ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನಾನೊಬ್ಬ ಉತ್ತಮ ಕ್ಷಾರಿಕನಾದೆ

೧೧೩


ಪ್ರಯತ್ನಿಸುತ್ತಿದ್ದವು. ಮಶೀನ, ಕೂದಲನ್ನು ಬಿಟ್ಟು ಹೊರಗೆ ಬಾರದೆ ಇರುವುದರಿಂದ
ಹಿಡಿದು ಜಗ್ಗುತ್ತಿದ್ದರು. ಮಶೀನ್ ಬಾಯಿಗೆ ತಲೆಕೊಟ್ಟು ನಾವು, ಬೊಬ್ಬೆ ಹೊಡೆಯುತ್ತ
ಅದರೊಟ್ಟಿಗೆ ಜಾಲಾಡುತ್ತಿದ್ದೆವು.

ಆ ಮಶೀನ್ ತಂದೆಯ ಕೈಯಿಂದ ಅಣ್ಣಂದಿರ ಕೈಗೆ, ಅವರ ಕೈಯಿಂದ ನನ್ನ ಕೈಗೆ
ಸೇರಿದಾಗ, ನಾನು ಈ ಕೆಲಸದಲ್ಲಿ ಎಷ್ಟೊಂದು ಪಳಗಿದೆನೆಂದರೆ, ನಾನೂ ಒಬ್ಬ ಉತ್ತಮ
ಕ್ಷೌರಿಕನಾದೆ. ನಾನು ಎಂ. ಎ. ಓದುವಾಗ ನನ್ನ ಸ್ನೇಹಿತರು ಹೇಳುತ್ತಿದ್ದರು.

"ಈಗ ಸಂಪೂರ್ಣ ಕನ್ನಡ ಓದಿದವರಿಗೆ
ನೌಕರಿ ಸಿಗೋದಿಲ್ಲ. ಇನ್ನು ಜಾನಪದ ಕನ್ನಡ ಓದಿದ
ವರಿಗೆ ನೌಕರಿ ಸಿಗ್ತಾದ?ಜಾನಪದ ವಿಷಯ ಕಾಲೇಜಿನಲ್ಲಿ
ಇದ್ದರೆ ತಾನೇ ಅವು ನಮ್ಮನ್ನ ನೌಕರಿಗೆ ತಗೊಳ್ಳುದು............?"

ಎಂದು ಪ್ರಶ್ನಿಸುತ್ತಿದ್ದರು. ಅಂತೆಯೇ ಎಂ. ಎ. ಮುಗಿದಾಕ್ಷಣ ನನಗೆ ಕೆಲಸ
ಸಿಗಲಿಲ್ಲ. ಯು. ಜಿ. ಸಿ. ಯಿಂದ ಸಂಶೋಧನೆಯನ್ನು ಕೈಗೊಂಡೆ. ಆಮೇಲೆಯೂ ನನಗೆ
ಮೇಲಿನ ಪ್ರಶ್ನೆಯೇ ಕಾಡುತ್ತಿತ್ತು. ನನ್ನದು ಎಂ. ಎ. ಸಂಪೂರ್ಣ ಕನ್ನಡ ವಿಷಯ ಅಲ್ಲ.
ನಾನು ಜಾನಪದದ ವಿದ್ಯಾರ್ಥಿ. ನನಗೆ ನೌಕರಿ ಸಿಗದಿದ್ದರೆ?' ನನ್ನ ಮನಸ್ಸು ಆಗ ಎಷ್ಟರ
ಮಟ್ಟಿಗೆ ನಿರ್ಧಾರಕ್ಕೆ ಬಂದು ನಿಂತಿತ್ತು ಎಂದರೆ,

"PH.D.BARBERSIHIOP

ಎಂದು ದೊಡ್ಡದೊಂದು ಬೋರ್ಡು ಹಾಕಿ ಅಂಗಡಿಯನ್ನು ತೆರೆಯೋಣ ಎಂದು
ನಿರ್ಧರಿಸಿದ್ದೆ. ಅಷ್ಟರಮಟ್ಟಿಗೆ ನಾನು ಆ ಕೆಲಸದಲ್ಲಿ ಆತ್ಮವಿಶ್ವಾಸವನ್ನು
ಹೊಂದಿದವನಾಗಿದ್ದೆ.

ಅಷ್ಟೇ ಏಕೆ? ನಾನು ಎಂ. ಎ. ಓದಲು ಧಾರವಾಡಕ್ಕೆ ಬಂದಾಗ ನನ್ನ ಅಣ್ಣ
ಧಾರವಾಡದಲ್ಲಿ ಕ್ಷೌರಿಕರ ಅಂಗಡಿಗೆ ಹೋಗುತ್ತಿರಲಿಲ್ಲ. ನನ್ನಣ್ಣನಿಗೆ ಹಾಸ್ಟೇಲಿನ ಅವನ
ರೂಮಿನಲ್ಲಿ ನಾನೇ ಕಟಿಂಗ್ ಮಾಡುತ್ತಿದ್ದೆ. ವಿಷಯ ಯಾರಿಗೂ ಗೊತ್ತಾಗದಿರಲೆಂದು
ನನ್ನ ರೂಮಿನ ಕಿಟಕಿ ಬಾಗಿಲುಗಳನ್ನು ಭದ್ರಪಡಿಸುತ್ತಿದ್ದ. ಒಮ್ಮೆ ಹುಳುಕು
ಹೊರಬಿದ್ದಾಗ ಅವನ ಸ್ನೇಹಿತರಿಗೆ ಆಶ್ಚರ್ಯ! ಆಮೇಲೆ ಅವನ ಸ್ನೇಹಿತರೂ ಕಟಿಂಗ್
ಮಾಡಿಸಿಕೊಳ್ಳಲು ಹಂಬಲಿಸಿದರು. ಕತ್ತರಿ ಹಣಿಗೆ ಮತ್ತು ದಾಡಿ ಸೆಟ್ ಇದ್ದರೆ ಸಾಕು,
ಕಟಿಂಗ್ ಮುಗಿದು ಹೋಗುತ್ತಿತ್ತು.

ಎಂ. ಎ. ಮುಗಿಸಿ ಧಾರವಾಡದಿಂದ ಊರಿಗೆ ಬಂದಾಗ ನಾಯಿಂದರ ಮಲ್ಲನಲ್ಲಿ
ಕಟಿಂಗ್ ಮಾಡಿಸಿಕೊಳ್ಳಲು ಹೋದರೆ, ಆಗ ಆತ 'ರೀ' ಎಂದು ಸಂಬೋಧಿಸುತ್ತಾ ಕೇಳುತ್ತಿದ್ದ

ನೀವು ಮೊದ್ದು ಮನ್ಯಾಗ ಕಟಿಂಗ್ ಮಾಡ್ತಿದ್ರಂತ ಹೌದಾ?