ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಕ್ತಾಯದ ಮುನ್ನ........
೧೨೩

ನೀರಿನಲ್ಲಿ ಕಲ್ಲೆಸೆದು ಪರಿಣಾಮ ನೋಡುವುದಕ್ಕಿಂತ, ನನ್ನ ಮನದಂಗಳದ ನೀರಿನಲ್ಲಿಯೇ ಕಲ್ಲೆಸೆದು ಪರೀಕ್ಷಿಸುವಾಸೆ.

"ಬದುಕು ತೆರೆದ ಪುಸ್ತಕದಂತಿರಬೇಕು" ಎಂದು ನನ್ನ ಆತ್ಮೀಯರಲ್ಲಿ ಹೇಳಿ
ಚರ್ಚಿಸಿದ್ದೆ. ಆದರೆ ಅದು ಸಾಧ್ಯವಿಲ್ಲ? ಎಂದು ವಾದಸಿದವರೇ ಹೆಚ್ಚು. ಅದು ಹೇಗೆ
ಸಾಧ್ಯವಿಲ್ಲ? ಹಾಗಿದ್ದರೆ "ಪ್ರಾಮಾಣಿಕತೆ"ಗೆ ಅರ್ಥವೇನು? ಇಂತ ಹಲವಾರು ಪ್ರಶ್ನೆಗಳು
ಕಾಡಿದರೂ ಇದನ್ನು ಸುಳ್ಳಾಗಿಸಬೇಕು ಎಂಬ ಛಲ ನನ್ನಲ್ಲಿ ಬೇರೂರಿ, ನನ್ನ ಬದುಕಿನ
ಚಿತ್ರವನ್ನೇ ಬೆತ್ತಲಾಗಿಸಿ ನನ್ನವರೆದುರು ಹರಡಿದ್ದೇನೆ. ಆದರೆ ಮೇಲಿನ ಪ್ರಸಂಗ "ಬದುಕು
ತೆರೆದಿಟ್ಟ ಪುಸ್ತಕವಲ್ಲ" ಎನ್ನುವ ಮಾತಿಗೆ ರುಜು ಹಾಕುವಂತೆ ಒತ್ತಾಯಿಸುತ್ತಿದೆ.ನಾನು
ಆತ್ಮೀಯವಅಗಿ ಬಿಚ್ಚಿಟ್ಟ ಪ್ರಸಂಗಗಳನ್ನು ಅಸ್ತ್ರವಾಗಿಸಿಕೊಂಡು "ಬ್ಲಾಕ್ ಮೇಲ್"
ಮಾಡುತ್ತಿರುವ ಸ್ನೇಹಿತರೂ ನನ್ನುಡಿಯಲ್ಲಿಯೇ ಇದ್ದಾರೆ. ಇಂತಹವರನ್ನು ಕಂಡಾಗ
'ಅಯ್ಯೇ' ಎನಿಸುತ್ತದೆ. ಉಗುಳಲೂ ಬಾರದ ನುಂಗಲೂ ಬಾರದ ಪ್ರಸಂಗಗಳು
ಇರುವುದರಿಂದಲೇ, ಕೂದಲು ನೆರೆತಾಗ ಸಾವು ಸನಿಹಕ್ಕೆ ಬಂದಾಗ ಆತ್ಮಕಥೆಯಂತಹ
ನರವಣಿಗೆಗೆ ಮುಂದಾಗುತ್ತಾರೆನಿಸುತ್ತದೆ.ಹೆಮ್ಮೆ ತರುವ ಪ್ರಸಂಗಗಳನ್ನು ಹೇಳಿಕೊಳ್ಲುವಂತೆ
ಹೇಸಿಕೆ ತರಿಸುವ ಪ್ರಸಂಗಗಳಿದ್ದರೂ ಬಿಚ್ಚಿ ಬರೆಯಬೇಕೆನ್ನುವವ ನಾನು.

1

1