡಬೇಕು ? ಈ ವಿಷಯಗಳ ಕುರಿತು ಆ ಮನೆಯ ಪಾತ್ರಗಳಲ್ಲಿಯೇ ಚರ್ಚೆನೆಡೆಯುತ್ತದೆ. ನನಗೆ ವಿಸ್ಮಯ ತಂದದ್ದು ಬಾಳೆಎಲೆಯಲ್ಲಿಯೂ ಮನುಷ್ಯ ಜೀವಿ ಹೇಗೆ ಹಾಯಗಾರಿಕೆಯನ್ನು ಕಾಯ್ದುಕೊಂಡು ಹೋಗುತ್ತಾನೆ ಎನ್ನುವುದು. ಆ ವಿಷಯ ತಂದು ತರಗತಿಯಲ್ಲಿ ಚರ್ಚೆಗೆ ಬಿಟ್ಟೆ ಅಲ್ಲಿ ಇನ್ನಷ್ಷು ಹೊಸ ಬಗೆಯ ಪ್ರಾದೇಶಿಕವಾದ ವಿಷಯಗಳು ಬೆಳಕಿಗೆ ಬಂದವು. ಅಡಿಕೆಯ ಹಾಳೆಯಲ್ಲಿಯ ಊಟದ ಬಗೆಯ ಕುರಿತು , ಅಡಿಕೆಯ ಕುರಿತು, ಸಿರಿಯ ಕುರಿತು ಮುಂತಾಗಿ ಒಂದು ಎಲೆಯಲ್ಲಿಯೇ ಹಲವು ಭಾಗ ಮಾಡಿ ತುದಿಯ ಭಾಗ ಎಲ್ಲರಿಗಿಂತ ಶ್ರೇಷ್ಠ, ಅದು ದೇವರಿಗೆ ಅಥವಾ ಬ್ರಾಹ್ಮಣರಿಗೆ ಸೇರುತ್ತದೆ ಎನ್ನುವುದು ಎಲ್ಲಕ್ಕಿಂತ ಕೊನೆಯ ಭಾಗ ಹೊಲೆಯರಿಗೆ ಮೀಸಲು ಎನ್ನುವುದು ಇದು ತಕ್ಷಣ ನನ್ನನ್ನು ಪುರಾಣದ ಕಲ್ಪನೆಗೆ ಕರೆತಂದಿತು.ವಿಷ್ಣುವಿನ ತಲೆಯಲ್ಲಿ ಬ್ರಾಹ್ಮಣರು ಹುಟ್ಟಿದರು ಅದೇ ರೀತಿ ತೋಳಲ್ಲಿ ಕ್ಷತ್ರಿಯರು, ಹೊಟ್ಟೆಯಲ್ಲಿ ವೈಶ್ಯರು, ಪಾದದಲ್ಲಿ ಶೂದ್ರರು ಎಂಬಂತೆ ಎಲೆಯಲ್ಲಿಯೂ ಒಡೆದು ಹಂಚಿರುವುದು ನೋಡಿದರೆ ಪುರಾಣ ಕಲ್ಲನೆ ಪ್ರತಿಯೊಂದರಲ್ಲಿಯೂ ಹೇಗೆ ಸೂಕ್ಷ್ಮವಾಗಿ ಕೆಲಸ ಮಾಡಿದೆ ಎನಿಸುತ್ತದೆ. ಬಾಳೆಲೆಯ ಕುರುತು ತರಗತಿಯಲ್ಲಿ ಚರ್ಚೆಯಾದ ನಂತರ, ಬಿದ್ದು ಮತೊಂದು ಹೊಸ ಗಾಯ ಮಾಡಿಕೊಂಡ ಅನುಭವವಾಯಿತು. ಅನಂತರ ಮೂರು ವರ್ಷಗಳವರೆಗೆ ನಾನು ಮಂಗಳೂರು ನಗರದಲ್ಲಿ ಇದ್ದು ಕಳೆದ ದಿನಗಳನ್ನು ,ಬಾಳೆಲೆಯ ಪ್ರಸಂಗಗಳನ್ನು ಮೆಲುಕು ಹಾಕತೊಡಗಿದೆ.ಯಾರ್ಯರ ಮನೆಗೆ ನಾನು ಊಟಕ್ಕೆ ಹೋಗಿದ್ದೆ? ಯಾರ ಮನೆಯಲ್ಲಿ ನನಗೆ ಬಾಳೆಲೆಯ ಕೊನೆಯ ಭಾಗವನ್ನು ಊಟಕ್ಕೆ ಕೊಟ್ಟಿದ್ದರು ? ಅವರೂ ಅಂತಹದರಲ್ಲಿಯೇ ಊಟ ಮಾಡುತ್ತಿದ್ದರೆ ಅಥವಾ ನನಗಷ್ಷೇ ಆ ಎಲೆಯಲ್ಲಿ ಊಟಕ್ಕೆ ಹಾಕಿಕೊಟ್ಟಿದ್ದರೋ ಹೀಗೆಲ್ಲ ಪ್ರಶ್ನೆಗಳು ತಲೆಯಲ್ಲಿ ನಾಟ್ಯ ವಾಡತೊಡಗಿದವು ಆತ್ಮೀಯರನ್ನುಸಂದೇಹದಲ್ಲಿ ನೋಡುವಂತೆ ಮಾಡಿದವು. ಅವರು ಇನ್ನೊಮ್ಮೆ ಊಟಕ್ಕೆ ಕರೆದರೆ ಪರೀಕ್ಷಿಸೋಣ ಎಂದು ಮನಸ್ಸಿಗೆ ಸಮಾಧಾನ ಹೇಳಿದರೂ ಎದೆಯ ತುಡಿತ ಮಾತ್ರ ಕಡಿಮೆಯಾಗಲಿಲ್ಲ.